ಸಂಘಗಳು ಜನರ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಹೊತ್ತು ನೀಡಬೇಕು: ಶಾಸಕ ಎ.ಆರ್. ಕೃಷ್ಣಮೂರ್ತಿ
ಚಾಮರಾಜನಗರ:ನಗರದ ಡಾ.ಬಿ.ಆರ್. ಅಂಬೇಡ್ಕರ್ ಪಾರ್ಕ್, ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ಭಾರತ ರತ್ನ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಅವರು ಸಂವಿಧಾನದಲ್ಲಿ ಶಾಸಕಾಂಗ,ಕಾಯಾ೯ಂಗ, ನ್ಯಾಯಾಂಗ ಈ ಮೂರು ಅಂಗಗಳನ್ನು ರಚಿಸದೆ ಹೋಗಿದ್ದರೆ ನಾವು ಜನಪ್ರತಿನಿಧಿಗಳಾಗುತ್ತಿರಲಿಲ್ಲ, ಹಾಗಾಗಿ ಅಂಬೇಡ್ಕರ್ ಅವರು ಹಳ್ಳಿಯ ಮುಗ್ಧ ಮತದಾರರಿಗೂ ಒಂದೇ ಮತದಾನದ ಹಕ್ಕು ಹಾಗೂ ರಾಷ್ಟ್ರಪತಿಗೂ ಒಂದೇ ಮತದಾನದ ಹಕ್ಕು ಎಂದು ಸಂವಿಧಾನದಲ್ಲಿ ರಚಿಸಿದ್ದಾರೆ.
ಜನಪ್ರತಿನಿಧಿಗಳು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದರೆ ನಿರಂತರವಾಗಿ ಆಯ್ಕೆಯಾಗಿತ್ತಾರೆ.ವಿಫಲವಾದಲ್ಲಿ ಅಂತಹ ವ್ಯಕ್ತಿಯನ್ನು ಮತದಾರ ತಿರಸ್ಕರಿಸುವುದಕ್ಕೆ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಆ ರೀತಿಯಲ್ಲಿ ಚುನಾವಣಾ ಪ್ರಕ್ರಿಯೆಗಳು ಕಳೆದ 77 ವರ್ಷಗಳಿಂದ ನಡೆಯುತ್ತಿವೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಮುಖ್ಯಮಂತ್ರಿ ಹಾಗೂ ದೇಶದಲ್ಲಿ ಪ್ರಧಾನ ಮಂತ್ರಿ ಇಲ್ಲಿಯ ತನಕ ಇನ್ನು ಯಾರು ಆಗಿಲ್ಲ. ಪರಿಶಿಷ್ಟ ಜಾತಿಯ ಮತ ಗಳಿಸುವ ರಾಜಕೀಯ ಪಕ್ಷಗಳು ಅವಕಾಶ ಕಲ್ಪಿಸಿ ಕೊಟ್ಟಿಲ್ಲ ಕಾರಣ ಮೀಸಲು ಕ್ಷೇತ್ರದ ಜನಪ್ರತಿನಿಧಿಗಳಲ್ಲಿ ಹೊಂದಾಣಿಕೆ ಇಲ್ಲ. ಆದ್ದರಿಂದ ಈ ಬಗ್ಗೆ ಹೋರಾಟ ಮಾಡಿದರೆ ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆ ಪಡೆಯಲು ಸಾಧ್ಯ, ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಜನಾಂಗದವರು ಹೊಲಯ ಎಂದು ನಮೂದಿಸಿ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಇದೆ ವೇಳೆ ಸಂಘದಿಂದ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಇಂಚರ ಕಲಾಬಳಗದ ತಂಡದವರಿಂದ ಭೀಮಾ ಗೀತೆಗಳನ್ನು ಪ್ರಚಾರಪಡಿಸಲಾಯಿತು
ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕ.ರಾ.ಸ.ನೌ. ಸಂಘದ ಜಿಲ್ಲಾ ಅಧ್ಯಕ್ಷೆ ಡಾ. ರೇಣುಕಾದೇವಿ, ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಸ್. ಮಹದೇವಯ್ಯ, ನಗರಸಭಾ ಸದಸ್ಯೆ ಕುಮುದಾ, ಪ್ರಾಂಶುಪಾಲರಾದ ಡಾ.ಪಿ. ದೇವರಾಜು, ಡಾ.ಚೌಡಯ್ಯ ಕಟ್ನವಾಡಿ, ಡಾ.ಭೀಮ್ ರಾವ್ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಮಹದೇವಯ್ಯ, ಗೌರವ ಅಧ್ಯಕ್ಷ ಕೃಷ್ಣರಾಜು, ಉಪಾಧ್ಯಕ್ಷರಾದ ಯಶೋಧರ.ಪಿ, ಶಿವಕುಮಾರ್, ಮೋಹನಾಂಭ ಪ್ರಧಾನ ಕಾರ್ಯದರ್ಶಿ ಆರ್.ಶಿವಮೂರ್ತಿ, ಸಹ ಕಾರ್ಯದರ್ಶಿ ಶಿವನಾಗಯ್ಯ.ಕೆ, ಸಂಘಟನಾ ಕಾರ್ಯದರ್ಶಿ ದೊರೆಸ್ವಾಮಿ, ಖಜಾಂಚಿ ಕೃಷ್ಣಮೂರ್ತಿ, ಪತ್ರಿಕಾ ಕಾರ್ಯದರ್ಶಿ ಪವನ್ ಕುಮಾರ್.ಎನ್, ನಿರ್ದೇಶಕರಾದ ಕೃಷ್ಣ.ಬಿ, ಮಲ್ಲಿಕಾರ್ಜುನಸ್ವಾಮಿ, ರವಿ ಅರಸು, ಕಲ್ಯಾಣಮ್ಮ, ಯತೀಶ್ ಹೆಚ್.ವಿ, ಪ್ರಕಾಶ್, ಪ್ರತಾಪ್, ನಾಗೇಂದ್ರ, ಉಮೇಶ್, ಶಿಕ್ಷಕರಾದ ಸುಶೀಲ, ಭವಾನಿದೇವಿ ಸೇರಿದಂತೆ ಇತರರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ