ಕಳಸ ಪ್ರತಿಷ್ಠಾಪನ ಮಹೋತ್ಸವ : ಧರ್ಮ ಗುರುಗಳಿಂದ ಲೋಕಾರ್ಪಣ ಕಾರ್ಯಕ್ರಮ

ಕುಣಿಗಲ್ : ತಾಲೂಕಿನ ಕಸಬಾ ಹೋಬಳಿ ಕದರಾಪುರ ಗ್ರಾಮದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ, ಹಾಗೂ ಶ್ರೀ ಮಹಾಲಕ್ಷ್ಮಿ ಶ್ರೀ ಪದ್ಮಾವತಿ ಅಮ್ಮನವರ ನೂತನ ಸ್ಥಿರವೆಂಬ ಪ್ರತಿಷ್ಠಾಪನೆ ಮತ್ತು ಜ್ಞಾನ ವಿಮಾನ ಗೋಪುರ ಕಳಸ ಪ್ರತಿಷ್ಠಾಪನೆ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು ಸರ್ವ ಭಕ್ತಾದಿಗಳು ಸಕಾಲಕ್ಕೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಧರ್ಮದರ್ಶಿಗಳಾದ ಕೆಬಿ, ಬೋರೇಗೌಡರವರು ತಿಳಿಸಿದರು,,

ದೇವಸ್ಥಾನದಲ್ಲಿ ದಿನಾಂಕ 2.08.2025ನೇ ಶನಿವಾರದಿಂದ ದಿನಾಂಕ 6.08.2025ನೇ ಬುಧವಾರದವರೆಗೆ ಶ್ರೀ ಶ್ರೀನಿವಾಸ ಸ್ವಾಮಿಯ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಸ್ವಾಮಿಯವರ ಧರ್ಮ ಕಾರ್ಯದಲ್ಲಿ ಭಾಗವಹಿಸಿ ಈ ಅಪರೂಪವಾದ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ದೇವಸ್ಥಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳು ಆದ ಶ್ರೀಯುತ ಕೆ ಬಿ ಬೋರೇಗೌಡ ರವರು ಮಾತನಾಡಿದರು,,

ಇನ್ನು ಈ ಕಾರ್ಯಕ್ರಮಕ್ಕೆ ಹಲವು ಗಣ್ಯಾತಿ ಗಣ್ಯರು,ಮಠಾಧೀಶರು, ಮಾಜಿ ಎಂಪಿ ಎಂಎಲ್ಎ,ಹಾಲಿ ಎಂಪಿ ಎಮ್ಎಲ್ಎ, ತಹಸಿಲ್ದಾರ್, ಪೋಲಿಸ್ ಇಲಾಖೆ, ಸೇರಿದಂತೆ ಇನ್ನೂ ಅನೇಕ ನಾಗರಿಕರು ಸ್ವಾಮಿಯ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ, ತಾವುಗಳು ಸಕಾಲಕ್ಕೆ ಆಗಮಿಸಿ ಖದರಪುರ ಗ್ರಾಮದಲ್ಲಿ ನಡೆಯುವ ಸ್ವಾಮಿಯ ಕಾರ್ಯಕ್ರಮಕ್ಕೆ ಭಾಗವಹಿಸಬೇಕು ಎಂದು ತಿಳಿಸಿದರು.

ವರದಿ : ಹೇಮಂತ್