ಪಂಚ ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಕುಂದು ಕೊರತೆ ಸಭೆ
ಮಹಿಳಾ ಸಬಲೀಕರಣ ಆರ್ಥಿಕ ಪರಿಸ್ಥಿತಿ ಸುಧಾರಣೆ – ಚಿಕ್ಕ ಹುಲ್ಲೂರು ಬಚ್ಚೇಗೌಡ
ಹೊಸಕೋಟೆ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡಿರುವ ಪಂಚ ಗ್ಯಾರಂಟಿಗಳಿAದ ಪ್ರತಿ ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲು ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿಕ್ಕ ಹುಲ್ಲೂರು ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವನಗೊಂದಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಪಲಾನುಭವಿಗಳ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳೊAದಿಗೆ ಪ್ರತಿ ಮನೆಗೆ ಕಾರ್ಡ್ ತಲುಪಿಸಿ ಮತ ಕೇಳಿದ್ದರ ಪರಿಣಾಮವಾಗಿ ಚುನಾವಣೆಯಲ್ಲಿ ಉತ್ತಮ ಪಲಿತಾಂಶದೊAದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಸರ್ಕಾರ ರಚನೆ ನಂತರದ ಒಂದೇ ತಿಂಗಳಿನಲ್ಲಿ ಚುನವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗ್ಯಾರಂಟಿ ಅನುಷ್ಠಾನ ಮಾಡಿ ಬಡ ಮಧ್ಯಮ ವರ್ಗದ ಕುಟುಂಬದ ಆರ್ಥಿಕ ಪ್ರಗತಿಗೆ ಮುಂದಾಯಿತು. ಸುಮಾರು ಎರಡೂವರೆ ವರ್ಷದಿಂದ ನೀಡುತ್ತಿರುವ ಗೃಹ ಲಕ್ಷ್ಮೀ, ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳು ಬಡ ಕುಟುಂಬದ ನೆಮ್ಮದಿ ಬದುಕಿಗೆ ಪೂರಕವಾಗಿದ್ದು ಅದರ ಸಾಧಕ-ಭಾಧಕಗಳ ಕುರಿತು ಅವಲೋಕಿಸಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಲಾನುಭವಿಗಳ ಸಭೆ ನಡೆಸಲಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಸಕ ಶರತ್ ಬಚ್ಚೇಗೌಡರ ನಿರ್ದೇಶನದಂತೆ ಸಭೆ ನಡೆಸಲಾ ಗುತ್ತಿದ್ದು ಶೇ.100ರಷ್ಟು ಯೋಜನೆಯ ಗುರಿ ತಲುಪುವುದು ಉದ್ದೇಶವಾಗಿದೆ ಎಂದರು.
ಗ್ಯಾರAಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಭೋದನ ಹೊಸಹಳ್ಳಿ ಮಂಜುನಾಥ್ ಮಾತನಾಡಿ ಸಭೆಗಳಲ್ಲಿ ಗೃಹಲಕ್ಷ್ಮೀ ಹಣ ಬಂದಿಲ್ಲ , ಗೃಹಜ್ಯೋತಿ ಯೋಜನೆ ತಲುಪಿಲ್ಲ ., ಅನ್ನಭಾಗ್ಯದ ಅಕ್ಕಿ ಕೊಡ್ತಿಲ್ಲ ಎಂಬ ದೂರುಗಳು ಬರುತ್ತಿದ್ದು ತಾಂತ್ರಿಕ ಸಮಸ್ಯೆ ಇರುತ್ತದೆ. ಆದಾಯ ತೆರಿಗೆ ಕಟ್ಟಿದ್ರೆ ಅಕ್ಕಿ ಕೊಡೊಲ್ಲ, ಗೃಹಲಕ್ಷ್ಮೀ ಹಣ ಬರೋಲ್ಲ, ನಿಗದಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ರೆ ಬಿಲ್ ಬರುತ್ತೆ, ಅದಕ್ಕಾಗಿ ಸಂಬAದಪಟ್ಟ ಅಧಿ ಕಾರಿಗಳ ಬಳಿಗೆ ತೆರಳಿ ಸಮಸ್ಯೆಗೆ ಪರಿ ಹಾರ ಕಂಡುಕೊಳ್ಳಬೇಕು. ಎಂದರು.
ಗ್ರಾಪಂ ಅಧ್ಯಕ್ಷೆ ರತ್ನ ಗೋವಿಂದರಾಜ್, ಪಿಡಿಓ ಹರೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಹೇಮಣ್ಣ, ತಾಲೂಕು ಸಮಿತಿ ಸದಸ್ಯರಾದ ಅಮ್ಮದ್ ಬೇಗ್, ಸಯ್ಯದ್ ಮೆಹಬೂಬ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲತಾರೆಡ್ಡಿ, ಅಧಿಕಾರಿಗಳು ಹಾಜರಿದ್ದರು.






