ಸಂಗೀತದೊಂದಿಗೆ ಸೀಮಂತ ಕಾರ್ಯಕ್ರಮ
ವಿಜಯಪುರ :,ಬಸ್ ನಿಲ್ದಾಣದ ಬಳಿ ಇರುವ ಡ್ರೀಮ್ ಹಂಟರ್ಸ್ ಸ್ಟುಡಿಯೋದಲ್ಲಿ ದೇವನದೀಪ ಸಂಸ್ಥೆ, ಪರಿವರ್ತನಾ ಕಲಾ ಸಂಸ್ಥೆ, ದಾರಿದೀಪ ಪೌಂಡೇಶನ್ ಸಹಯೋಗದಲ್ಲಿ ಬಡ ಗರ್ಭಿಣಿ ಸ್ತ್ರೀಯರಿಗೆ ಸಂಗೀತದೊಂದಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವನಹಳ್ಳಿ ದಾರಿದೀಪ ಸಂಸ್ಥೆಯ ಕಾರ್ಯದರ್ಶಿ ದೀಪ. ವಿ. ರವರು ಮಾತನಾಡುತ್ತಾ
ಬಡವರಿಗೆ ಎಷ್ಟೋ ಜನಕ್ಕೆ ಈ ತರದ ಶಾಸ್ತ್ರ ಸಂಪ್ರದಾಯ ಬದ್ಧ ಕಾರ್ಯಕ್ರಮ ನೆರವೇರುವುದಿಲ್ಲ ಎಂಬ ಕಾರಣಕ್ಕೆ ನಮ್ಮೆಲ್ಲಾ ಸಂಸ್ಥೆಗಳ ಸಹಯೋಗದಲ್ಲಿ ಬಡ ಮಹಿಳೆಯರ ಸೀಮಂತ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಿ ಅವರಿಗೆ ಬಾಗೀನಾ ಅರ್ಪಿಸಿ ಶುಭ ಹಾರೈಸಿದ್ದು ನಮಗೆ ಸಂತಸ ತಂದಿದೆ ಎಂದು ಹೇಳಿದರು.
ದೇವನದೀಪ ಸಂಸ್ಥೆಯ ಅಧ್ಯಕ್ಷೆ ದೀಪಿಕಾ ದೇವರಾಜ್ ಮಾತನಾಡುತ್ತಾ ಸಮಾಜ ಸೇವೆಯ ವಿನೂತನ ಮಜಲುಗಳಲ್ಲಿ ಅದೆಷ್ಟೋ ಜನ ಬಡ ಹೆಣ್ಣು ಮಕ್ಕಳ ಕನಸು ಈ ಸೀಮಂತ. ಅಂತ ಕನಸನ್ನು ತವರು ಮನೆಯ ಉಡುಗೊರೆ ಎಂಬಂತೆ ನನಸು ಮಾಡಲು ಕಾರ್ಯಕ್ರಮ ಏರ್ಪಡಿಸಿ ಜೋಗುಳ,ತಾಯಿ- ಮಕ್ಕಳ ಹಾಡು , ಸುಮಧುರ ಸಂಗೀತದೊಂದಿಗೆ ಆಯೋಜನೆ ಮಾಡಿದಾಗ ಗರ್ಭಿಣಿಯರ ಮನದಾಳದಿಂದ ಬಂದ ಭಾವುಕ ಮಾತುಗಳಿಗೆ ಸಾರ್ಥಕತೆಯ ಭಾವ ನಮಗೆ ಲಭಿಸಿತು ಹಾಗಾಗಿ ನಿಮಗೆ ಹುಟ್ಟುವ ಮಕ್ಕಳು ಸುಲಲಿತವಾಗಿ ಜನ್ಮ ತಾಳಿ ಸತ್ಪ್ರಜೆಗಳಾಗಿ ಬಾಳಲಿ ಎಂದು ಶುಭ ಕೋರಿದರು.
ಕಾರ್ಯದರ್ಶಿ ಪೋಲನಹಳ್ಳಿ ಶ್ವೇತ ರವರು ಮಾತನಾಡುತ್ತ ಹೊಸ ಕಾರ್ಯಕ್ರಮ ಮಾಡಿ ನಮ್ಮ ಸಂಸ್ಥೆ ಬಡ ಹೆಣ್ಣು ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದಂತ ಕಾರ್ಯಕ್ರಮಕ್ಕೆ ಜನ ಸ್ಪಂದಿಸುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿದ್ದಾಗ ಸು. 60 ಕ್ಕೂ ಹೆಚ್ಚು ಮಂದಿ ಸೀಮಂತಕ್ಕೆ ಭಾಜನರಾಗಿದ್ದು ನಮಗೆ ಇನ್ನಷ್ಟು ಸೇವೆ ಮಾಡಲು ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡರು.
ಖಜಾoಚಿಯಾದ ಗೌರೀರವರು ಹೆಣ್ಣುಮಕ್ಕಳಿಗೆ ಸಾವಲಂಬಿಯಾಗಲು ವಿವಿಧ ರೀತಿಯ ಕೌಶಲ್ಯ ತರಬೇತಿಯನ್ನು ಈಗಾಗಲೇ ನಾವು ಶುರು ಮಾಡಿದ್ದೇವೆ ಅದರ ಸದುಪಯೋಗಪಡಿಸಿಕೊಂಡು ಮಹಿಳೆಯರು ಅಭಿವೃದ್ಧಿಯಾಗಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ದಾರಿದೀಪ ಸಂಸ್ಥೆಯ ಕಾರ್ಯದರ್ಶಿ ಲಾರೆನ್ಸ್, ಸದಸ್ಯರಾದ ಇಂದ್ರಪ್ರಕಾಶ್ ರೆಡ್ಡಿ, ಮೋಹನ್ ರೆಡ್ಡಿ ಹಾಜರಿದ್ದರು.
ಇದೇ ಸಂದರ್ಭದಲ್ಲಿ ವಿಶೇಷವಾಗಿ ಈ ಸೀಮಂತ ಕಾರ್ಯಕ್ರಮದಲ್ಲಿ ಕಂಬಾಳು ದೇವರಾಜ್, ಹುಣಸಗಿ ಭಾಗ್ಯ, ಅವತಿ ಮನೋಜ್ ರವರಿಂದ ಸಂಗೀತ ಗಾಯನವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮ ಯಶಸ್ವಿಗೆ ವಿಶೇಷ ಮೆರಗು ತಂದಿತು.





