ಡಿ. ವೈ. ಎಸ್. ಪಿ. ಕಚೇರಿ ಆವರಣದಲ್ಲಿ ರೌಡಿ ಶೀಟರ್ ಗಳ ಪೆರೇಡ್

ದೊಡ್ಡಬಳ್ಳಾಪುರ:ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಡಿ ವೈ ಎಸ್ ಪಿ ಕಛೇರಿ ಆವರಣದಲ್ಲಿ ರೌಡಿ ಶೀಟರ್ ಗಳ ಪೆರೇಡ್ ನೆಡೆಸಲಾಯಿತು. 248 ಕ್ಕೂ ಹೆಚ್ಚು ರೌಡಿ ಶೀಟರ್ ಗಳಿಗೆ ಸಜ್ಜನರಾಗಿ ಬದುಕುವಂತೆ ಅಡಿಷನಲ್ ಎಸ್ ಪಿ ನಾಗರಾಜ್
ಎಚ್ಚರಿಕೆ ನೀಡಿದರು.

ನಗರದ ಡಿವೈಎಸ್ ಪಿ ಕಚೇರಿ ಆವರಣದಲ್ಲಿ ಎಎಸ್ ಪಿ-2(ಅಪರಾಧ ವಿಭಾಗ) ಕೆ.ಎಸ್ ನಾಗರಾಜ್ ಅವರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗಕ್ಕೆ ಒಳಪಡುವ ದೊಡ್ಡಬಳ್ಳಾಪುರ ಗ್ರಾಮಾಂತರ, ದೊಡ್ಡಬಳ್ಳಾಪುರ ನಗರ, ದೊಡ್ಡಬೆಳವಂಗಲ ಉಜ್ಜನಿ ಹೊಸಹಳ್ಳಿ, ವಿಜಯಪುರ, ಚನ್ನರಾಯಪಟ್ಟಣ, ವಿಶ್ವ ನಾಥಪುರ, ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳ ಪರೇಡ್ ಹಮ್ಮಿಕೊಳ್ಳಲಾಗಿತ್ತು.

ಆವರು ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಅದರಲ್ಲೂ ರೌಡಿಶೀಟರ್ ಗಳು ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವುದು,ಕಾನೂನಿಗೆ ಬೆಲೆ ಕೊಡದೆ ಸಾರ್ವಜನಿಕರ ಆಸ್ತಿಗೆ ತೊಂದರೆ ಹಾಗು ಸಾರ್ವಜನಿಕರಿಗೆ ಭಯ ಪಡಿಸುವವರ ಮೇಲೆ ರೌಡಿ ಹಾಳೆಯನ್ನು ತೆರೆಯಲಾಗಿದ್ದು ಮತ್ತೆ ಯಾವುದೆ ಪ್ರಕರಣಕ್ಕೆ ಭಾಗಿಯಾಗದೆ ಸಮಾಜದಲ್ಲಿ ಎಲ್ಲರ ಜೊತೆ ಬೆರತು ಸುಧಾರಣೆ ಹೊಂದಿದ್ದಾರೆ ಎಂಬುದು ಭೌತಿಕವಾಗಿ ಅವರ ಕೆಲಸ ಕಾರ್ಯಗಳ ಬಗ್ಗೆ ನಿಗಾವಹಿಸಿ ಮತ್ತು ದಾಖಲೆಗಳನ್ನು ಪರಿಶೀಲಿಸಿದಾಗ ಪರಿವರ್ತನೆ ಹೂಂದಿದ್ದಾರೆ ಎಂಬುದು ಕಂಡು ಬಂದರೆ ಅಂತಹವರನು ರೌಡಿ ಹಾಳೆಯಿಂದ ತೆಗೆಯಬೇಕು ಎಂದಾಗ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಂತಹವರಿಗೆ ರೌಡಿ ಹಾಳೆ ಯಿಂದ ತೆಗೆಯಲಾಗುವುದು ಎಂದರು.

ರೌಡಿ ಪರೇಡ್‌ ನಡೆಸಿ ಮಾಧ್ಯಮದವರೊಂದಿಗೆ ಎಎಸ್ ಪಿ-2(ಅಪರಾಧ ವಿಭಾಗ) ಕೆ.ಎಸ್ ನಾಗರಾಜ್ ಮಾತನಾಡಿ, ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗದಲ್ಲಿ ಸುಮಾರು 248 ರೌಡಿಶೀಟರ್ ಗಳು ಇದ್ದಾರೆ. ಅದರಲ್ಲಿ ಇಂದು ನಡೆದ ರೌಡಿ ಪರೇಡ್ ನಲ್ಲಿ 118 ಮಂದಿ ಹಾಜರಾಗಿದ್ದರು. ಇನ್ನು ಕೆಲವರು ಗೈರಾಗಿದ್ದಾರೆ. ಹಲವರಿಗೆ ಅನಾರೋಗ್ಯ ಕಾರಣದಿಂದ ಬಂದಿಲ್ಲ. ಮತ್ತೆ ಕೆಲವರು ಜೈಲಿನಲ್ಲಿದ್ದಾರೆ. ಇದರಲ್ಲಿ 25 ಜನ ಕೊಲೆ ಆರೋಪಿಗಳಿದ್ದಾರೆ ಎಂದರು.

ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರ ಪೋಲಿಸ್‌ ಠಾಣೆ ಇನ್ಸೆಕ್ಟ‌ರ್ ಅಮರೇಶ್‌ ಗೌಡ,
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸೆಕ್ಟ‌ರ್ ಎನ್ ಎ. ಸಾದಿಕ್ ಪಾಷಾ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸೆಕ್ಟರ್ ಕಲ್ಲಪ್ಪ ಶಂಕರಪ್ಪ ಖರಾತ್, ಹೊಸಹಳ್ಳಿ ಪೊಲೀಸ್ ಠಾಣೆ ಇನ್ಸೆಕ್ಟರ್ ರಾವ್ ಗಣೇಶ್, ರಾಜಾನುಕುಂಟೆ ಪೋಲಿಸ್ ಠಾಣೆ ಇನ್ಸೆಕ್ಟರ್ ಕೆ ಹೆಚ್ ದಿಲೀಪ್ ಕುಮಾರ್. ವಿಜಯಪುರ, ವಿಶ್ವನಾಥಪುರ, ಚನ್ನರಾಯಪಟ್ಟಣ, ಇನ್ಸೆಕ್ಟರ್ ಗಳು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

ಕೋಟ್

ಮತ್ತೆ ರೌಡಿಶೀಟರ್ ಗಳು ಹಳೆಯ ಚಾಳಿ ಮುಂದುವರಿಸಬಾರದು. ಸಮಾಜದಲ್ಲಿ ಗೌರವಯುತವಾದ ಜೀವನ ರೂಪಿಸಿಕೊಳ್ಳಬೇಕು. ಅನಗತ್ಯ ತಂಟೆಗಳಲ್ಲಿ ಮೂಗ ತೂರಿಸಿದರೆ ಹುಷಾರ್ ಶಿಕ್ಷೆ ಕಟ್ಟಿಟ್ಟಬುತ್ತಿ.
ಯಾವ ಅಪರಾಧದಲ್ಲಿ ಭಾಗಿಯಾಗದೇ ಸನ್ನಡತೆಯಿಂದ ಜೀವನ ಸಾಗಿಸುತ್ತಿರುವ ಹಾಗೂ 60 ವರ್ಷ ಮೇಲ್ಪಟ್ಟವರ ರೌಡಿಶೀಟರ್ ಗಳ ಚಲನವಲನ ಗಮನಿಸಿ ರೌಡಿ ಪಟ್ಟಿಯಿಂದ ಹೆಸರು ತೆಗೆಯಲಾಗುವುದು. ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸುವುದು ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡಿದ್ದಕ್ಕೆ ರೌಡಿ ಶೀಟ‌ರ್ ಆಗಿದ್ದೀರಿ. ಅದರಿಂದ ಹೊರಬರಬೇಕೆಂದರೆ ಗೌರವಯುತ ಜೀವನ ನಡೆಸಬೇಕು. ಮತ್ತೆ ಅಂಥದ್ದೇ ಕುಮ್ಮಕ್ಕು ಮುಂದುವರಿಸಿದರೆ ಶಿಕ್ಷೆ ಗ್ಯಾರೆಂಟಿ.
ನಿರಂತರ ಹತ್ತು ವರ್ಷ ಸಮಾಜದಲ್ಲಿ ಯಾರ ನೆಮ್ಮದಿಗೂ ಧಕ್ಕೆ ತರದಂತೆ ಜೀವನ ನಡೆಸಬೇಕು. ದೂರುಗಳೂ ಬರದಂತೆ ಇರಬೇಕು. ಹಾಗೆ ಮಾಡಿದರೆ ಮಾತ್ರ ರೌಡಿ ಹಾಳೆಯಿಂದ ತೆರವು ಮಾಡುತ್ತೇವೆ

ಶ್ರೀ ರವಿ ರವರು ಡಿವೈಎಸ್ಪಿ
ಬೆಂಗಳೂರು ಗ್ರಾಮಾಂತರ ಉಪವಿಭಾಗ