ಬೆಳವಂಗಲ ಪೋಲೀಸರ ಕಾರ್ಯಾಚರಣೆ–ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ
ದೊಡ್ಡಬಳ್ಳಾಪುರ:ದೊಡ್ಡಬೆಳವಂಗಲ ಹೋಬಳಿ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿಯ ಸ್ವಂತ ಜಮೀನನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪದ ಮೇಲೆ 66 ವರ್ಷದ ನರಸಪ್ಪ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇಲೆ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು ಸುಮಾರು 1ಲಕ್ಷ 68 ಸಾವಿರ ಮೌಲ್ಯದ 16 ಕೆಜಿ ಹಸಿ ಗಾಂಜಾ ಸೊಪ್ಪಿದ್ದ ಗಿಡಗಳನ್ನು,ವಶಪಡಿಸಿಕೊಳ್ಳಲಾಗಿದೆಗಾಂಜಾ ಬೆಳೆದ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.ದೊಡ್ಡಬೆಳವೆಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮೀ, ವೈದ್ಯಾಧಿಕಾರಿ ಅಮಿತ್ ಕಾರ್ತಿಕ್, ಸಿಬ್ಬಂದಿಗಳಾದ ಸುರೇಶ್, ಮಂಜುನಾಥ್, ರಾಮಕೃಷ್ಣ, ವಿಠಲ್ ಕುಮಾರ್, ಚಂದ್ರು ಮತ್ತಿತರರಿದ್ದರು.