ಗೋಮಾಳ ಒತ್ತುವರಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ
ಹೊಸಕೋಟೆ : ಸುಮಾರು 5 ಎಕರೆ ಸರಕಾರಿ ಜಾಗ ಹಾಗೂ ಒಂದು ಎಕರೆ ಕರಾಬು ಜಾಗವನ್ನು ಸಹ ಒತ್ತುವರಿ ಮಾಡಿ ರಸ್ತೆ ಪಾರ್ಕ್ ನಿರ್ಮಾಣ ಮಾಡಿ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆದು ಲಕ್ಷಾಂತರ ರೂಪಾಯಿ ಹಣಕ್ಕೆ ಮಾರಾಟ ಮಾಡುವ ಮುಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದು ಭೂಗಳ್ಳರ ಹಾವಳಿ ತಪ್ಪಿಸ ಬೇಕು ಎಂದು ಕರ್ನಾಟಕ ಮಹಾಜನ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ಮAಜುನಾಥ್ ಒತ್ತಾಯಿಸಿದ್ದಾರೆ
ತಾಲೂಕಿನ ಜಡಿಗೇನಹಳ್ಳಿ ಹೋಬಳಿ ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡನಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಹಾಗೂ ರಾಜಕಾಲುವೆಯ 5 ಎಕರೆ ಜಮೀನು ಒತ್ತುವರಿ ಮಾಡಿ ಖಾಸಗಿ ಬಿಲ್ಡರ್ ಗಳು ಲೇಔಟ್ ನಿರ್ಮಾಣ ಮಾಡುವ ಮುಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದು ಭೂಗಳ್ಳರ ಹಾವಳಿ ತಪ್ಪಿಸಿ ಸರ್ಕಾರಿ ಆಸ್ತಿಯನ್ನು ಉಳಿಸಿಕೊಡಬೇಕು ಎಂದು ಒತ್ತಾಯಿಸಿ ನೂರಾರು ಮಂದಿ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ತಹಶೀಲ್ದಾರ್ ಬೇಟಿ
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸೋಮಶೇಖರ್ ಅವರು ಕಂದಾಯ ನಿರೀಕ್ಷಕ ,ಗ್ರಾಮ ಲೆಕ್ಕಾಧಿಕಾರಿ ಹಾಗೂ ಸರ್ವೇ ಅಧಿಕಾರಿಗಳಿಂದ ಮಾಹಿತಿ ಪಡೆದು ದಾಖಲೆಗಳನ್ನು ಪರಿಶೀಲಿಸಿ ಮೂಲ ದಾಖಲೆಗಳು ಹಾಗೂ ಈಗಿನ ಸರ್ವೇ ವರದಿ ವೀಕ್ಷಣೆ ಮಾಡಿ ಸ್ಥಳ ಪರಿಶೀಲನೆ ನಡೆಸಿದರು. ಒತ್ತುವರಿ ಮಾಡಿರುವ ಜಾಗ ಸರ್ಕಾರಿ ಸ್ಮಶಾನ , ಗೋಮಾಳಕ್ಕೆ ಮೀಸಲಿಟ್ಟಿದ್ದು ಜಮೀನಿನ ಮೂಲ ದಾಖಲೆಗಳನ್ನು ಬದಲಾಯಿಸಿ ಹಣದ ಆಸೆಗೆ ಖಾಸಗಿ ಬಿಲ್ಡರ್ ಗಳಿಗೆ ಮಾರಾಟ ಮಾಡಲಾಗಿದೆ. ಸರ್ಕಾರಿ ಗೋಮಾಳದ ಜಾಗವನ್ನು ಉಳಿಸಿಕೊಡಬೇಕು ಹಾಗೂ ರಾಜಕಾಲುವೆಯನ್ನು ತೆರವುಗೊಳಿಸಿ ಕೊಡಬೇಕು ಎಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.
ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ಮಹಾಜನ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಂ.ವಿ.ಮAಜುನಾಥ್ ಮಾತನಾಡಿ, ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ಒತ್ತುವರಿ ಜಾಗವನ್ನು ಈಗಾಗಲೆ ಸರ್ವೆ ಮಾಡಲಾಗಿದ್ದು ವರದಿಯಲ್ಲಿ ಲೋಪದೋಷಗಳು ಕಂಡುಬAದರೆ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಅಥವಾ ಆ ವರದಿ ಸರಿಯಾಗಿ ಇದ್ದಲ್ಲಿ ಒತ್ತುವರಿ ಜಾಗವನ್ನು ತರೆವುಗೊಳಿಸುವ ಕಾರ್ಯ ಮಾಡಬೇಕು. ಅದನ್ನು ಬಿಟ್ಟು ಜಂಟಿ ಸರ್ವೆ ಕಾರ್ಯ ಮಾಡಿಸುವುದಾಗಿ ಹೇಳಿ ಅಧಿಕಾರಿಗಳು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುವುದು ಸರಿಯಲ್ಲ. ಕಾನೂನಿಗೆ ಗೌರವ ನೀಡಿ ನಿಷ್ಪಕ್ಷಪಾತವಾಗಿ ವರದಿ ನೀಡುವವರೆಗೆ ಕಾಯುತ್ತೇವೆ. ವರದಿ ನೀಡುವವರೆಗೆ ಈ ಜಾಗದಲ್ಲಿ ಯಾವುದೇ ಅಭಿವೃದ್ಧಿ ಮಾಡದೆ ಯಥಾಸ್ಥಿತಿ ಕಾಪಾಡಬೇಕು. ಇಲ್ಲದೇ ಹೋದಲ್ಲಿ ನ್ಯಾಯಾಲಯದ ಮೋರೆ ಹೋಗುತ್ತೇವೆ. ರಾಜಕೀಯ ಒತ್ತಡ ಹಾಗೂ ಪ್ರಭಾವಿಗಳ ಕೈಗೊಂಬೆಯಗಿ ಅಧಿಕಾರಿಗಳು ಕುಣಿದದ್ದೇ ಆದರೆ ಈ ವಿಚಾರವಾಗಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೆಚ್ಚರಿಕೆ ನೀಡಿದರು,
———————————————————————-
ಸ್ಥಳೀಯರ ಗಮನಕ್ಕೆ ತರದೆ ಹಾಗೂ ನೋಟಿಸ್ ನೀಡಿದೆ ಏಕಪಕ್ಷೀಯವಾಗಿ ಭೂ ಪರಿವರ್ತನೆ ಮಾಡಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಈ ಸಂಬAಧ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಾಗಿದೆ.ಈ ಹಿಂದೆ ಯಾವ ವರದಿ ಆದರದ ಮೇಲೆ ಭೂ ಪರಿವರ್ತನೆ ಮಾಡಲಾಗಿದೆ ಎಂಬ ಮಾಹಿತಿ ಪಡೆಯಲಾಗುವುದು. ಈ ಜಮೀನು ಭೂ ಪರಿವರ್ತನೆಯಾಗಿರುವುದರಿಂದ ಮೂಲ ಸ್ವರೂಪ ಕಳೆದುಕೊಂಡಿದೆ. ಹಳೆ ವರದಿಗಳನ್ನು ಪಡೆದುಕೊಂಡು ಜಂಟಿಯಾಗಿ ಮತ್ತೆ ಸರ್ವೆ ಕಾರ್ಯ ಮಾಡಿಸಿ ಪಾರದರ್ಶಕವಾಗಿ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಯುತವಾಗಿ ವರದಿ ಕೊಡಿಸುವ ಕಾರ್ಯ ಮಾಡುತ್ತೇವೆ.
ಸೋಮಶೇಖರ್ ತಹಶೀಲ್ದಾರ್





