ತಳ ಸಮುದಾಯಗಳ ಏಳಿಗೆಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ– ಮಾವಳ್ಳಿ ಶಂಕರ್
ದೇವನಹಳ್ಳಿ :ತಾಲೂಕು ಮಾಯಸಂದ್ರ ಗ್ರಾಮದಲ್ಲಿ ಡಾ||ಬಿಆರ್. ಅಂಬೇಡ್ಕರ್ ಕೂಲಿ ಕಾರ್ಮಿಕರ ಸಂಘ ಹಾಗೂ ಕರ್ನಾಟಕದಲಿತ ಸಂಘರ್ಷ ಸಮಿತಿ ಸಂಯುಕ್ತ ಆಶ್ರಯದಲ್ಲಿ ಡಾ||ಬಿಆರ್. ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಹಾಗೂ ನೂತನ ಸಂಘ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.
ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಕ್ಷ ಮಾವಳ್ಳಿ ಶಂಕರ್ ಮಾತನಾಡಿ, ಅಂಬೇಡ್ಕರ್ ಜಯಂತಿ ಅವರಿಗೆ ಗ್ರಾಮದ ಮಹಿಳೆಯರು ಕಳಸಹೊತ್ತು ಸಂಭ್ರಮಿಸಿದ್ದು ಸಂತಸ ತಂದಿದೆ. ಮಹಿಳೆ ಅಬಲೆ ಅಲ್ಲ ಸಬಲೆ ಅದನ್ನುವುದನ್ನು ಇತ್ತೀಚಿಗಿನ ಪಾಕಿಸ್ತಾ ನದ ಸಿಂದೂರ ಮೇಲೆ ಭಾರತ ಮಾಡಿದ್ದ ಯುದ್ದದಲ್ಲಿ ಧೃರ್ಯ ಸಾಮರ್ಥ್ಯ ತೋರಿದ ಕಮಾಂಡರ್ ಮತ್ತು ಕರ್ನನಲ್ ಸೋಪಿಯಾ ಖರೇಷಿ ಅವರಂತೆ ನಿರೂಪಿ ಸಬೇಕು.
ಸರ್ಕಾರ ಸೇರಿದಂತೆ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ವಕಾಶ ನೀಡಿದ್ದು ಅಂಬೇಡ್ಕರ್ ಅವರು. ಸವರ್ಣಿ ಸಮುದಾಯದ ಕಿರುಕುಳ, ಶೋಷಣೆ ಇನ್ನೂ ಜೀವಂತವಾಗಿದ್ದು ಅವರಿಗೆ ಪ್ರತ್ಯುತ್ತರ ನೀಡಬೇಕಿದ್ದರೆ ಪ್ರಬಲ ಸಂಘಟನೆ ಯಿಂದ ಸಾದ್ಯ. ನಾವು ಪೂಜಿ ಸುವ ದೇವರುಗಳು ದಲಿತ ಸಂಕಷ್ಟಕ್ಕೆ ಸ್ಪಂದಿಸಿಲ್ಲ, ನಮನ್ನು ಮನುಷ್ಯ ರನ್ನು ಕಂಡವರನ್ನು ಹೊರಗಿಟ್ಟಿ ದ್ದಾರೆ. ನಮಗೊ ಸ್ಕರ ಹೇಳದಾರದಷ್ಷು ಸವಾಲು ಗಳನ್ನು ಎದುರಿಸಿದ ಅಂಬೇಡ್ಕರ್,ಮಹಾತ್ಮ ಜ್ಯೋತಿ ಬಾ ಪುಲೆ,ಸಾವಿತ್ರಿ ಬಾ ಪುಲೆ, ಶಾಹು ಮಹಾರಾಜ್, ಪೆರಿಯರ್ ಎದುರಿಸಿದವರು.
ಹಲವಾರು ಅವತಾರ ತಾಳಿದ ಹಿಂದೂ ದೇವಾನು -ದೇವತೆಗಳು ದಲಿತರ ಕೊಗಿಗೆ ಪ್ರತಿಕ್ರಿಯೆ ಯಿಲ್ಲ. ಅರಿಕೆ, ಮಡಿ, ಮೖಲಿಗೆ, ಪೂಜೆ ಪುನಸ್ಕಾರ ಮಾಡಿದರು. ವಿದೇಶದಲ್ಲಿ ವ್ಯಾಸಂಗ ಮಾಡುವ ವೇಳೆ ಹೆಂಡತಿ ರಮಾಬಾಯಿ ಅವರಿಗೆ ತಿಳಿಸದೆ..ಅಂತ್ಯ ಸಂಸ್ಕಾರದ ಹೊಣೆ ಹೊತ್ತು ಅವರ ಮಗ ರಾಜರತ್ನ ಸತ್ತಾಗ ಅವರಿಗೆ ಬಟ್ಟೆ ತರಲು ಹಣ ವಿಲ್ಲದ ಸ್ಥಿತಿ ಆ ಕಾಲದಲ್ಲಿ ಅಂಬೇಡ್ಕರ್ ಅವರನ್ನು ಕಾಡುತಿತ್ತು.
ಬಡತನ, ಸ್ವಾಬಿಮಾನದಿಂದ ಬದುಕಲು ದಲಿತ ಪರವಾದ ಕಾಯ್ದೆ ಕಾನೂನು ಸಂವಿಧಾನದಲ್ಲಿ ಅಳವ ಡಿಸಿದವರು. ಮಾಯಸಂದ್ರ ಗ್ರಾಮ ಮುಂದಿನ ದಿನಗಳಲ್ಲಿ ಧಮ್ಮಮಯವಾಗಬೇಕು. ನಾಳೆ ದೇವನ ಹಳ್ಳಿಯಲ್ಲಿ ನಡೆಯುವ ಬುದ್ದ ಜಯಂತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕರ್ನಾಟಕ ಸರ್ಕಾರ ರಾಜ್ಯದ್ಯಂತ ಅದ್ದೂರಿ ಆಗಿ ಆಚರಿಸುತ್ತಿದೆ. ದಲಿತರು ಬುದ್ದ ಧಮ್ಮ ಪಾಲಿಸಿ. ತಮ್ಮ ಜೀವನ ಉಜ್ವಲ ಸಾದ್ಯ ವೆಂದು ಎಚ್ಚರಿ ಸಿದರು.
ಜಾತಿ ಹೆಸರಲ್ಲಿನ ಶಾಲೆ, ಶಿಕ್ಷಣ, ಉದ್ಯೋಗದಲ್ಲಿ ದಬ್ಬಾಳಿಕೆ, ದೌರ್ಜನ್ಯ ಎದುರಾದರೆ ಅಂತಹವರ ವಿರುದ್ಧ ಹೋರಾಡಲೆಂದು ದಲಿತ ಸಂಘರ್ಷ ಸಮಿತಿ ಜಾರಿಗೆ ಬಂದಿದೆ. ಜಗತ್ತಿ ನಲ್ಲಿ ಶಾಂತಿ, ಸಹನೆ, ಸಮಬಾಳ್ವೆ ಜತೆಗೆ ಪಂಚಶೀಲ ತತ್ವಗಳನ್ನು ಪಾಲನೆ ಮಾಡಲು ಗೌತಮ ಬುದ್ದ ಹೇಳಿದರು. ಅವರ ಆದರ್ಶ ತಳ ಸಮುದಾಯದ ಪಾಲಿಸ ಬೇಕು. ಬೌಧ್ದ ಪಾಲಿಸಿ ದರೆ ಮಾತ್ರ ಅಂಬೇಡ್ಕರ್ ಅನುಯಾಯಿಗಳಾಗಲು ಸಾಧ್ಯ. ಸಂಮುದ್ರ ದಂತ ಜಗತ್ತೇ ಬುಧ್ಧನ ಸ್ಮರಣೆ ಮಾಡುತ್ತದೆ. ಅಷ್ಠಾಂಗ ಮಾರ್ಗ ಪ್ರತಿಯೋಬ್ಬರು ಪಾಲಿಸಬೇಕು. ಮಹಿಳೆ ಯರು ಬದಲಾಗಬೇಕು. ಮೂಡ ನಂಬಿಕೆ, ಮೌಡ್ಯ ಗಳಿಂದ ತಳ ಸಮುದಾಯ ಗಳು ಪಾಲನೆ ಮಾಡಬೇಡಿ. ಹಿಂದೂ ಧರ್ಮದ ದಲ್ಲಾಳಿಗಳಿಂದ ಹೊರಬರಬೇಕೆಂದು.
ವಿಶ್ವನಾಥಪುರ ಠಾಣೆ ಸರ್ಕಲ್ ಇನ್ಸ್ ಪೇಕ್ಟರ್ ಶ್ರೀನಿವಾಸ್ ಅವರು ಮಾತನಾಡಿ, ಜಾತಿ ವ್ಯವಸ್ಥೆಯ ಪಿಡುಗು ತೊಲಗಲು ದಲಿತರಲ್ಲಿ ಅ ಜ್ಞಾನದ ಕೊರತೆ, ದಲಿತರಲ್ಲಿಯೇ…ಹೊಲಯ, ಮಾದಿಗ, ಕೊರಚ, ಕೊರಮ, ಭೊವಿ, ಲಂಬಾಣಿಗಳೆಂದು ಒಡಕುಗಳನ್ನು ಮೂಡಿಸಿ ಕೊಂಡು ಹೊದರೆ ಅಭಿವೃದ್ಧಿ ಕಾಣುದು, ದಲಿತರ ಹಕ್ಕುಗಳ ಬಗ್ಗೆ ಹೆಚ್ಚಿನ ಅರಿವು ಎಲ್ಲರಿಗೂ ಅಗತ್ಯ, ಅಟ್ರಾಸಿಟಿ ಪ್ರಕರಣಗಳು ದುರ್ಬಳಕೆ ಬೇರೆ ಕಡೆ ಹೆಚ್ಚಾಗಿವೆ ನಮ್ಮಲ್ಲಿ ಕಡಿಮೆ. ಪಂ. ಜಾತಿ, ಪ. ಪಂಗಡದ ಕುಂದು ಕೊರತೆ ಸಭೆಗಳಲ್ಲಿ ಭಾಗವಹಿಸಿ ಸಂವಿಧಾನದ ಕಾಯ್ದೆ ಕಾನೂನು ಅರಿವು ಮೂಡಿಸಿ ದರು ಒಡೆದು-ಬಡೆದುಕೊಂಡು ಠಾಣೆಗೆ ಬರುತಿದ್ದಾರೆ. ಇತ್ತಿಚೀನ ದಿನಗಳಲ್ಲಿ ದಲಿತ ಹೆಣ್ಣುಮಕ್ಕಳು ಪ್ರೀತಿ ಪ್ರೇಮ ಸೋಗಿನಲ್ಲಿ ಜಾರುತಿದ್ದು ಅದನ್ನು ತಪ್ಪಿಸ ಬೇಕೆಂದು ತಿಳುವಳಿಕೆ ನೀಡಿದರು.
ಡಿಎಸ್ ಎಸ್ ಸಂಚಾಲಕರಾದ ನರಸಪ್ಪ ಮಾತ ನಾಡಿ, ಅಂಬೇಡ್ಕರ್ ಜಯಂತಿ ಆಚ ರಣೆ ಮಾಡಿ ಮನೆಗೆ ತೆರಳಿದರೆ ಸಾಲದು ಶಿಕ್ಷಣದ ಆಸ್ತಿ ತಮ್ಮ ಮಕ್ಕಳನ್ನು ಮಾಡಬೇಕು. ದಲಿತ ಪರ ಸಂಘ ಟನೆಗಳ ಕಾರ್ಯ ಚಟುವಟಿಯಲ್ಲಿ ಸಕ್ರಿಯವಾಗಿ ಶ್ರಮಿಸಬೇಕೆಂದರು. ದಲಿತ ಗಾನ ಕೋಗಿಲೆ ದಿವಾಂಗತ ಮುನ್ನರಸಮ್ಮ ಕಾರ್ಯಕ್ರಮದಲ್ಲಿ ಸ್ಮರಿಸಿದರು.
ಈ ಸಂದರ್ಭದಲ್ಲಿ ಕಾರಹಳ್ಳಿ ಪಂಚಾಯಿತಿ ಅದ್ಯಕ್ಷೆ ಲಕ್ಷ್ಮಿಚಂದ್ರು, ವಿಶ್ವನಾಥಪುರ ಸರ್ಕಲ್ ಇನ್ಸ್ ಪೇಕ್ಟರ್ ಶ್ರೀನಿವಾಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಕ್ಷ ಮಾವಳ್ಳಿ ಶಂಕರ್, ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್, ಬೆಂಗಳೂರು ಶಿವಶಂಕರ್,ತಾಲೂಕು ಸಂಚಾಲಕರಾದ ನರಸಪ್ಪ, ಗಂಗವಾರ ಡೖರಿ ಮಾಜಿ ಅದ್ಯಕ್ಷ ಶಂಕರ್, ಮುನಿರಾಜು, ನಾಗನಾಯಕನಹಳ್ಳಿ ರಮೇಶ್ ದಾಸ್, ಗಾನ ಅಶ್ವತ್, ಸೊಣ್ಣಮಾರನಹಳ್ಳಿ, ಡಾ||ಬಿಆರ್. ಅಂಬೇಡ್ಕರ್ ಕೂಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ನರಸಿಂಹ ಮೂರ್ತಿ, ನಂಧನ್, ಗಜೇಂದ್ರ, ಶ್ರೀನಿವಾಸ್, ಚಂದ್ರಶೇಖರ್, ಮನಗೊಂಡನಹಳ್ಳಿ ಸುರೇಶ್, ಮಹಿಳಾ ಘಟಕದ ಅರುಣಾ ಸೇರಿದಂತೆ ಅನೇಕರು ಹಾಜರಾದ್ದರು.