ಜೇಸಿಐ ವಿಜಯಪುರ ವಲಯ-14 ರ ಅಧ್ಯಕ್ಷರಾಗಿ ಸುನೀಲ್ ಕುಮಾರ್. ಅಧಿಕಾರ ಸ್ವೀಕಾರ
ವಿಜಯಪುರ: ಪಟ್ಟಣದ ಸುಬ್ಬಮ್ಮಚನ್ನಪ್ಪ ಸಮುದಾಯಭವನದಲ್ಲಿ, ಜೇಸಿಐ ವಿಜಯಪುರ ವಲಯ-14 ರ 41 ನೇ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ ನಡೆಯಿತು.
2025-26 ನೇ ಸಾಲಿನ ಅಧ್ಯಕ್ಷರಾಗಿ ಪ್ರಜ್ವಲ್.ಎಸ್.ಜೈನ್ ಅವರು ಅಧಿಕಾರ ಸ್ವೀಕಾರ ಮಾಡಿಕೊಂಡರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಜೇಸಿ ಸುನೀಲ್ ಕುಮಾರ್.ಎಂ.ಎ ಅವರು, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್ ಅವರು ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಜೇಸಿಐ ಎಂಬ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ಸಮಾಜಸೇವಾ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿಕೊಂಡಿದ್ದು, ಸಮಾಜಮುಖಿಯಾದ ಕಾರ್ಯಕ್ರಮಗಳು ಮತ್ತಷ್ಟು ಹೇರಳವಾಗಿ ಮಾಡಬೇಕಿದ್ದು, ಸಮುದಾಯದ ಸಹಕಾರವೂ ಸಿಗಬೇಕು ಎಂದರು.
ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ ಮಾತನಾಡಿ, ಶಿಕ್ಷಣ, ಆರೋಗ್ಯ ಕ್ಷೇತ್ರ, ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಜೇಸಿಐ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ ಸಂಸ್ಥೆಯನ್ನು ಬೆಂಬಲಿಸುವ ಮೂಲಕ ಸಮಾಜ ಕಟ್ಟುವಂತಹ ಕೆಲಸ ಮಾಡಬೇಕು ಎಂದರು.
ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಮಾತನಾಡಿ, ಜೇಸಿಐ ಸಂಸ್ಥೆಯು ಸಾಮಾಜಿಕವಾಗಿ ಪರಿವರ್ತನೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾಗಿದ್ದು, ಜನರ ಏಳಿಗೆಗಾಗಿ ಅಗತ್ಯವಿರುವ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮಹಿಳೆಯರು, ಮಕ್ಕಳು, ವೃದ್ಧರು, ಸೇರಿದಂತೆ ಎಲ್ಲಾ ವರ್ಗದ ಜನರ ಏಳಿಗೆಗಾಗಿ ಕೆಲಸ ಮಾಡುತ್ತಿದೆ ಎಂದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷ:ಸುನೀಲ್ ಕುಮಾರ್.ಎಂ.ಎ ಕಾರ್ಯದರ್ಶಿ: ಕಾರ್ತಿಕ್ ಕುಮಾರ್, ಖಜಾಂಚಿ: ವಿ.ಸುನೀಲ್, ಉಪಾಧ್ಯಕ್ಷರು: ಕುಶಾಂತ್ ರಾಜ್, ವಿಜಯ್, ಹರ್ಷವರ್ಧನ್, ಶಿಲ್ಪ, ಗಿರೀಶ್, ಶ್ರೇಯಸ್, ರಂಜಿತ್, ತರಬೇತಿ ಡೆವಲಪ್ ಮೆಂಟ್ ಇಂಪನ ಗೌಡ, ಘಟಕ ಪತ್ರಿಕೆ: ಸರಸ್ವತಿ, ಗಾಯಿತ್ರಿ, ವರುಣ್ ವರ್ಮಾ, ಮಹಿಳಾ ಜೇಸಿ: ಡಾ.ವನರಾಜಲಕ್ಷ್ಮೀ, ಸಹಕಾರ್ಯದರ್ಶಿ: ಸಂಜಯ್, ನಿರ್ದೇಶಕರು ಅಧಿಕಾರ ಸ್ವೀಕರಿಸಿದರು.
ಜೇಸಿಐ ವಿಜಯಪುರ-2025 ನೇ ವರ್ಷದ ಅಧ್ಯಕ್ಷೆ ಜಿ.ಶೀಲಾಬೈರೇಗೌಡ, ವಲಯ ಉಪಾಧ್ಯಕ್ಷ ಜಗದೀಶ್, ರಾಷ್ಟ್ರೀಯ ಸಂಯೋಜಕಿ ಯಶಸ್ವಿನಿ, ಪೂರ್ವಾಧ್ಯಕ್ಷ ಎಂ.ಬೈರೇಗೌಡ, ಅನಿಸ್ ಉರ್ ರೆಹಮಾನ್, ಯೋಜನಾನಿರ್ದೇಶಕಿ ರತ್ನಮ್ಮಮುನಿವೆಂಕಟರಮಣ, ಕಾರ್ತಿಕ್ ಕುಮಾರ್.ಜಿ, ಮುಂತಾದವರು ಹಾಜರಿದ್ದರು.





