ನಂದಗುಡಿ ಪೊಲೀಸ್ ಠಾಣೆಯ ಆವರಣದಲ್ಲಿರುವ ಎಂಟು ವಾಹನಗಳ ಹರಾಜು

ತಾವರೆಕೆರೆ: ಹೊಸಕೋಟೆ ತಾಲ್ಲೂಕಿನ ನಂದಗುಡಿ ಪೊಲೀಸ್ ಠಾಣೆಯ ಆವರಣದಲ್ಲಿ ವಾರಸುದಾರರು ಇಲ್ಲದೆ ಇದ್ದ ಎಂಟು ದ್ವಿಚಕ್ರವಾಹನಗಳನ್ನು ಎನ್‌ಸಿಆರ್ 156/2025 ರಲ್ಲಿ ನೋಂದಾಯಿಸಿಕೊಂಡು ಸರದಿ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತೆ. ಹೀರೋ ಮೇಷ್ಟ್ರು, ಹೋಂಡಾ ಡಿಯೋ, ಹೀರೋ ಮೇಷ್ಟ್ರು, ಬಜಾಜ್ ಡಿಸ್ಕವರ್, ಸುಜುಕಿ, ಬಜಾಜ್ ಪಲ್ಸರ್ ಎನ್ಎಸ್ 200, ಟಿವಿಎಸ್ ವಿಕ್ಟರ್, ಬಜಾಜ್ ಪಲ್ಸರ್ 150 ಈ ಎಂಟು ದ್ವಿಚಕ್ರ ವಾಹನಗಳು ಅಮಾನತ್ತು ಪಡಿಸಿಕೊಂಡಿರುವ ದ್ವಿಚಕ್ರವಾಹನಗಳನ್ನು ಬಹಿರಂಗ ಹರಾಜು ಮಾಡುವ ಸಲುವಾಗಿ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡಿರುತ್ತದೆ ಆದ್ದರಿಂದ ಎಂಟು ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಗಾಗಿ ಪತ್ರಿಕೆ ಮಾದ್ಯಮಗಳ ಮುಖಾಂತರ ತಿಳಿಸಲಾಗುತ್ತಿದೆ ಎಂದು ನಂದಗುಡಿ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶಾಂತರಾಮ ತಿಳಿಸಿದರು.