ಜನಸ್ನೇಹಿ ಸ್ಪಂದನ ಟ್ರಸ್ಟ್ ವತಿಯಿಂದ ಸಂವಿಧಾನ ಬಗ್ಗೆ ಜಾಗೃತಿ ಮೂಡಿಸಲು”ಸಂವಿಧಾನ ಓದು” ಪುಸ್ತಕವನ್ನು ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಉಚಿತ ವಿತರಣೆ.
ತಿಪಟೂರು:ತಾಂತ್ರಿಕ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ಜನಸ್ನೇಹಿ ಸ್ಪಂದನ ಟ್ರಸ್ಟ್ ಉಪಾಧ್ಯಕ್ಷರಾಗಿರುವ
ಐಶ್ವರ್ಯ ಎ ಪಿ ಅರಿಶಿಣದಹಳ್ಳಿ, ತುರುವೇಕೆರೆ ತಾಲ್ಲೂಕು. ಇವರು ಕಾಲೇಜು ಮತ್ತು ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ
ನಿವೃತ್ತ ನ್ಯಾಯಮೂರ್ತಿ ಎ
ಹೆಚ್ ಎನ್ ನಾಗಮೋಹನದಾಸ್ ರವರು ರಚಿಸಿರುವ ಸಂವಿಧಾನ ಓದು ಎಂಬ ಪುಸ್ತಕಗಳನ್ನು ಕರ್ನಾಟಕದ ಎಲ್ಲಾ ಸರ್ಕಾರಿ ಅನುದಾನಿತ ಖಾಸಗಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಗ್ರಂಥಾಲಯಗಳಿಗೆ ಉಚಿತವಾಗಿ ನಾಲ್ಕು ಪುಸ್ತಕಗಳನ್ನು ನೀಡುತ್ತಿದ್ದಾರೆ.
ಇವರ ಈ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಬೆಂಬಲ ನೀಡುತ್ತಿರುವ ಇವರ ತಂದೆ ತಾಯಿಗಳಾದ ಪ್ರಕಾಶ್ ಎ.ಜಿ ಕೆ ಎಸ್ ಮಂಜುಳಾ ಹಾಗೂ ಇವರ ದೊಡ್ಡಮ್ಮ ಕೆ ಎಸ್ ವಿಜಯಕುಮಾರಿ ಹಾಗೂ ಟ್ರಸ್ಟ್ ನ ಅಧ್ಯಕ್ಷರಾದ ಕೆಸಿ ಉಮಾಶಂಕರವರಿಗೆ ಪತ್ರಿಕಾ ಮುಖಾಂತರ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಮಂಜು ಗುರುಗದಹಳ್ಳಿ





