--ಜಾಹೀರಾತು--

ಭಾರತೀಯ ಉದ್ಯಮ ಶೀಲತಾ ಅಭಿವೃದ್ಧಿ ಸಂಸ್ಥೆಯಿಂದ ತರಬೇತಿ ಶಿಬಿರ

On: December 19, 2025 10:09 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಭಾರತೀಯ ಉದ್ಯಮ ಶೀಲತಾ ಅಭಿವೃದ್ಧಿ ಸಂಸ್ಥೆಯಿಂದ ತರಬೇತಿ ಶಿಬಿರ

ದೊಡ್ಡಬಳ್ಳಾಪುರ:ಉದ್ಯಮ ಶೀಲತೆ ಕರಕುಶಲ ವಸ್ತು ತರಬೇತಿ ಶಿಬಿರ ಸೂಕ್ಷ್ಮ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (MSDP) ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಯಿಂದ ಆಸಕ್ತರಿಗೆ ನಗರದ ಸಿದ್ದಲಿಂಗಯ್ಯ ವೃತ್ತದ ಕ್. ಎಸ್. ಆರ್. ಟಿ. ಸಿ. ಬಸ್. ನಿಲ್ದಾಣದ ಮೊದಲ ಮಹಡಿಯಲ್ಲಿ ಶಿಬಿರ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ,ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಶ್ರೀಮತಿ ಲಲಿತ ರವರು ಮಾತನಾಡಿ ಉದ್ಯಮ ಶೀಲತೆಯು ಉದ್ಯೋಗ ಸೃಷ್ಟಿಸುತ್ತದೆ, ನಾವೀನ್ಯತೆಗಳನ್ನು ತರುತ್ತದೆ, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಜೀವನ ಮಟ್ಟವನ್ನು ಸುಧಾರಿಸುತ್ತದೆ; ಇದು ಕೇವಲ ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದಲ್ಲದೆ, ಸಮಾಜದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರುವ, ಸಮಸ್ಯೆಗಳನ್ನು ಪರಿಹರಿಸುವ ಮತ್ತು ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಇದು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ಸೃಜನಾತ್ಮಕ ಚಿಂತನೆಗೆ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಧಿಸಲು ಸಹಾಯ ಮಾಡುತ್ತದೆ.
ಸ್ವದೇಶಿ ಕಚ್ಚಾ ವಸ್ತುಗಳನ್ನು ಸಿದ್ದ ವಸ್ತುಗಳು ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸುವುದರಿಂದ ನಮ್ಮ ದೇಶ ಅಭಿವೃದ್ದಿ ಯಾಗುತ್ತದೆ.
ತರಬೇತಿಯಲ್ಲಿ ಕೌಶಲ್ಯದ ವಿಭಿನ್ನ ವಸ್ತುಗಳನ್ನು (ಬುಟ್ಟಿ, ಬಟ್ಟೆ, ಆಭರಣ, ಆಟಿಕೆ, ಮಡಿಕೆ, ಇತ್ಯಾದಿ) ರಚಿಸುವುದು, ಈ ಕಲೆಗಳನ್ನು 26 ದಿನಗಳು ತರಬೇತಿ ನೀಡಿ ಪ್ರಯೋಗಿಕವಾಗಿ ಸಿದ್ದ ವಸ್ತು ತಯಾರಿಕೆ ಕಲಿತವರಿಗೆ ನಂತರ ಮನೆಗೆ ಕಚ್ಚವಸ್ತುಗಳನ್ನು ಕೊಡುವುದಲ್ಲದೆ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಹಾಗು ಸ್ವಯಂ ಉದ್ಯೋಗ ಯೋಜನೆಯಡಿ ಆರ್ಥಿಕ ವಾಗಿ ಸಾಲದ ನೆರವು ನೀಡಲಾಗುವುದು ಎಂದರು.

ನಂತರ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಶ್ರೀಮತಿ ಅಂಬಿಕಾ ಮಾತನಾಡಿ ಸ್ವದೇಶಿ ವಸ್ತುಗಳ ಬಳಕೆಯೆಂದರೆ ದೇಶೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವುದು ಮತ್ತು ಬಳಸುವುದು, ಇದು ದೇಶದ ಆರ್ಥಿಕತೆ, ಉದ್ಯೋಗಗಳು, ಸಣ್ಣ ಗುಡಿ ಕೈಗಾರಿಕೆಗಳು ಮತ್ತು ಆತ್ಮನಿರ್ಭರ ಭಾರತದ ಗುರಿಗಳನ್ನು ಸಾಧಿಸಲು ಅತ್ಯಗತ್ಯ; ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ ಸ್ವದೇಶದ ವಸ್ತು ಬಳಕೆ ಯಿಂದ ಅರ್ಥಿಕ ಹಾಗು ಸ್ವಾವಲಂಬಿಗಳಾಗಬಹುದು. ಈ ತರಬೇತಿಯಲ್ಲೀ 55 ಜನ ಮಹಿಳೆಯರು ತರಬೇತಿ ಪಡೆಯುತ್ತಿದ್ದು ನಂತರ ಕಚ್ಚಾ ವಸ್ತುಗಳನ್ನು ಮನೆಗಳಿಗೆ ಕೊಟ್ಟು ಸಿದ್ದ ವಸ್ತುಗಳನ್ನು ನಾವೇ ತೆಗೆದುಕೊಂಡು ಮಾರ್ಕೆಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.

———————————————————————–
ಈ ತರಬೇತಿ ಕೇಂದ್ರವು ಈ ಕೆಳಗಿನ ಕೌಶಲ್ಯ ಅಭಿವೃದ್ಧಿ ತರಗತಿ ಕೋರ್ಸ್‌ಗಳನ್ನು ಆಯೋಜಿಸಿ ನಡೆಸುತ್ತದೆ. ತರಬೇತಿಯು ಯಶಸ್ವಿಯಾಗಿ ಮುಗಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಸಲಹೆ & ಮಾರ್ಗದರ್ಶನ ನೀಡಲಾಗುವುದು. ಅಭ್ಯರ್ಥಿಗಳಿಗೆ ಸಲಹೆ ಮತ್ತು ಆರ್ಥಿಕ ನೆರವನ್ನು ಸಹ ಪಡೆಯಲು ಮಾರ್ಗದರ್ಶನ ನೀಡುತ್ತೇವೆ.
1.ಟೈಲರಿಂಗ್ & ಎಂಬ್ರಾಯಡರಿ ತರಬೇತಿ – 3ತಿಂಗಳು
2.ಬ್ಯೂಟಿಷಿಯನ್ ತರಬೇತಿ – 3ತಿಂಗಳು
3.ಪೇಪರ್ ಆರ್ಟಿಕಲ್ ಮೇಕಿಂಗ್ ತರಬೇತಿ – 5 ದಿನಗಳು
4.ಸ್ಕಾರಿ ಎಂಬ್ರಾಯಡರಿ ತರಬೇತಿ – 3 ತಿಂಗಳು
5.ಹೋಂಮೇಡ್ ಚಾಪ್ಲೇಟ್ ಮೇಕಿಂಗ್ ತರಬೇತಿ – 15 ದಿನಗಳು
6.ಅಗರ್‌ಬತ್ತಿ ತಯಾರಿಕಾ ತರಬೇತಿ – 10 ದಿನಗಳು
7.ಆರ್ಟಿಫಿಷಿಯಲ್ & ಟೆರಾಕೋಟ್ ತರಬೇತಿ – 10 ದಿನಗಳು
8.ಹೂವಿನ ತೋರಣಗಳು(ಹಾರಗಳು) ತರಬೇತಿ – 10 ದಿನ ಕಾಲ ತರಬೇತಿಯನ್ನು ನೀಡಲಾಗುತ್ತೆ
ಚಂದ್ರಕಲಾ ತರಬೇತಿದಾರರು