--ಜಾಹೀರಾತು--

ದೇವನಹಳ್ಳಿ ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಕನಕರಾಜು ನೇಮಕ

On: December 14, 2025 9:28 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ದೇವನಹಳ್ಳಿ ತಾಲೂಕು ಕಸಾಪ ನೂತನ ಅಧ್ಯಕ್ಷರಾಗಿ ಕನಕರಾಜು ನೇಮಕ

ದೇವನಹಳ್ಳಿ :- ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸಿಕೊಳ್ಳಲು ಹಾಗೂ ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರಿ ಶಾಲೆಗಳು ಒಳಗೊಂಡಂತೆ ಎಲ್ಲಾ ಸ್ಥರಗಳಲ್ಲೂ ಸಂಘಟಿಸಿ ಸದಸ್ಯತ್ವವನ್ನು ಹೆಚ್ಚಿಸಿಕೊಳ್ಳ ಬೇಕಿದೆ ಎಂದು ದೇವನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ನಂಜೆಗೌಡ ಅಭಿಪ್ರಾಯಿಸಿದರು.

ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರೀಷತ್ ನೂತನ ಪದಾದಿಕಾರಿಗಳ ನೇಮಕಾತಿ ಆದೇಶ ವಿತರಣಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಲೆಂದೇ ಘನ ಸರ್ಕಾರ ಕನ್ನಡ ಸಾಹಿತ್ಯ ಪರೀಷತ್ ಸ್ಥಾಪಿಸಲಾಗಿದೆ.ದೇವನಹಳ್ಳಿ ತಾಲೂಕಿನಲ್ಲಿ ನೆರೆ ರಾಜ್ಯಗಳ ಭಾಷೆಗಳ ಹಾವಳಿ ಯಿಂದ ಮಾತೃಭಾಷಿ ಗರು ಕಣ್ಮರೆಯಾಗುತ್ತಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕು ಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನೆ ಬಲ ಗೊಳಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಇಂದು ತಾಲೂಕಿನ ಸಾಹಿತ್ಯ ಪರಿಷತ್ ಗೆ ನೂತನ ಪದಾಧಿಕಾರಿಗಳ ನೇಮಕಾತಿ ಪಾರದರ್ಶಕ ವಾಗಿ ನಡೆದಿದೆ ಕನ್ನಡದ ಅಭಿಮಾನಿಗಳು ಸಾಹಿತ್ಯ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿಸ ಬೇಕೆಂದು ಕರೆ ನೀಡಿದರು.

ಕಸಾಪ ವಿಜಯಪುರ ನೂತನ ಅಧ್ಯಕ್ಷ ಕನಕರಾಜು ಅವರು ಮಾತನಾಡಿ, ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಅನೇಕ ಮಹನೀ ಯರು ಶ್ರಮಿಸಿದ್ದಾರೆ ಅವರ ಮಾರ್ಗದರ್ಶನ, ಸೇವಾ ಮನೋಭಾವವನ್ನು ಮೖಗೊಡಿಸಿಕೊಂಡು ತಾಲೂಕಿ ನಾದ್ಯಂತ ಕಸಾಪ ನೊಂದಣಿ ಮಾಡಬೇಕು. ನೂತನ ಪದಾದಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ, ತಾಲೂಕು ಸಮ್ಮೇಳನಗಳನ್ನು ನಡೆಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಸಾಪ ತಾಲೂಕು ಉಪಾಧ್ಯಕ್ಷ ಮುನಿವೀರಣ್ಣ, ಪ್ರಧಾನ ಕಾರ್ಯದರ್ಶಿ ಎಬಿ. ಪರಮೇಶ್,ಮಹಿಳಾ ಘಟಕದ ಅಧ್ಯಕ್ಷೆ ಪುನಿತಾ,
ಕುಂದಾಣ ಹೋಬಳಿ ಅಧ್ಯಕ್ಷರ ಅರುವನಹಳ್ಳಿ ವೆಂಕಟೇಶ್ ಗೌಡ, ವಿಜಯಪುರ ನರಸಿಂಹಪ್ಪ, ನಾಗರಾಜ್, ತಾಲ್ಲೂಕು ಸಂಚಾಲಕರು ವೇಣುಗೋಪಾಲ್, ಸ್ಥಾನಗಳಿಗೆ ನೇಮಕಾತಿ ಆದೇಶ ಪತ್ರ ನೀಡಿದರು.