ಈದ್ ಮಿಲಾದ್ ಆಚರಣೆಯಲ್ಲಿ ಡಿಜೆ ನಿಷೇದ..ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ.. ಪೊಲೀಸ್ ಇಲಾಖೆ
ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದಂತೆ ಈದ್ ಮಿಲಾದ್ ಹಬ್ಬದಲ್ಲೂ ಕೂಡ ಡಿಜೆ ಬಳಕೆ ನಿಷೇಧ ಮಾಡಿದ್ದು ಯಾರಾದರೂ ಕಾನೂನು ಉಲ್ಲಂಘನೆ ಮಾಡಿದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರಾದ ಸಾಧಿಕ್ ಪಾಷಾ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಈ ಹಿಂದೆ ಗೌರಿ ಗಣೇಶ ಹಬ್ಬದಲ್ಲಿ ರಾಜ್ಯ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ತಾಲೂಕಿನಾದ್ಯಂತ ಡಿಜೆ ನಿಷೇಧಿಸಿ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು ಅಂತೆಯೇ ನಾಳೆ ಸೆಪ್ಟೆಂಬರ್ 5ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬದಲ್ಲಿಯೂ ಡಿ ಜೆ ನಿಷೇಧ ಮಾಡಲಾಗಿದೆ. ಮುಸ್ಲಿಂ ಬಾಂಧವರು ಕಾನೂನು ಉಲ್ಲಂಘನೆ ಮಾಡದೆ ,ಡಿಜೆ ಬಳಸದೆ ಶಾಂತ ರೀತಿಯಲ್ಲಿ ಹಬ್ಬ ಆಚರಣೆ ಮಾಡಬೇಕೆಂದು ಮನವಿ ಮಾಡಿದರು .
ಕಾನೂನು ಉಲ್ಲಂಘನೆ ಮಾಡಿ ಡಿಜೆ ಅಥವಾ ಪಟಾಕಿಯನ್ನು ಯಾರಾದರೂ ಬಳಸಿದ ಸಂದರ್ಭದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.