ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವವಾದದ್ದು ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಕವಿತ ಅಭಿಮತ
ಚಾಮರಾಜನಗರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಇವರ ವತಿಯಿಂದ
ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಮಹಿಳಾ ಸಬಲೀಕರಣ
ಕಾರ್ಯಕ್ರಮದಡಿಯಲ್ಲಿ ದ್ವಿಚಕ್ರ ವಾಹನಗಳ ವಿತರಣಾ ಕಾರ್ಯಕ್ರಮ
ಜೆ ಎಚ್ ಪಾಟೀಲ್ ಸಭಾಂಗಣ, ಜಿಲ್ಲಾ ಆಡಳಿತ ಭವನ ಚಾಮರಾಜನಗರದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮತ್ತು ದ್ವಿ ಚಕ್ರ ವಾಹನ ವಿತರಣಾ ಮಾಡಿ ಮಾತನಾಡಿದ ಜಿಲ್ಲಾ ಪೋಲಿಸ ವರಿಷ್ಠಧಿಕಾರಿಗಳಾದ ಕವಿತಾ ಮಾತನಾಡಿ
ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ.ಮಹಿಳೆಯರು ಆರ್ಥಿಕ ಸಬಲತೆ ಜೊತೆಗೆ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು.ಮನೆಯಲ್ಲಿ ಮಹಿಳೆಯರು ಆರೋಗ್ಯ ವಾಗಿದ್ದರೆ ಇಡಿ ಕುಟುಂಬ ಆರೋಗ್ಯವಾಗಿರುತ್ತದೆ.ಮಕ್ಕಳಿಗೆ ಶಿಕ್ಷಣ ಕೊಡಿಸಿ ಒಳ್ಳೆಯ ಪ್ರಜೆಗಳಾಗಿ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಪ್ರಾದೇಶಿಕ ನಿರ್ದೇಶಕರಾದ ಜಯರಾಂ ನೆಲ್ಲಿತ್ತಾಯ ಮಾತನಾಡಿ
ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತುಂಬಾ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಮಹಿಳೆಯರ ಸಬಲೀಕರಣ ದಲ್ಲಿ ಉತ್ತಮ ಸಾಧನೆ ತೋರಿದೆ. ಸಾಕಷ್ಟು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿದೆ. ಸಾಲ ಸೌಲಭ್ಯ ನೀಡುವ ಜೊತೆಗೆ ಅವರು ತೊಡಗಿಸಿಕೊಳ್ಳುವ ಕ್ಷೇತ್ರದ ಬಗ್ಗೆ ಮಾರ್ಗದರ್ಶನ, ಮಾರುಕಟ್ಟೆ ಅವಕಾಶಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಲು ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿನಿಧಿ, ಜ್ಞಾನ ವಿಕಾಸ, ತರಬೇತಿ ಕಾರ್ಯಕ್ರಮಗಳು ಸ್ವಸಹಾಯ ಸಂಘದ ಸದಸ್ಯರಿಗೆ ತುಂಬ ಉಪಯುಕ್ತವಾಗಿವೆ ಎಂದರು
ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಲಕ್ಷ್ಮಿ ಮಾತನಾಡಿ ಸ್ವ-ಸಹಾಯ ಸಂಘಗಳ ಮೂಲಕ ಜನರಿಗೆ ಸುಲಭವಾಗಿ ಸಾಲ ಸಿಗುತ್ತದೆ ಎಂದು ದುಂದು ವೆಚ್ಚ ಮಾಡುತ್ತಿದ್ದಾರೆ.ಮಹಿಳೆಯರು ಸಾಲ ಪಡೆದು ಹಬ್ಬ ಹರಿದಿನ ಅಂತ ವೆಚ್ಚ ಮಾಡಿ ಏನು ಬದಲಾವಣೆ ಆಗುತ್ತಿಲ್ಲ.ಆದ್ದರಿಂದ ಮಹಿಳೆಯರು ಆದಾಯ ಬರುವ ಚಟುವಟಿಕೆಗಳನ್ನು ಮಾಡಿ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು ಮತ್ತು ಸ್ವಾವಲಂಬಿಗಳಾಗಬೇಕು ಎಂದರು.
ನಗರಸಭೆ ಅಧ್ಯಕ್ಷ ಸುರೇಶ್ ಮಾತನಾಡಿ ಸಂಸ್ಥೆಯಿಂದ ನಡೆಯುತ್ತಿರುವ ಎಲ್ಲ ಕಾರ್ಯಗಳು ಜನರ ಮೆಚ್ಚುಗೆ ಗಳಿಸಿದೆ..ಈೆಗೆ ಸಂಸ್ಥೆಯ ಚಟುವಟಿಕೆ ಮುಂದುವರಿಯಲಿ ಎಂದು ಆಶಿಸಿದರು..
ಆಸರೆ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಮಾತನಾಡಿ ಮನೆಯೇ ಮೊದಲ ಪಾಠಶಾಲೆ ಮಹಿಳೆಯರು ಮಕ್ಕಳಿಗೆ ಮನೆಯಿಂದಲೇ ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು.ತಮ್ಮ ಗಂಡ ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು.ಮದ್ಯಪಾನ ಮತ್ತು ಧೂಮಪಾನ ಚಟಕ್ಕೆ ಒಳ್ಳಗಾಗಿ ಆರ್ಥಿಕವಾಗಿ ಮತ್ತು ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಶಿಸ್ತು, ಸಂಸಾರ ನಿರ್ವಹಣೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯ ವಾದದ್ದು ಎಂದರು.
ಆಸರೆ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಮಾತನಾಡಿ ಮನೆಯೇ ಮೊದಲ ಪಾಠಶಾಲೆ ಮಹಿಳೆಯರು ಮಕ್ಕಳಿಗೆ ಮನೆಯಿಂದಲೇ ಒಳ್ಳೆಯ ಸಂಸ್ಕಾರ ಹೇಳಿಕೊಡಬೇಕು.ತಮ್ಮ ಗಂಡ ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು.ಮದ್ಯಪಾನ ಮತ್ತು ಧೂಮಪಾನ ಚಟಕ್ಕೆ ಒಳಗಾಗಿ ಆರ್ಥಿಕವಾಗಿ ಮತ್ತು ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಶಿಸ್ತು, ಸಂಸ್ಕಾರ ನಿರ್ವಹಣೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ಶ್ಲಾಘನೀಯ ವಾದದ್ದು ಎಂದರು.
ಕಾರ್ಯಕ್ರಮದಲ್ಲಿ ನಿರ್ದೇಶಕರಾದ ದಿನೇಶ್, ಯೋಜನಾಧಿಕಾರಿ ಹರೀಶ್ ಕುಮಾರ್,ಜ್ಞಾನವಿಕಾಸ ಸಮನ್ವಯ ಅಧಿಕಾರಿ ಹಾಗೂ ವಲಯದ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು, ಮಹಿಳಾ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ