ಯೋಗಾಸನ ಛಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರದ ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಭಾಗಿ

ದೊಡ್ಡಬಳ್ಳಾಪುರ :ತಮಿಳುನಾಡಿನಲ್ಲಿ ನಡೆದ 18 ನೇ ಯೋಗಸನ ಛಾಂಪಿಯನ್ ಶಿಪ್ ಸೌತ್ ಇಂಡಿಯಾ 2024 ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರದ ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥೆ ಕುಮಾರಿ ನವ್ಯ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ15ರಿಂದ 20ವರ್ಷ ಬಾಲಕಿಯರ ವಿಭಾಗ ವರ್ಷ . ಆರ್ . ಪ್ರಥಮ ಸ್ಥಾನ
ಕೀರ್ತಿ . ಎ. ತೃತಿಯ ಸ್ಥಾನ ಪಡೆದಿದ್ದಾರೆ.
13-15 ಬಾಲಕಿಯರ ವಿಭಾಗದಲ್ಲಿ ಯಶಪ್ರದಾ.ಎಸ್.ಎಂ . ಪ್ರಥಮ ಸ್ಥಾನ
ಸಾಧನ . ಎನ್
ದ್ವಿತೀಯ ಸ್ಥಾನ,
9-12 ಬಾಲಕಿಯರ ವಿಭಾಗದಲ್ಲಿ
ಲಾಸ್ಯ ಎಂ. ಎನ್ .ಪ್ರಥಮ ಸ್ಥಾನ , ಪಾವನಿ.
ಎಸ್ ದ್ವಿತೀಯ ಸ್ಥಾನ. 6ರಿಂದ 8 ಬಾಲಕಿಯರ ವಿಭಾಗದಲ್ಲಿ , ಹರ್ಷಿಣಿ . ಎಸ್ ತೃತೀಯ ಸ್ಥಾನ
ಕೀರ್ತನ ಬಿ.ಎಸ್ ತೃತಿಯ ಸ್ಥಾನ.
9- 11 ಬಾಲಕರ ವಿಭಾಗದಲ್ಲಿ
ನಿರೂಪ್ ಗೌಡ .ಆರ್ ತೃತೀಯ ಸ್ಥಾನ ಪಡೆದಿದ್ದಾರೆ.
13- 16 ಬಾಲಕರ ವಿಭಾಗದಲ್ಲಿ ಪುನೀತ್ ಕೋಂಗಾಡಿ ಎನ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ತಾಲ್ಲೂಕಿನ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದು ಅಕಾಡೆಮಿ ಸಿಬ್ಬಂದಿವರ್ಗ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಯೋಗಪಟುಗಳನ್ನು ದೊಡ್ಡಬಳ್ಳಾಪುರದ ನವ್ಯ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಅಭಿನಂದಿಸಿದೆ.