ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸೇವ ರತ್ನ ಪ್ರಶಸ್ತಿ ಪ್ರಧಾನ 2025

ತುಮಕೂರು: ತುಮಕೂರಿನ ಎಸ್ಐಟಿ ಮೀಡಿಯಾ ಸೆಂಟರ್ ನಲ್ಲಿ ನಡೆದ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯ ಅಸೋಸಿಯೇಷನ್( ರಿ ) ವತಿಯಿಂದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳು ಶ್ರೀ ಸಿದ್ದಗಂಗಾ ಮಠ ರವರ ಘನ ದಿವ್ಯ ಸಾನಿಧ್ಯದಲ್ಲಿ ದಿನಾಂಕ 26/7/2025 ರಂದು ಜೈ ಜವಾನ್ ಜೈ ಕಿಸಾನ್ 2025ರ ಕಾರ್ಯಕ್ರಮದಲ್ಲಿ ಶ್ರೀ ನರಸಿಂಹಮೂರ್ತಿ ವಿಕೆ ರೋಟರಿ ಕ್ಲಬ್ ಕೊರಟಗೆರೆ ಕಾರ್ಯದರ್ಶಿ ರವರಿಗೆ 2025ರ ಸಮಾಜದ ಒಳಿತಿಗಾಗಿ ಸರ್ಕಾರೇತರ ಸಂಸ್ಥೆ (NGO )ಗಳಲ್ಲಿ ಕಳೆದ 15 ವರ್ಷಗಳಿಂದಲೂ ಮಹಿಳೆಯರ ಸಶಕ್ತಿಗೆ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಮಹಿಳೆಯರು ಮಕ್ಕಳು ಹಾಗೂ ಅವಕಾಶ ವಂಚಿತ ಸಮಾಜವನ್ನು ಮುಖ್ಯ ವಾಹಿನಿಗೆ ತರುವುದಲ್ಲದೆ ಸರ್ಕಾರದ ಸವಲತ್ತುಗಳನ್ನು ಒದಗಿಸಿ ಕೊಡಲು
ನಿರಂತರವಾಗಿ ದುಡಿಯುತ್ತ ಸಮಾಜದ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಸಮಾನತೆ ಆರ್ಥಿಕ ಘನತೆ ರಾಜಕೀಯ ಅಧಿಕಾರ ಸ್ಥಾಪನೆಗಾಗಿ ನಡೆದ ಹೋರಾಟಗಳಲ್ಲಿ ಭಾಗವಹಿಸಿ ರೋಟರಿ ಎಂಬ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ 2025ರ ಕೊರಟಗೆರೆ ಕ್ಲಬ್ ನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು ಬಡವರಿಗೆ ಮಕ್ಕಳಿಗೆ ಮಹಿಳೆಯಾರ ಶಿಕ್ಷಣ ಪರಿಸರ ಆರೋಗ್ಯದ ಬಗ್ಗೆ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜಕ್ಕಾಗಿ ದುಡಿಯುತ್ತಿರುವ ಸಾಮಾಜಿಕ ಕಾಳಜಿಯನ್ನ ಗುರುತಿಸಿ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯ ಅಸೋಸಿಯೇಷನ್( ರಿ ) ವತಿಯಿಂದ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಜಿಲ್ಲಾಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಎಂ ಟಿ ಕೃಷ್ಣಪ್ಪ ತುರುವೇಕೆರೆ ಶಾಸಕರು ಬಸವರಾಜುರವರು ಅಧ್ಯಕ್ಷ ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಉದ್ಯಮಿ ಚೇತನ್ ದಾಸರಹಳ್ಳಿ. ಸಾಮಾಜಿಕ ಚಿಂತಕರು ಸುಧಾ ಮುಂತಾದ ಸಮಾಜ ಸೇವಕರು ಉಪಸ್ಥಿತರಿದ್ದರು.

ವರದಿ: ಭರತ್ ಕೆ