ಶ್ರದ್ದಾ ಭಕ್ತಿಗಳಿಂದ ನಡೆದ ಸಪ್ತ ಮಾತೃಕ ಮಾರಿಯಮ್ಮ ದೇವಿಯ ಹಸಿ ಕರಗ
ದೊಡ್ಡಬಳ್ಳಾಪುರ:ಐತಿಹಾಸಿಕ ಹಿನ್ನೆಲೆಯುಳ್ಳ ಸಪ್ತ ಮಾತೃಕಾ ಮಾರಿಯಮ್ಮ ದೇವಿಯ ಕರಗ ಮಹೋತ್ಸವ ಮೇ 12 ರಂದು ನೆಲೆಯಲ್ಲಿದ್ದು ಮೇ 11 ರಂದು ಹಸಿ ಕರಗ ಮಹೋತ್ಸವ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.
ದೊಡ್ಡಬಳ್ಳಾಪುರ ನಗರದ ವನ್ನಿಗರ ಪೇಟೆಯಲ್ಲಿರುವ ಸಪ್ತ ಮಾತೃಕಾ ಮಾರಿಯಮ್ಮ ದೇವಿಯ ಕರಗದ ಅಂಗವಾಗಿ 11 ರಂದು ಮುಂಜಾನೆ ಸುಮಾರು 4:15 ಸರಿಯಾಗಿ ಹಸಿ ಕರಗ ಮಹೋತ್ಸವ ನೇರವೇರಿಸಿದರು ಇದರ ಅಂಗವಾಗಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಸೋಮವಾರ ಬೆಳಗ್ಗೆಯಿಂದ ಸಪ್ತಮಾತೃಕಾ ಮಾರಿಯಮ್ಮ ದೇವಿಗೆ ಅಭಿಷೇಕ, ಲಲಿತಾ ಸಹಸ್ರನಾಮ, ಪ್ರಸಾದ ವಿನಿಯೋಗ, ರಾತ್ರಿ 9:45ಕ್ಕೆ ಪೂಜಾರಿ ಮುನಿರತ್ನಂ ಬಾಲಾಜಿ ಅವರು ಕರಗ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡಲಿದ್ದಾರೆ ಎಂದು ದೇವಾಲಯದ ಅಡಳಿತ ಮಂಡಲಿ ತಿಳಿಸಿದ್ದಾರೆ.