ಗ್ರಾಮ ಪಂಚಾಯಿಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳು ಮತ್ತು ಬಿಲ್ ಪಾವತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದೇ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯ ಉದ್ದೇಶ–ನೋಡಲ್ ಅಧಿಕಾರಿ ಸಿ.ಎನ್.ಯತೀಶ್
ಕೆ
.ಆರ್.ಪೇಟೆ:ಸರ್ಕಾರದಿಂದ ಬಿಡುಗಡೆ ಯಾಗಿರುವ ನರೇಗಾ, 15ನೇ ಹಣಕಾಸು ಯೋಜನೆಯ ಅನುದಾನದಿಂದ ನಡೆದಿರುವ ಕಾಮಗಾರಿಗಳ ವಿವರವನ್ನು ಸಾರ್ವಜನಿಕರಿಗೆ ತಿಳಿಸುವುದೇ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯ ಉದ್ದೇಶವಾಗಿದೆ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಗಳು ಹಾಗೂ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸಿ.ಎನ್.ಯತೀಶ್ ತಿಳಿಸಿದರು.
ಅವರು ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎ.ಸಿ.ದಿವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯತಿ ಮಹಾತ್ಮ ಗಾಂಧೀ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆ ಮತ್ತು ತಾಲೂಕು ಪಂಚಾಯಿತಿ-ಜಿಲ್ಲಾ ಪಂಚಾಯಿತಿ ವಿವಿಧ ಹಣಕಾಸು ಯೋಜನೆಗಳ 2024-25ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನ ಮತ್ತು ಕಾಮಗಾರಿಗಳ ವಿವರವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶಕ್ಕಾಗಿ ಗ್ರಾಮ ಸಭೆಯನ್ನು ನಡೆಸಲಾಗಿದೆ. ಗ್ರಾಮಸ್ಥರು ಸರ್ಕಾರದ ಸವಲತ್ತುಗಳನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿಹೊಂದಿ ಎಂದು ತಿಳಿಸಿದರು.ಗ್ರಾಮಸ್ಥರು ತಮ್ಮ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ನಡೆಬೇಕಾಗಿರುವ ಕಾಮಗಾರಿಗಳನ್ನು ತಾವೇ ಮುಂದಾಗಿ ನಿಂತು ಕಾಮಗಾರಿಗಳನ್ನು ಮುಂದಾಗಬೇಕು ಸರ್ಕಾರದ ಅನುದಾನವನ್ನು ಪ್ರತಿಯೊಬ್ಬರೂ ಉಪಯೋಗಿಸಿಕೊಳ್ಳಬೇಕು ಹಾಗೂ ತಮ್ಮ ತಮ್ಮ ಮನೆ ಹಾಗೂ ನಲ್ಲಿ ನೀರು ಹಾಗೂ ಖಾಲಿ ನಿವೇಶನದ ಕಂದಾಯವನ್ನು ಕಟ್ಟಿ ಪಂಚಾಯತಿ ಅಭಿವೃದ್ಧಿಗೆ ಸಹಕಾರ ನೀಡಬೇಕು. ಜೊತೆ ನರೇಗಾ ಕಾಮಗಾರಿಯಲ್ಲಿ ಕೂಲಿ ಮಾಡುವವರು ಜಾಬ್ ಕಾರ್ಡ್ ಮಾಡಿಸಿಕೊಂಡು ವರ್ಷಕ್ಕೆ 100ದಿನಗಳ ಕೆಲಸ ಮಾಡಬಹುದು. ಪ್ರತಿ ದಿನ 370ರೂಪಾಯಿಗಳನ್ನು ಕೂಲಿ ಹಣವನ್ನು ತಮ್ಮ ಖಾತೆಗೆ ವಾರಕ್ಕೊಮ್ಮೆ ಜಮಾ ಮಾಡಲಾಗುವುದು ಇದರ ಸದುಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಲೆಕ್ಕ ಪರಿಶೋಧನಾ ಅಧಿಕಾರಿ ಸೋಮಶೇಖರ್ ಅವರು 2024-25 ಸಾಲಿನ ನರೇಗಾ ಹಾಗೂ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅನುದಾನ ಹಾಗೂ 15 ಹಣಕಾಸು ಅನುದಾನದಲ್ಲಿ ಮಾಡಲಾಗಿರುವ ಕಾಮಗಾರಿಗಳ ಖರ್ಚು ವೆಚ್ಚದ ಬಗ್ಗೆ ವಿವರವಾಗಿ ಸಭೆಯ ಮುಂದೆ ತಿಳಿಸಿದರು. ಕಾಮಗಾರಿಗಳ ದಾಖಲೆ ನಿರ್ವಹಣೆಯಲ್ಲಿ ಕೆಲವೊಂದು ಲೋಪದೋಷಗಳು ಕಂಡು ಬಂದಿದ್ದು ಅವುಗಳನ್ನು ಸರಿಪಡಿಸಿಕೊಳ್ಳುವಂತೆಯೂ ತಿಳಿಸಿದರು.
ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ನರೇಗಾ ಇಂಜಿನಿಯರ್ ಪದ್ಮನಾಭ್, ಯೋಗೇಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎ.ಹೆಚ್.ಯೋಗೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುನಿತಾದ್ಯಾವಯ್ಯ, ಸದಸ್ಯರಾದ ಗ್ರಾ.ಪಂ.ಸದಸ್ಯರಾದ ಚನ್ನೇಗೌಡ, ನಗರೂರು ನಂಜೇಗೌಡ, ಸಾವಿತ್ರಮ್ಮಗೋವಿಂದಶೆಟ್ಟಿ, ಆರ್.ಶ್ರೀನಿವಾಸ್, ನೇತ್ರಾವತಿ ರಮೇಶ್, ಪ್ರೇಮಾಶೇಖರ್, ಆಶಾ ಆನಂದ್, ಕುಮಾರಗೌಡ, ಫಯಾಜ್‌ಉಲ್ಲಾಖಾನ್, ಭಾಗ್ಯಮ್ಮನಂಜುಂಡಯ್ಯ, ರೇಣುಕಾಈಶ್ವರ್, ಶಶಿರೇಖಾಅಶೋಕ್, ವೈ.ಎಂ.ನೇತ್ರಾವತಿ, ರೇವತಿಹರೀಶ್, ಗುಡ್ಡೇನಹಳ್ಳಿ ಕುಮಾರ್, ಪಿಡಿಓ ಜಿ.ಎಸ್.ಶಿಲ್ಪ, ಕಾರ್ಯದರ್ಶಿ ಚಂದ್ರಕುಮಾರ್, ಎಸ್.ಡಿ.ಸಿ ಟಿ.ಗೀತಾ, ತಾಲ್ಲೂಕು ಕರವೇ ಅಧ್ಯಕ್ಷ ಎ.ಎಸ್.ಶ್ರೀನಿವಾಸ್, ತಾಲ್ಲೂಕು ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಂಘದ ಅಧ್ಯಕ್ಷ ಕಿರಣ್‌ಕುಮಾರ್ ಹಾಗೂ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಎನ್.ಆರ್.ಎಲ್.ಎಮ್ ಯೋಜನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿದಂತೆ ನೂರಾರು ಮಂದಿ ಗ್ರಾಮ ಸಭೆಯಲ್ಲಿ ಉಪಸ್ಥಿತರಿದ್ದರು.





