ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರವರ ಅವಹೇಳನ ಖಂಡನೀಯ–ರಾಘವೇಂದ್ರ
ದೊಡ್ಡಬಳ್ಳಾಪುರ:ಕೇಂದ್ರ ಗೃಹ ಸಚಿವ ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ ಬಗ್ಗೆ ಕೀಳಾಗಿ ಮಾತನಾಡಿ ಅವಹೇಳನ ಮಾಡಿದ್ದನ್ನು ಖಂಡನೀಯ ಎಂದು ಪ್ರಜಾ ವಿಮೋಚನಾ ಚಳವಳಿಯ ಜಿಲ್ಲಾಧ್ಯಕ್ಷ ರಾಘವೇಂದ್ರ ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಕಲ್ಪಿಸುತ್ತಿರುವ ಸಂವಿದಾನದ ಆಶಯದ ಅಡಿಯಲ್ಲಿ ಈ ಸಮಾಜದ ತುಳಿತಕ್ಕೆ ಒಳಗಾದವರ ನೊಂದವರ ದನಿಯಾಗಿ ಶೋಷಿತ ವರ್ಗದವರನ್ನು ಸಮಾಜದ ಜೊತೆಗೆ ತರುವಂತಹ ಸಂವಿಧಾನವನ್ನು ರಚನೆ ಮಾಡಿದ ಮಹಾನ್ ವಿಶ್ವನಾಯಕ ಡಾ. ಬಿ ಆರ್ ಅಂಬೇಡ್ಕರರನ್ನು ಲೋಕಸಭೆಯ ಅಧಿವೇಶನದಲ್ಲಿ ಕೀಳಾಗಿ ಮಾತನಾಡಿರುವ ಗೃಹ ಸಚಿವ ಅಮಿತ್ ಷಾ ಅವರ ಮೇಲೆ ಸೂಕ್ತ ಕ್ರಮ ಜರುಗಿಸ ಬೇಕು ಹಾಗು ಕೂಡಲೆ ಸಂಪುಟ ದಿಂದ ವಜಾಗೊಳಿಸಬೇಕು ಎಂದು ಆಗ್ರಹಪಡಿಸಿದರು .
ನಂತರ ತಾಲ್ಲೂಕು ಅಧ್ಯಕ್ಷ ಹೆಚ್ ಶಿವಕುಮಾರ್ ಮಾತನಾಡಿ ಅಸ್ಪೃಶ್ಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅನ್ಯಾಯದ ವಿರುದ್ದ ಹೋರಾಟ ಮಾಡಿ
ನ್ಯಾಯ ದೊರಕಿಸಿ ಕೊಟ್ಟ ಭಾರತದೇಶದ ಗೌರವಾನ್ವಿತ ಮಹಿಳಾ ಶಿಕ್ಷಕಿಯಾಗಿ ಸರ್ವರಿಗೂ ಶಿಕ್ಷಣ ಬೇಕು ಎಂದು ತೋರಿಸಿ ಕೊಟ್ಟಂತಹ ಸಾವಿತ್ರಿ ಬಾಯಿ ಬಾಪುಲೆ ರವರು ಶಿಕ್ಷಣದ ಮೂಲಕ ದೀನ ದಲಿತರಿಗೆ ಮಹಿಳೆಯರಿಗೆ ಶಿಕ್ಷಣಾ ನೀಡಬೇಕು ಎಂದು ತಮ್ಮ ಜೀವನವನ್ನು ಮುಡುಪಾಗಿಟ್ಟಿದರು. ಅವರಿಗೆ ಜ. 3 ನೇ 2025 ರಂದು 194 ನೇ ವರ್ಷದ ಜನ್ಮ ದಿನಾಚರಣೆ ಅಚರಣೆ ಮಾಡುವುದರ ಜೊತೆ ಯಲ್ಲಿ ನಗರ ಹಾಗು ಗ್ರಾಮಾಂತರ ಬಾಗದ ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಜಾ ವಿಮೋಚನಾ ಚಳವಳಿಯ ತಾ. ಕಾರ್ಯದರ್ಶಿ ಜಿ. ಪುಟ್ಟರಾಜು. ನಗರಾಧ್ಯಕ್ಷ ರಾಜು ಎಂ. ಯುವ ಘಟಕದ ಅಧ್ಯಕ್ಷ ಕಿಶೋರ್ ಆರ್. ನಗರ ಘಟಕದ ಕಾರ್ಯದರ್ಶಿ ರಾಜು ಎಂ. ಉಪಾಧ್ಯಕ್ಷ ನರಸಿಂಹಮೂರ್ತಿ ರಾಜೇಶ್ ರವಿಕುಮಾರ್ ಹಾಜರಿದ್ದರು.