ಭಕ್ತರ ಕರೆಗೆ ಸ್ಪಂದಿಸುವ ಚಿರಂಜೀವಿ ಹನುಮ ದೇವರು – ಗೀತಾ ಪ್ರಕಾಶ್
ಹೊಸಕೋಟೆ ಗ್ರಾಮಾಂತರ – ಸಾಮಾನ್ಯವಾಗಿ ಮಂಗಗಳನ್ನು ಕಂಡರೇ ಎಲ್ಲರೂ ಭಯ ಬೀಳುತ್ತಾರೆ. ಅದರಂತೆ ಮಂಗಗಳು ಸಹ ಮನುಷ್ಯರನ್ನು ಕಂಡರೆ ಹೆದರುತ್ತವೆ. ಆದರೆ ಗ್ರಾಮಸ್ಥರೊಂದಿಗೆ ಹಾಗೂ ಮನೆಯ ಸಂದಸ್ಯರೊಂದಿಗೆ ಅತ್ಯಂತ ಸಲುಗೆಯಿಂದ ಮಂಗವೊಂದು ಅನಾರೋಗ್ಯಕ್ಕೆ ತುತ್ತಾಗಿ ಮನೆಯೊಡತಿ ಮಡಿಲಲ್ಲೇ ಮೃತಪಟ್ಟಿತ್ತು. ಆ ದೈವ ಸ್ವರೂಪ ಮಂಗನ ನೆನಪಿಗಾಗಿ ಕಟ್ಟಿದ ಗುಡಿಯೊಂದು ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಇದೆ. ಸಾವಿರಾರು ಭಕ್ತರಿಂದ ನಿತ್ಯ ಪೂಜಿಸಲ್ಪಡುವ ಈ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಆಚರಣೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೇವಲಾಪುರ ಗ್ರಾಮದಲ್ಲಿರುವ ಈ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮ ದೂತ ಹನುಮ ದೇವರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಹನುಮ ದೇವರಿಗೆ ಮುತ್ತಿನ ಮಣಿ ಹಾಗೂ ನವರತ್ನಗಳು ಹಾಗೂ ಹೂವುಗಳಿಂದ ವಿಶೇಷ ಹಾಗೂ ವಿಭಿನ್ನ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ಆಗಮಿಸಿದ ನೂರಾರು ಮಂದಿ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಗೀತಾ ಪ್ರಕಾಶ್ ಅವರು ಮಾತನಾಡಿ ಹನುಮ ದೇವರ ಸ್ಮರಣೆ ಎಲ್ಲಿರಲ್ಲೂ ಒಂದು ವಿಶೇಷ ಶಕ್ತಿಯನ್ನು ತುಂಬುತ್ತದೆ. ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು. ಭಾರತೀಯ ಶಾಸ್ತ್ರಗಳಲ್ಲೂ ಹನಮಂತನ ಸ್ಮರಣೆಯಿಂದಾಗುವ ಲಾಭಗಳ ಬಗ್ಗೆ ಸಾಕಷ್ಟು ಉಲ್ಲೇಖಗಳಿವೆ. ಇಂತಹಾ ಮಹಾಮಹಿಮ ಭಕ್ತರ ಕರೆಗೆ ಸ್ಪಂದಿಸುವ ಚಿರಂಜೀವಿಯಾಗಿದ್ದಾನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದಾ ಪ್ರಕಾಶ್ , ರಘು ಪ್ರಕಾಶ್, ರಾಹುಲ್ ಕುಮಾರ್ , ಮುಖೇಶ್ , ನಿವೃತ್ತ ಪೋಲಿಸ್ ಅಧಿಕಾರಿ ಡಿ.ಎಸ್.ಚಂದ್ರಶೇಖರಯ್ಯ ಹಾಗೂ ನೂರಾರು ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು
ಬಾಕ್ಸ್ – ಸುಮಾರು 18 ವರ್ಷಗಳ ಹಿಂದೆ ಗೀತಾ ಪ್ರಕಾಶ್ ಅವರ ಕುಟುಂಬದ ಸದಸ್ಯನಂತೆ ಇದ್ದ ಮಂಗವೊಂದು ವಯೋಸಹಜ ಖಾಯಿಲೆ ಇಂದ ಗೀತಾ ಅವರ ಮಡಿಲಿನಲ್ಲೆ ಅಸುನೀಗಿತ್ತು. ಗ್ರಾಮದ ಜನತೆಗಾಗಲಿ ಕುಟುಂಬದ ಸದಸ್ಯರಿಗಾಗಲಿ ಯಾವುದೆ ತೊಂದರೆ ನೀಡದೆ ಗ್ರಾಮದಲ್ಲಿ ತಾನೂ ಒಬ್ಬ ಸದಸ್ಯನಂತಿದ್ದ ಆ ಮಂಗನ ಸಾವಿಗೆ ಈಡೀ ಗ್ರಾಮವೇ ಕಣ್ಣೀರಿಟ್ಟಿತ್ತು. ಸಾವನ್ನಪ್ಪಿದ ಮಂಗನನ್ನು ಗ್ರಾಮದಲ್ಲೆ ಎಲ್ಲಾ ವಿಧಿ ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಿ ದೇವಾಲಯ ನಿರ್ಮಿಸಲಾಯಿತು ಅಂದಿನಿಂದ ಇಂದಿನವರೆಗೂ 18 ವರ್ಷಗಳಿಂದ ನಿರಂತರವಾಗಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಇಂದಿಗೂ ಸಹ ಆ ಹನುಮ ಚಿರಂಜೀವಿಯಾಗಿ ನಮ್ಮೋಟ್ಟಿಗಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ ದೇವಲಾಪುರ ಪ್ರಕಾಶ್ ತಿಳಿಸಿದರು.





