ಕೆ.ಬಿ.ಮಹೇಶ್ ಅಮಾನತು ಆದೇಶವನ್ನು ತಕ್ಷಣ ವಾಪಾಸ್ ಪಡೆಯಲು ಒತ್ತಾಯ
_ಕೃಷ್ಣರಾಜಪೇಟೆ: ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಹಿರಿಯ ಸದಸ್ಯರಾದ ಕೆ ಬಿ ಮಹೇಶ್ ಅಮಾನತು ಅದೇಶವನ್ನು ತಕ್ಷಣ ವಾಪಸ್ ಪಡೆಯದೇ ಇದ್ದಲ್ಲಿ ಬೂಕನಕೆರೆ ಹೋಬಳಿಯ ಎಲ್ಲಾ ಕಾಂಗ್ರೆಸ್ ಮುಖಂಡರು ತಮ್ಮ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಇದಕ್ಕೆ ಆಸ್ಪದ ನೀಡದೇ ಕೆ.ಬಿ.ಮಹೇಶ್ ಅವರ ಅಮಾಮತ್ತು ಆದೇಶ ಹಿಂಪಡೆಯಬೇಕು ಎಂದು ಬೂಕನಕೆರೆ ಹೋಬಳಿಯ ಕಾಂಗ್ರೆಸ್ ಮುಖಂಡರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ಒತ್ತಾಯ ಮಾಡಿದರು._
_ತಾಲ್ಲೂಕು ಬೂಕನಕೆರೆ ಹೋಬಳಿ ಕಾಂಗ್ರೆಸ್ ಮುಖಂಡರಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಕಿಡಿಕಾರಿದರು._
_ತಾಲ್ಲೂಕು ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಟಾವಂತರಾದ ಕೆ ಬಿ ಮಹೇಶ್ ಅಮಾನತು ಆದೇಶವನ್ನು ಹಿಂಪಡೆಯದಿದ್ದರೆ ನಮ್ಮ ನಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಂಗ್ರೆಸ್ ವರಿಷ್ಠರಿಗೆ ಎಚ್ಚರಿಕೆ ನೀಡಿದರು._
_ಇನ್ನೂ ಕೆಲವು ದಿನಗಳಲ್ಲಿ ಗ್ರಾಮ ಪಂಚಾಯತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಪುರಸಭೆ ಚುನಾವಣೆಗಳು ಸಾಲು ಸಾಲಿನ ರೀತಿಯಲ್ಲಿ ಬರುತ್ತಿರುವ ಸಂದರ್ಭದಲ್ಲಿ ಕಳೆದ 35ವರ್ಷಗಳಲ್ಲಿ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದಿರುವ ಕೆ ಬಿ ಮಹೇಶ್ ಅಮಾನತು ಶಿಕ್ಷೆಯನ್ನು ರದ್ದು ಪಡಿಸಿ ಗೌರವ ಯುತವಾಗಿ ನಡೆಸಿಕೊಳ್ಳಲು ಇದೇ ಸಮಯದಲ್ಲಿ ಮನವಿ ಮಾಡಿದರು._
_ಗೋಷ್ಠಿಯಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಜಿಲ್ಲಾ ಪಂಚಾಯತಿ ಸದಸ್ಯ ಬೂಕನಕೆರೆ ಬಿ.ಟಿ. ವೆಂಕಟೇಶ್, ಬೂಕನಕೆರೆ ಅಡಿಕೆ ಮಹೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಕುಮಾರ್,ಪುರಸಭಾ ಉಪಾಧ್ಯಕ್ಷ ಉಮೇಶ್,ಸದಸ್ಯ ರವೀಂದ್ರ ಬಾಬು,ಸಲ್ಲು, ಬಲ್ಲೇನಹಳ್ಳಿ ರಮೇಶ್, ಕಾಂಗ್ರೆಸ್ ಯುವ ಮುಖಂಡರಾದ ಬಲ್ಲೇನಹಳ್ಳಿ ಬಿ.ಎಸ್.ರಾಮು, ಚಟ್ಟಂಗೆರೆ ನಾಗೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಧನಂಜಯ, ರಾಮೇಗೌಡ, ಅಶೋಕ್,ವಕೀಲ ನಾಗೇಶ್,ವಿಠಲಾಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಹರೀಶ್,ಪುರಸಭಾ ಮಾಜಿ ಕೌನ್ಸಿಲರ್ ಮಹೇಶ್, ಸುನಿಲ್, ಅನಿಲ್ ಸೇರಿದಂತೆ ಇತರರು ಹಾಜರಿದ್ದರು._
*_ವರದಿ: ಸಾಯಿಕುಮಾರ್. ಎನ್. ಕೆ_*





