ಕಸಾಪ ತಾಲ್ಲೂಕು ಉಪಾಧ್ಯಕ್ಷರಾಗಿ ಜೆ ಆರ್ ಮುನಿವೀರಣ್ಣ ಆಯ್ಕೆ
ದೇವನಹಳ್ಳಿ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಉಪಾಧ್ಯಕ್ಷರಾಗಿ ವಿಜಯಪುರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಜೆ ಆರ್ ಮುನಿವೀರಣ್ಣ ನವರನ್ನು ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಆರ್ ಕೆ ನಂಜೇಗೌಡರು ಇಂದು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.
ಪ್ರಧಾನ ಕಾರ್ಯದರ್ಶಿ ಎ ಬಿ ಪರಮೇಶ್, ವಿಜಯಪುರ ಟೌನ್ ಘಟಕದ ನೂತನ ಅಧ್ಯಕ್ಷರಾದ ಎನ್ ಕನಕರಾಜು, ದೇವನಹಳ್ಳಿ ನಗರ ಘಟಕದ ನೂತನ ಅಧ್ಯಕ್ಷೆ ಶ್ರೀಮತಿ ಆರ್ ಪುನೀತ, ಕುಂದಾಣ ಹೋಬಳಿ ಘಟಕದ ನೂತನ ಅಧ್ಯಕ್ಷ ವೆಂಕಟೇಗೌಡ ಎ ಆರ್,ತಾಲ್ಲೂಕು ಘಟಕದ ನೂತನ ಸಂಚಾಲಕರಾದ ಶಿಕ್ಷಕ ವೇಣುಗೋಪಾಲ್ ಎಂ ರವರುಗಳು ಉಪಸ್ಥಿತರಿದ್ದರು.





