ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ  ಅನೇಕ ಸರ್ಕಾರಿ ಸ್ವತ್ತುಗಳು ಕೆರೆ ಅಂಗುಳಗಳು ಒತ್ತುವರಿಗಳು ಹೊಸದೇನಲ್ಲ ಈ ಪೈಕಿ ನಗರದ ಬಸವ ಭವನದ ಪಕ್ಕದಲ್ಲಿರುವ ಕುಂಟೆಯು ಶೀಘ್ರದಲ್ಲಿ ಒತ್ತುವರಿದಾರರ ಪಾಲಗುವುದರಲ್ಲಿ ಯಾವ ಸಂಶಯವು ಇಲ್ಲ‌.

ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ ರಾಮೇಗೌಡರ ವೃತ್ತ(ಬಸವ ಭವನ)ಪಕ್ಕದ ಅಕ್ರಮ ಒತ್ತುವರಿ ದಾರರಿಂದ ಅಳಿದುಳಿದ ಕುಂಟೆ. ಹೆಸರಿಗಷ್ಟೆ ಕುಂಟೆ ಎನ್ನಬಹುದು ಕಾರಣ ತಾಲ್ಲೂಕು ಮತ್ತು ನಗರಾಡಳಿತದ ನಿರ್ಲಕ್ಷ್ಯ ದಿಂದ ಈಗ ಕಸದ ತೊಟ್ಟಿಯಾಗಿ ಮಾರ್ಪಟ್ಟ ಕಸದ ಕುಂಟೆಯಾಗಿದೆ. ಹೆಸರಿಗಷ್ಟೆ ಪರಿಸರ ಉಳಿವಿನ ಉದ್ದುದ್ದಾ ಭಾಷಣ ಬಿಗಿಯುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತಗಮನ ಹರಿಸದೇ ಕಣ್ಣಿದ್ದು ಕುರುಡರಂತೆ ನಟಿಸುವುದರ ಹಿಂದಿನ ಮರ್ಮ ಜನಸಾಮಾನ್ಯರಿಗೆ ಅರ್ಥವಾಗದ್ದಾಗಿದೆ. ಅಲ್ಲದೆ ಕುಂಟೆಯ ಇಕ್ಕೆಡೆಗಳಲ್ಲಿ ಅನಧಿಕೃತವಾಗಿ ಜೋಪಡಿರೀತಿಯ ಅಂಗಡಿಗಳು ನಿರ್ಮಿಸಿಕೊಂಡು ನಗರಸಭೆಗೆ ಸುಂಕ ನೀಡುತ್ತೀವೆ ಎಂಬ ದಿಮಾಕು ಪ್ರದರ್ಶಿಸುವ ಇವರುಗಳಮಾಡುವ ಒಂದು,ಎರಡು ಸೇರಿಂದಂತೆ ಕಸಗೊಬ್ಬರ,ಎಳನೀರು ಚಿಪ್ಪು ತುಂಬುವುದರೊಂದಿಗೆ, ರಾತ್ರಿಯಾಗುತಿದ್ದಂತೆ ಪುಂಡಪೋಕರಿಗಳು ಅನೈತಿಕತೆಗೆ ಆಡಳಿತವೇ ಅವಕಾಶ ಮಾಡಿಕೊಟ್ಟಂತಾಗಿದೆ ಪರೋಕ್ಷವಾಗಿ.

ಇನ್ನಾದರು ಎಚ್ಚೆತ್ತು ಅಕ್ರಮ ಚಟುವಟಿಕೆಗಳ ತಾಣಗಳನ್ನು ತೆರೆವುಗೊಳಿಸಿ, ಕುಂಟೆಯ ಜಾಗವನ್ನು ಸರ್ವೇಮಾಡಿಸಿ ಕುಂಟೆಯ ಜಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಿದಿದ್ದಲ್ಲಿ ಕುಂಟೆಯ ಜಾಗ ಒತ್ತುವರಿದಾರರ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ.

ತಾಲ್ಲೂಕು ಆಡಳಿತ ಮತ್ತು ನಗರಾಡಳಿತ ಅಧಿಕಾರಿಗಳೇ…ದಯವಿಟ್ಟು ಜಾಗೃತರಾಗಿ ಕುಂಟೆ ಉಳಿವಿಗೆ ಇಂದೇ ಮುಂದಾಗುವಂತೆ ಪರಿಸರವಾದಿಗಳು ಹಾಗು ಸಾರ್ವಜನಿಕರು ಆಗ್ರಹಿಸಿದ್ದಾರೆ.