ಯುವಜನರು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ದುಶ್ಚಟಗಳಿಂದ ದೂರವಿರಬೇಕು
ವಿಜಯಪುರ: ವಿಜಯಪುರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ, ರೈಸಿಂಗ್ ಸ್ಟಾರ್ಸ್ ಎನ್.ಎಲ್.ಎ.ಕಪ್ ತಂಡದ ವತಿಯಿಂದ ಆಯೋಜಿಸಿದ್ದ ವಿ.ಪಿ.ಎಲ್.-2025 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಆಯೋಜನೆ ಮಾಡಲಾಗಿತ್ತು.
ತಾಲೂಕು ಬಿಜೆಪಿ ಅಧ್ಯಕ್ಷ ಎನ್.ಎಲ್. ಅಂಬರೀಶ್ ಗೌಡ ಅವರು, ಕ್ರಿಕೆಟ್ ಟೂರ್ನಿಮೆಂಟ್ ಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಯುವಕರು, ಸಂಘಟಿತರಾಗಬೇಕು. ಯುವಕರೇ ಈ ದೇಶದ ಶಕ್ತಿ, ಇಡೀ ವಿಶ್ವದಲ್ಲಿ ಹೆಚ್ಚಿನ ಯುವಕರನ್ನು ಹೊಂದಿರುವ ನಮ್ಮ ದೇಶವನ್ನು ಸಮರ್ಥವಾಗಿ ಮುನ್ನಡೆಸುವಂತಹ ಶಕ್ತಿ ಯುವಕರಿಗೆ ಇದೆ. ಪ್ರತಿಯೊಬ್ಬರೂ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳುವುದರ ಜೊತೆಗೆ, ಜೀವನದಲ್ಲಿ ಎದುರಾಗುವಂತಹ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ದುಶ್ವಟಗಳಿಂದ ದೂರವಾಗಿರಬೇಕು. ಕ್ರಿಕೆಟ್ ಟೂರ್ನಿಮೆಂಟ್ ನ ಜೊತೆಗೆ, ದೇಶೀಯ ಕ್ರೀಡೆಗಳಾದ ಕಬ್ಬಡ್ಡಿ, ಖೋ-ಖೋ, ವಾಲಿಬಾಲ್, ಮುಂತಾದ ಕ್ರೀಡೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.
ವಿಜಯಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ಪಾಲ್ಗೊಂಡಿದ್ದರು.
ಮುಖಂಡರಾದ ರವಿಕುಮಾರ್, ವೆಂಕಟೇಗೌಡ, ಕರವೇ ಮುಖಂಡ ಅನಿಲ್ ಕುಮಾರ್, ಮಂಜುನಾಥ್, ಮುನೀಂದ್ರ, ಲೋಕೇಶ್ ಗೌಡ, ಕೇಶವ, ಮಂಜುನಾಥ್, ರಾಮಯ್ಯ, ಚನ್ನಕೃಷ್ಣ, ರಾಮಚಂದ್ರ, ಅನಿಲ್, ಮುಂತಾದವರು ಹಾಜರಿದ್ದರು.