*ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಭೂ ಮಾಫಿಯ : ಅಂತರ್ ರಾಜ್ಯ ಜನರಿಂದ ಸರ್ಕಾರಿ ಭೂಮಿ ಕಬಳಿಸಿ ಭೂಮಾಫಿಯ*

ಕನ್ನಡ ನಾಡು ನುಡಿ ಭೂಮಿ ನಮ್ಮೆಲ್ಲರ ಜವಾಬ್ದಾರಿ” ಎಂದು ಧ್ವನಿ ಎತ್ತಿ ನ್ಯಾಯಕ್ಕಾಗಿ ಹೋರಾಟ ಮಾಡಿದ ತುಮಕೂರು ಶೆಟ್ಟಿಹಳ್ಳಿ ಶ್ರೀಮತಿ ಭಾಗ್ಯಮ್ಮ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಐಡಿ ಹಳ್ಳಿ ಹೋಬಳಿ ಮಾಳಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 36/37 ಸರ್ಕಾರದ ಭೂಮಿಯಾಗಿದೆ ಈ ಭೂಮಿಯಲ್ಲಿ ಸರ್ಕಾರದ ನಿಯಮನುಸಾರ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಆಂಧ್ರ ಪ್ರದೇಶ ರಾಜ್ಯದ ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಕರ್ನಾಟಕದ ರಾಜ್ಯದ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಭೂಮಿ ಕಬ್ಬಳಿಸಲು ಯತ್ನಿಸುತ್ತಿದ್ದಾರೆ.

ಈಗಾಗಲೇ ಆಂಧ್ರ ಪ್ರದೇಶ ರಾಜ್ಯದ 15 ಅರ್ಜಿದಾರರ ಅರ್ಜಿಗಳನ್ನು ಮಧುಗಿರಿ ತಸಿಲ್ದಾರವರು ತಿರಸ್ಕರಿಸಿದ್ದಾರೆ. ಆದರೆ ಅದನ್ನು 15 ಅರ್ಜಿದಾರರು ಸೇರಿ ಉಪ ವಿಭಾಗ ಅಧಿಕಾರಿಗಳು ನ್ಯಾಯಾಲಯ ಮಧುಗಿರಿ ರವರಿಗೆ ಮೇಲ್ಮನೆ ಸಲ್ಲಿಸಿರುತ್ತಾರೆ. ಇದಕೆ ಸಂಬಂಧಪಟ್ಟಂತೆ ಈ ಮೇಲ್ಮನೆಯನ್ನು ಪುರಸ್ಕರಿಸಿ ಮಾನ್ಯ ಅಧಿಕಾರಿಗಳು ಮಧುಗಿರಿ ತಹಶೀಲ್ದಾರ್ ರವರಿಗೆ ಸರ್ಕಾರದ ನಿಯಮದಡಿ ಮರು ಆದೇಶ ಮಾಡಲು ಸೂಚಿಸಿರುತ್ತಾರೆ. ಅದಕ್ಕಾಗಿ ಅಧಿಕಾರಿಗಳು ಕರ್ನಾಟಕದ ಅರ್ಜಿದಾರರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿದೆ ಎಂದು ಭಾಗ್ಯಮ್ಮ ಬಿ ಶೆಟ್ಟಿಹಳ್ಳಿ ಹೇಳಿದರು

ಕರ್ನಾಟಕದ ಪ್ರಜೆಗಳು ಭೂಮಿ ಇಲ್ಲದವರು ಸರ್ಕಾರದ ನಿಯಮನುಸಾರ ನಮೂನೆ 57ರಲ್ಲಿ ಅರ್ಜಿ ಹಾಕಿ ಸರ್ವೆ ನಂಬರ್ 36.37 ರಲಿ ಸುಮಾರು ವರ್ಷಗಳಿಂದ ಉಳಿಮೆ ಮಾಡುತ್ತಿದ್ದರು ಕೂಡ ಪಕ್ಕದ ರಾಜ್ಯದವರು ಗುಂಪು ಕಟ್ಟಿಕೊಂಡು ಬಂದು ಗೂoಡವರ್ತನೆ ತೋರಿ ಉಳಮೆ ಮಾಡುವರನ್ನು ತಡೆದು ಜೀವ ಭಯ ಹಾಕಿ ಓಡಿಸುತ್ತಿದ್ದಾರೆ.

ಅನುಸೂಯ ಲೇಟ್ ಗಂಗಣ್ಣ ಮೇದರಹಟ್ಟಿ ಮಧುಗಿರಿ ರವರು ಮಾಳಗುಂಡನಹಳ್ಳಿ ಸರ್ವೆ ನಂಬರ್ 36ಕೆ ಸರ್ಕಾರದ ನಿಯಮದಡಿ ನಮೂನೆ 57ರಲ್ಲಿ ಅರ್ಜಿ ಹಾಕಿಕೊಂಡು ಸುಮಾರು ವರ್ಷಗಳಿಂದ ಉಳುಮೆ ಮಾಡುತ್ತಿದ್ದರು ಆ ಜಮೀನಿಗೆ ಇಂಟಿ ನರಸೇಗೌಡರ ಕುಟುಂಬದವರು ಗುಂಪು ಕಟ್ಟಿಕೊಂಡು ಬಂದು ಅವಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೇ ಮಾಡಲು ಪ್ರಯತ್ನಿಸಿ ಉಳಿಮೆ ಮಾಡುವುದನ್ನು ನಿಲ್ಲಿಸಿ ಅಲ್ಲಿಂದ ಓಡಿಸಿರುತ್ತಾರೆ. ಅದಕ್ಕಾಗಿ ಇವತ್ತಿನ ದಿನ ಮಿಡಿಗೇಶಿ ಪೊಲೀಸ್ ಠಾಣೆಗೆ ಬಂದು ಪಿಟಿಷನ ಸಲ್ಲಿಸಿ ನ್ಯಾಯ ಒದಗಿಸಿಕೊಡಲು ಕೋರಲಾಗಿದೆ.

ಸಂಬಂಧಪಟ್ಟ ಅಧಿಕಾರಗಳು ತಕ್ಷಣವೇ ಗಮನಹರಿಸಿ ಕರ್ನಾಟಕದ ಜನತೆಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡದ ಕನ್ನಡ ನಾಡು ಆಸ್ತಿ ನುಡಿ ಸಂರಕ್ಷಣೆ ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿ ಆಗಿದೆ.ಎಂದು ಸಾಮಾಜಿಕ ಕಾರ್ಯಕರ್ತೆ ಶ್ರೀ ಮತಿ ಭಾಗ್ಯಮ್ಮ ಶೆಟ್ಟಿಹಳ್ಳಿ ಮನವಿ ಮಾಡಿದರು.

ವರದಿಗಾರರು : ಭರತ್ ಕೆ