ಸೈನಿಕರಿಗೆ ಧೈರ್ಯ ತುಂಬಲು ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಲಕ್ಷ್ಮಿ ದೇವಿ ಪುರ ಗ್ರಾಮದಲ್ಲಿ ವಿಶೇಷ ಪೂಜೆ,ಮೆರವಣಿಎಂದರು.

ದೊಡ್ಡಬಳ್ಳಾಪುರ:ಕಳೆದ ಐದು ದಿನಗಳಿಂದ ಪಾಕಿಸ್ತಾನದೊಂದಿಗೆ ಯುದ್ಧ ಮಾಡುತ್ತಿರುವ ನಮ್ಮ ಸೈನಿಕರು ಎದೆ ತೊಟ್ಟು ನಿಂತು ಹೋರಾಟ ಮಾಡುತ್ತಿದ್ದಾರೆ ಅವರಿಗೆ ಧೈರ್ಯ ತುಂಬಲು ಎಲ್ಲಾ ಗ್ರಾಮದ ದೇವತೆಗಳಾದ ಸಪ್ಪಲಮ್ಮ ಮುತ್ಯಾಲಮ್ಮ ಮದ್ದೂರಮ್ಮ ಇನ್ನು ಮುಂತಾದ ದೇವತೆಗಳಿಗೆ ಪೂಜೆ ಸಲ್ಲಿಸಿ ಗ್ರಾಮಗಳಲ್ಲಿ ಮೆರವಣಿಗೆ ಮಾಡುತ್ತಿದ್ದೇವೆ ಎಂದು ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುದ್ದು ಕೃಷ್ಣಪ್ಪ ತಿಳಿಸಿದ್ದಾರೆ,

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಲಕ್ಷ್ಮಿದೇವಿಪುರದಲ್ಲಿ ಎಲ್ಲಾ ದೇವತೆಗಳ ವಿಗ್ರಹಗಳನ್ನು ತರಿಸಿ ಸೈನಿಕರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಗುತ್ತಿದೆ. ಭಾರತದ ಗಡಿಯಲ್ಲಿ ಪಾಕಿಸ್ತಾನ ನಿರಂತರವಾಗಿ ದಾಳಿ ಮಾಡುತ್ತಿದೆ, ಅದಕ್ಕೆ ಉತ್ತರವಾಗಿ ಭಾರತ ಸೇನೆ ತಿರುಗೇಟು ನೀಡುತ್ತಿದೆ, ಅನೇಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ, ಕಾಶ್ಮೀರ ವಾಯು ನೆಲೆಯನ್ನು ಗುರುತಿಸಿಕೊಂಡು ಗುರಿಯಾಗಿಸಿಕೊಂಡು ಪಾಕಿಸ್ತಾನ ನಿರಂತರವಾಗಿ ಕ್ಷಿಪಣಿ ದಾಳಿ ನಡೆಸುದ್ದು, ಎಸ್- 400 ಬಳಸಿ ದ್ವಂಸ ಮಾಡಲಾಗಿದೆ ಇಂತಹ ಯುದ್ಧಗಳನ್ನು ಎದುರಿಸಿ ನಮ್ಮ ಭಾರತ ನಿಲ್ಲುತ್ತಿದೆ ಅದಕ್ಕಾಗಿಯೇ ನಮ್ಮ ನಮ್ಮ ಸೈನಿಕರಿಗೆ ಇನ್ನಷ್ಟು ಬಲ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಈ ಪೂಜೆಗಳನ್ನು ಸಲ್ಲಿಸುತ್ತಿದ್ದೇವೆ ಅವರಿಗೆ ಇನ್ನಷ್ಟು ಬಲ ಕೊಡಲಿ ಎಂದು ನಾವು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇವೆ ಎಂದರು

ಈ ಸಂದರ್ಭದಲ್ಲಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳ ಪುರುಷೋತ್ತಮ್, ಸದಸ್ಯ ಕದರಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಶಿವರಾಜ್, ಊರಿನ ಪ್ರಮುಖ ಮುಖಂಡರಾದ ಬಾಬು, ಶಿವಕುಮಾರ್, ಅಶೋಕ್ ಕುಮಾರ್, ದೊಡ್ಡಬಳ್ಳಾಪುರದ ನಟರಾಜ್ ಹಾಜರಿದ್ದರು.