ತಿಪಟೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಭಗವದ್ಗೀತೆ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ
ತಿಪಟೂರು:ತುಮಕೂರು ಜಿಲ್ಲೆಯ “ವೈ ಸಿರಿ ಪಿ ಯು ಕಾಲೇಜಿ”ನಲ್ಲಿ ನಡೆದ ಜಿಲ್ಲಾ ಮಟ್ಟದ “ಪ್ರತಿಭಾ ಕಾರಂಜಿ” ಯಲ್ಲಿ ತಿಪಟೂರು ತಾಲ್ಲೂಕಿನ ಹಳೇಪಾಳ್ಯ ಗ್ರಾಮದ “ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ, 5 ನೇ ತರಗತಿ ಯಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ “ಗಮ್ಯ ವೈ S/O ಯದುನಂದನ ಹೆಚ್ ಎ ” ವಿದ್ಯಾರ್ಥಿನಿಯು ಜಿಲ್ಲಾ ಮಟ್ಟದಲ್ಲಿ ಭಗವದ್ಗೀತೆ ಧಾರ್ಮಿಕ ಪಠಣ ಸಂಸ್ಕೃತ ದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿಗೆ ಆಯ್ಕೆ ಆಗಿದ್ದರೆ. ಈ ಪ್ರತಿಭೆಯಿಂದ ತಿಪಟೂರಿನ ಶಿಕ್ಷಣ ಇಲಾಖೆ ಗೆ, ಹಳೇಪಾಳ್ಯ UGMHPS ಶಾಲೆಗೆ ಕೀರ್ತಿ ತಂದಿದ್ದಾರೆ. ಇದರ ಹಿಂದೆ ಭಗವದ್ಗೀತೆಯ ಅಧ್ಯಾಯ ಗಳನ್ನು ಕಲಿಯಲು, ಕಲಿಸಲು ಸಹಕರಿಸದ ಶಾಲೆಯ ಮುಖ್ಯ ಶಿಕ್ಷಕರಿಗೂ, ಶಿಕ್ಷಕರಿಗೂ, ಸಂಘ ಸಂಸ್ಥೆಯವರಿಗೂ ವಿದ್ಯಾರ್ಥಿನಿಯ ಪೋಷಕರಿಗೂ SDMC ಯವರು ಶುಭಾಶಯ ಹೇಳಿದ್ದಾರೆ. ಗಮ್ಯ ರವರು ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಜಯಶೀಲಾರಾಗಲೆಂದು ಶುಭ ಹಾರೈಸಿದ್ದಾರೆ.
ವರದಿ: ಮಂಜು ಗುರುಗದಹಳ್ಳಿ





