ವಹ್ನಿಕುಲ ಕ್ಷತ್ರಿಯಾಸ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ರಾಮಗೊಂಡನಹಳ್ಳಿ ತಂಡಕ್ಕೆ ಪ್ರಥಮ ಸ್ಥಾನ
ವಿಜಯಪುರ: ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ವಹ್ನಿಕುಲ ಕ್ಷತ್ರಿಯಾಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಮಗೊಂಡನಹಳ್ಳಿಯ ಕ್ರಿಕೆಟ್ ತಂಡದ ಆಟಗಾರರು ಪ್ರಥಮ ಸ್ಥಾನ ಪಡೆದು 1 ಲಕ್ಷ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ, 10 ತಂಡಗಳು ಭಾಗವಹಿಸಿದ್ದವು. ವಿಜಯಪುರ ಎವರ್ ಗ್ರೀನ್ ತಂಡವು ದ್ವಿತೀಯ ಸ್ಥಾನ, 50 ಸಾವಿರ ನಗದು ಬಹುಮಾನ, ದೇವನಹಳ್ಳಿಯ ತಂಡ 3 ನೇ ಸ್ಥಾನ ಪಡೆದುಕೊಂಡು ಆಕರ್ಷಕ ಟ್ರೋಫಿ ಪಡೆದುಕೊಂಡಿದ್ದಾರೆ.
ಪುರಸಭೆ ಸದಸ್ಯ ವಿ.ನಂದಕುಮಾರ್ ಮಾತನಾಡಿ, ಯುವಕರು ಕ್ರೀಡೆಗಳನ್ನು ಆಡುವುದರಿಂದ ಉತ್ತಮ ಆರೋಗ್ಯ ವೃದ್ಧಿ ಮಾಡಿಕೊಳ್ಳುವುದರ ಜೊತೆಗೆ, ದುಶ್ಚಟಗಳಿಂದ ದೂರವುಳಿಯಲು ಹೆಚ್ಚು ಸಹಕಾರಿಯಾಗಲಿದೆ. ಸಮುದಾಯದ ಯುವಕರು, ಒಗ್ಗಟ್ಟು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ವಹ್ನಿಕುಲ ಕ್ಷತ್ರಿಯಾಸ್ ಮಹಾಸಭಾ ಅಧ್ಯಕ್ಷ ಸುಬ್ಬಣ್ಣ, ರಾಜ್ಯ ಸಂಘದ ಅಧ್ಯಕ್ಷ ಮು.ಕೃಷ್ಣಮೂರ್ತಿ, ಎನ್ ಕನಕರಾಜು, ಜೆ.ಆರ್.ಮುನಿವೀರಣ್ಣ, ಯಡಗೊಂಡನಹಳ್ಳಿ ಮುನಿರಾಜು, ಚಿತ್ರಾಮನೋಹರ್, ಎಸ್.ಸಿ. ನಾಗರಾಜ್, ಕೆ.ವಿ.ಮುನಿರಾಜು, ಬೂದಿಗೆರೆ ಜಿ.ನಾರಾಯಣಸ್ವಾಮಿ, ವಿ.ಮಂಜುನಾಥ್, ಡಿ.ಎಂ.ಮುನೀಂದ್ರ, ಡೈರಿ ಅಧ್ಯಕ್ಷ ಕೆ.ನಾಗರಾಜ್, ಕೆ.ವೆಂಕಟೇಶ್, ಎಂ.ಡಿ.ರಾಮಚಂದ್ರಪ್ಪ, ಜಿ.ಎಂ.ಚಂದ್ರು,ಕರವೇ ಶಿವಕುಮಾರ್, ಗೌಡ್ರು ಮಂಜುನಾಥ್, ಕರಗದ ಪೂಜಾರಿ ಭೀಮಣ್ಣ, ಜೆ.ಆರ್.ದೇವರಾಜ್, ಘಂಟೆ ಪೂಜಾರಿ ಎಂ.ಕೆ.ಅನಂತ್ , ಎಂ.ನಾರಾಯಣ, ಕೆ.ಇ.ಬಿ.ಮಂಜುನಾಥ್ ಮುರಳಿ ರೋಲೆಕ್ಸ್ ಹಾಗೂ ಮುನಿನಾರಾಯಣ ಪಂದ್ಯಾವಳಿಯ ನೇತೃತ್ವ ವಹಿಸಿದ್ದರು.





