ಬೈಕ್ ಹಾಗು ಟಾಟಾ ಏಸ್ ಡಿಕ್ಕಿ ಬೈಕ್ ಸವಾರನಿಗೆ ಗಂಬೀರ ಗಾಯ

ದೊಡ್ಡಬಳ್ಳಾಪುರ:ಹೊಸಕೋಟೆ ಹಾಗು ಸೋಂಪುರ ರಾಷ್ಟ್ರೀಯ ಹೆದ್ದಾರಿ ಇದ್ದರು ದೊಡ್ಡದೊಡ್ಡ ಕಂಟೇನರ್ ಹಾಗು ಬಾರಿ ವಾಹನಗಳು ಟೋಲ್ ಕಟ್ಟಬೇಕು ಅದರೆ ನೆಲಮಂಗಲ-ದೊಡ್ಡಬಳ್ಳಾಪುರ ದಾರಿ ಉಪಯೋಗಿಸಿದರೆ ಟೋಲ್ ಉಳಿಯುತ್ತೆ ಎಂದು ಬಾರಿ ವಾಹನ ದೊಡ್ಡಬಳ್ಳಾಪುರ -ನೆಲಮಂಗಲ ದಾರಿ ವಾಹನ ದಟ್ಟನೆ ಯಿಂದೆ ಅಪಘಾತಗಳು ಸಂಬವಿಸಿ ತೂಂದರೆ ಯಾಗುತ್ತಿದೆ

ಟಿ ವಿಸ್ ಸ್ಕೂಟರ್ ಗೆ ಟಾಟಾ ಏಸ್ ಗಾಡಿ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಇಂದು ಮಧ್ಯಾಹ್ನ ನಡೆದಿದೆ.

ಗಾಯಾಳು ಬೈಕ್ ಸವಾರನನ್ನು‌ ಕೂಡಲೇ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಕೆರೆ ಏರಿ ಮೇಲಿನ ತಿರುವಿನಲ್ಲಿ ದೊಡ್ಡಬಳ್ಳಾಪುರ ಕಡೆಯಿಂದ ಬರುತ್ತಿದ್ದ ಸ್ಕೂಟರ್ ಗೆ ಟಾಟಾ ಏಸ್ ಗಾಡಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನುಜ್ಜು ಗೊಜ್ಜಾಗಿ ಕೆರೆಯ ಬ್ಯಾರಿ ಕೇಟ್ ನಿಂದ ಹೊರಗೆ ಬಿದ್ದಿದೆ. ರಸ್ತೆ ಅಪಘಾತದಿಂದ ನೆಲಮಂಗಲ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಹನಗಳು ಸಿಲುಕಿ ಕೊಂಡಿವೆ.ಇದರಿಂದ ವಾಹನ ಸವಾರರಿಗೆ ಹಾಗು ಸುತ್ತಮುತ್ತಲಿನ ತುಂಬಾ ತೂಂದರೆ ಯಾಗಿ ಇದರಿಂದ ಆಕ್ರೋಶಕ್ಕೆ ಕಾರಣವಾಗಿದೆ

ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.