ಪೊಲೀಸ್ ಇಲಾಖೆಯಲ್ಲಿ ಡ್ರೋನ್ಗಳ ಕೌಶಲ್ಯತೆಗೆ ಆದ್ಯತೆ : ಡಾ. ಜಿ ಪರಮೇಶ್ವರ್

ಬೆಂಗಳೂರು : ರಾಜ್ಯದಲ್ಲಿ ಅಪರಾಧ ಕೃತ್ಯ ಗಳನ್ನು ತಡೆಯುವ ನಿಟ್ಟಿನಲ್ಲಿ ಕೃತ್ಯಗಳನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ಬಳಕೆ ಆಗುವ ಡ್ರೋನ್ಗಳ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಗೃಹ ಇಲಾಖೆ ತೀರ್ಮಾನಿಸಿದ್ದು. ಸಾರ್ವಜನಿಕ ಹಿತರಕ್ಷಣ ದೃಷ್ಟಿಯಿಂದ ಪ್ರತಿ ಪೊಲೀಸ್ ಠಾಣೆಗಳಲ್ಲಿ ಡ್ರೋನ್ ತಂತ್ರಜ್ಞಾನಗಳೊಂದಿಗೆ ಪತ್ತೇದಾರಿಗೆ ಸಹಾಯಕಾರಿ.

ವಿಧಾನಸೌಧದ ಕಾರ್ಯಾಲಯದಲ್ಲಿ ಇಂದು ಕಲಬುರಗಿಯಲ್ಲಿ ಡ್ರೋನ್ ತಂತ್ರಜ್ಞಾನದೊಂದಿಗೆ ಸಾರ್ವಜನಿಕ ಸುರಕ್ಷತಾ ಮೂಲಸೌಕರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಐ ತಂತ್ರಜ್ಞಾನದ ಸುಧಾರಿತ ಕಣ್ಗಾವಲಿನ ‘ನಿಂಬಲ್-ಐ’ ಮತ್ತು ‘NS01’ ಡ್ರೋನ್‌ಗಳನ್ನು ಕಲಬುರಗಿ ನಗರ ಪೊಲೀಸರಿಗೆ ಹಸ್ತಾಂತರಿಸಲಾಯಿತು.

ಡ್ರೋನ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಮತ್ತು ಹಗಲು ಕಣ್ಗಾವಲು, ವಾಹನಗಳ ನಂಬರ್ ಪ್ಲೇಟ್ ಗುರುತಿಸುವಿಕೆ, ಜನಸಂದಣಿ ಮತ್ತು ವಾಹನಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ಸುಧಾರಿತ ತಂತ್ರಜ್ಞಾನ ಸಾಮರ್ಥ್ಯಗಳು ಪೊಲೀಸ್ ವ್ಯವಸ್ಥೆಗೆ ಬಲ ನೀಡುವುದು ಹಾಗೂ ಕರ್ನಾಟಕದಲ್ಲಿ ವಿನ್ಯಾಸಗೊಳಿಸಲಾದ ಮತ್ತು ತಯಾರಿಸಲಾದ ಡ್ರೋನ್‌ಗಳು AI-ಚಾಲಿತ ಕಣ್ಗಾವಲು ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದ್ದು, ಖಾಸಗಿ ವಲಯದ ಸಿಎಸ್‌ಆರ್ ಬೆಂಬಲದ ಮೂಲಕ ಕಲಬುರಗಿ ಪೊಲೀಸರಿಗೆ ನಿಯೋಜಿಸಲಾಗುತ್ತಿದೆ. ಕರ್ನಾಟಕದ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಡ್ರೋನ್ ಬಳಕೆಗೆ ಸಿದ್ಧವಾಗಿದ್ದು. ಸಾರ್ವಜನಿಕ ಹಿತ ದೃಷ್ಟಿಯಿಂದ ಮುತ್ತು ಸ್ವದೇಶಿ ನಿರ್ಮಿತ ತಂತ್ರಜ್ಞಾನ ಹೇಗೆ ಪೂರೈಸುತ್ತದೆ ಎಂಬ ಸಂಕೇತವಾಗಿದೆ ಎಂದು ಡಾಕ್ಟರ್ ಜಿ ಪರಮೇಶ್ವರ್ ತಿಳಿಸಿದರು

ಈ ಸಂದರ್ಭದಲ್ಲಿ ಐಟಿ ಮತ್ತು ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು, ಗೃಹ ಇಲಾಖೆಯ ಕಾರ್ಯದರ್ಶಿ ಕೆ.ವಿ.ಶರತ್ ಚಂದ್ರ, ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ, ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಎಸ್.ಡಿ.ಶರಣಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ವರದಿ : ಭರತ್ ಕೆ