ಶಾಸಕ ಶರತ್ ಬಚ್ಚೇಗೌಡರಿಂದ ಕಾಮಗಾರಿ ವೀಕ್ಷಣೆ,
ಹೊಸಕೋಟೆ : ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಸರಕಾರದ ಯೋಜನೆ ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುವಂತೆ ಗಮನಹರಿಸಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಸೂಚನೆ ನೀಡಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸೌಖ್ಯ ರಸ್ತೆಯಿಂದ ಸಮೇತನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು,
ಅನುಗೊಂಡಹಳ್ಳಿ ಹೋಬಳಿಯ ಪ್ರತಿ ಗ್ರಾಮಗಳಲ್ಲಿ ಯಾವುದೇ ಮೂಲ ಭೂತ ಸೌಲಭ್ಯಗಳ ಕೊರತೆ ಇಲ್ಲದಂತೆ ಅಭಿವೃದ್ದಿ ಮಾಡಿದ್ದೇವೆ ಆದರೆ ಈಗ ಸಾರ್ವಜನಿಕರ ಒತ್ತಾಯದ ಮೇರೆಗೆ ಸೌಖ್ಯ ರಸ್ತೆಯಿಂದ ಸಮೇತನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ನೀರು ಬರುತ್ತದೆ ವಾಃನ ಸವಾರರು ಮಳೆ ಬಂದರೆ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮನವಿ ಮಾಡಿದ ಹಿನ್ನೆಲೆ ಈ ಬಾಗದ ರಸ್ತೆ ಪಕ್ಕದಲ್ಲಿ ಚರಂಡಿ ಮಾಡಲಾಗುತ್ತಿದ್ದು ಗುತ್ತಿಗೆದಾರ ಬ್ಯಾಟೇಗೌಡರು ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ ಇದೇ ರೀತಿ ಎಲ್ಲಾ ಗುತ್ತಿಗೆದಾರರು ಗುಣ ಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲಿ ಎಂದರು,
ಈ ಸಂದರ್ಭದಲ್ಲಿ ಗುತ್ತಿಗೆದಾರ ಬ್ಯಾಟೇಗೌಡ , ಬಮೂಲ್ ನಿರ್ದೇಶಕ ಕೆಎಂಎ ಮಂಜುನಾಥ್. ಮುಖಂಡರಾದ ಬೋಧನ ಹೊಸಹಳ್ಳಿ ಪ್ರಕಾಶ್. ಸಮೇತನಹಳ್ಳಿ ಸೊಣ್ಣಪ್ಪ, ಮುತ್ಕೂರು ಮುನಿರಾಜು ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು





