ಡಿ.21 ರಂದು ಪಲ್ಸ್ ಪೊಲೀಯೋ ಅಭಿಯಾನಕ್ಕಾಗಿ ಜಾಗೃತಿ ಜಾಥ
ವಿಜಯಪುರ: ಡಿ.21 ರಂದು ಭಾನುವಾರ ನಡೆಯಲಿರುವ ಪಲ್ಸ್ ಪೊಲೀಯೋ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ರೋಟರಿ ಸಂಸ್ಥೆ ಹಾಗೂ ರೋಟರಿ ಶಾಲೆ ವಿಜಯಪುರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳ ಮೂಲಕ ಜಾಥಾ ಕಾರ್ಯಕ್ರಮ ನಡೆಸಿದರು.
ಪಟ್ಟಣದ ರೋಟರಿ ಶಾಲಾವರಣದಿಂದ ಆರಂಭವಾದ ಮೆರವಣಿಗೆಯಲ್ಲಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು, ಪಲ್ಸ್ ಪೊಲೀಯೋ ನಿರ್ಮೂಲನೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ರೋಟರಿ ಸಂಸ್ಥೆಯ ಅಧ್ಯಕ್ಷ ಚ.ವಿಜಯಬಾಬು ಅವರು ಮಾತನಾಡಿ, ಸಾರ್ವಜನಿಕರು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪಲ್ಸ್ ಪೊಲೀಯೋ ಲಸಿಕೆ ಹಾಕಿಸುವ ಮೂಲಕ, ಮಕ್ಕಳನ್ನು ಪೊಲೀಯೋ ರೋಗದಿಂದ ತಪ್ಪಿಸಿ, ದೇಶವನ್ನು ಪೊಲೀಯೋ ಮುಕ್ತ ದೇಶವನ್ನಾಗಿ ಮಾಡಲು ಸಹಕಾರ ನೀಡಬೇಕು ಎಂದರು. ಸಿದ್ದರಾಜು, ಕೆ.ಬಿ.ಎಸ್ ಬಸವರಾಜ್, ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.





