ಜಿಲ್ಲಾ ಕೇಂದ್ರ ವಂಚಿತ ವಾಗುವತ್ತ ದೊಡ್ಡಬಳ್ಳಾಪುರ?

ದೊಡ್ಡಬಳ್ಳಾಪುರ :ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ ಭಾನುವಾರ ದೇವನಹಳ್ಳಿಯ ಭೈರದೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅದ್ಧೂರಿಯಾಗಿ ನಡೆಯಿತು, ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಮಾತನಾಡಿ
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿ ಮತ್ತು ಪ್ರಗತಿಗೆ ನಮ್ಮ ಸರ್ಕಾರ ನಿರಂತರವಾಗಿ ಅನುದಾನಗಳನ್ನು ನೀಡಿ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿದೆ. ಚುನಾವಣೆ ವೇಳೆ ನಾವು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸುತ್ತಲೇ ಇದ್ದೇವೆ. ಅಧಿಕಾರಕ್ಕೆ ಬಂದ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿಗಳನ್ನು ಜಾರಿ ಮಾಡಿ ಇದಕ್ಕಾಗಿ 80 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದೇವೆ ಎಂದರು

ಅದರೆ ದೊಡ್ಡಬಳ್ಳಾಪುರ ತಾಲ್ಲೂಕು 1986 ರಲ್ಲಿಯೇ ಉಪವಿಭಾಗ ಕೇಂದ್ರವಾಗಿ ಘೋಷಣೆ ಯಾಗಿದ್ದರು ಎಷ್ಟೂ ರಾಜ ಕಾರಣಿಗಳನ್ನು ಕಂಡಂತಹ ದೊಡ್ಡಬಳ್ಳಾಪುರ ಹಾಗೆಯೇ ಉಳಿಯಲು ಇದು ಶಾಪವೂ ಯಾರು ಮಾಡಿದ ಪಾಪವೂ ಗೊತ್ತಾಗುತ್ತಿಲ್ಲ ಜನ ಜಾನುವಾರು ಭೌಗೋಳಿಕ ವಿಸ್ತೀರ್ಣ ಇಷ್ಟೇಲ್ಲಾ ಇದ್ದರು ಇದು ಯಾಕೆ ಈಕಡೆ ಗಮನ ಹರಿಸುತ್ತಿಲ್ಲ ಎಂಬುದು ಯಕ್ಷ ಪ್ರಶ್ನೇ ಯಾಗಿಯೇ ಉಳಿದಿದೆ

ಇದು ನಾವು ಎಚ್ಚೆತ್ತುಕೊಳ್ಳುವ ಸಮಯ, ನಮ್ಮ ಪಕ್ಕದ ತಾಲೂಕಿನ ಪುರಸಭೆ ವಿಜಯಪುರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಮುಂದಾಗಿರುವ ಸರ್ಕಾರ, ನಗರಸಭೆ ದೊಡ್ಡಬಳ್ಳಾಪುವನ್ನು ಕಡೆಗಣಿಸಿದೆ

ಎಲ್ಲಾ ಮಾನದಂಡಗಳಲ್ಲೂ ಅರ್ಹವಾಗಿರುವ ನಮ್ಮ ದೊಡ್ಡಬಳ್ಳಾಪುರ ನಗರವನ್ನೇಕೆ ಕಡೆಗಣಿಸುತ್ತಿದ್ದಾರೆ ಎಂದು ಪ್ರಶ್ನಿಸಬೇಕಾಗಿದೆ.
ನಮ್ಮದೇ ಜಿಲ್ಲೆಯ ನೆಲಮಂಗಲ ಮತ್ತು ದೇವನಹಳ್ಳಿ ಗೆ ಈಗಾಗಲೇ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿ ಕಾಮಗಾರಿ ನಡೆಯುತ್ತಿದೆ. ಆದರೆ ನಮ್ಮ ದೊಡ್ಡಬಳ್ಳಾಪುರ ವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಹಿತಿ ಪ್ರಕಾರ ಮುಂಬರುವ 5 ವರ್ಷದಯೋಜನೆಗಳಲ್ಲಿ ಎಲ್ಲೂ ಸಹ ದೊಡ್ಡಬಳ್ಳಾಪುರದ ಹೆಸರಿಲ್ಲ. ಇದರ ವಿರುದ್ಧ ನಾವೆಲ್ಲ ದ್ವನಿ ಎತ್ತಬೇಕಾಗಿದೆ, ಸ್ಥಳೀಯ ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಾಗಿದೆ, ಹಾಗೂ ಈ ಮಲತಾಯಿ ಧೋರಣೆಯ ವಿರುದ್ಧ ಸಮಗ್ರ ಹೋರಾಟಕ್ಕೆ ಮುಂದಾಗಬೇಕಾಗಿದೆ.

ನಾನು ದಯವಿಟ್ಟು ತಮ್ಮಲ್ಲಿ ಹಾಗೂ ದೊಡ್ಡಬಳ್ಳಾಪುರ ಸಂಬಂಧಿತ ಎಲ್ಲಾ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಪೇಜಿನವರಲ್ಲಿ ಈ ವಿಷಯವನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿ, ಹೋರಾಟದ ಕಿಚ್ಚುಹಬ್ಬಿಸ ಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಬೇಕಾಗಿದೆ. ನಮ್ಮ ನೆರೆಯ ನಗರಗಳು ಮುಂದುವರೆಯುತ್ತಿರುವುದನ್ನು ನೋಡಿ ನಾವು ಸುಮ್ಮನೆ ಕೂರಬಾರದು. ದೊಡ್ಡಬಳ್ಳಾಪುರದ ಭವಿಷ್ಯದ ದೃಷ್ಟಿಯಿಂದ ನಾವು ಕೂಡಲೇ ಎಲ್ಲಾ ರೀತಿಯ ಆಯಾಮಗಳಲ್ಲಿ ಸರ್ಕಾರದ ಮೇಲೆ ಒತ್ತಡ ತಂದು ಆದಷ್ಟು ಬೇಗ ದೊಡ್ಡಬಳ್ಳಾಪುರಕ್ಕೆ ಮೆಟ್ರೋ ಸಂಪರ್ಕ ಒದಗಿಸುವಂತೆ ಮನವಿ ಮಾಡಿಕೊಳ್ಳಬೇಕು.

ಕರ್ನಾಟಕ ರಾಜ್ಯ ಕಂಡ ಅತ್ಯಂತ ಯಶಸ್ವಿ ಕನ್ನಡಪರ ಹೋರಾಟಗಾರರಿರುವ ತಾಲೂಕಿನಲ್ಲಿ ಪ್ರತಿಯೊಂದಕ್ಕೂ ಹೋರಾಟ ಮಾಡಲೇಬೇಕೆನ್ನುವ ಅನಿವಾರ್ಯ ನಮ್ಮದಾಗಿದೆ. ಈಗಾಗಲೇ ಜಿಲ್ಲಾ ಕೇಂದ್ರ , ಜಿಲ್ಲಾ ಆಸ್ಪತ್ರೆ ಸೇರಿದಂತೆ ಅನೇಕ ಹೋರಾಟಗಳು ಮುಂಚೂಣಿಯಲ್ಲಿವೆ ಅದರ ಜೊತೆಗೆ ಮೆಟ್ರೋ ಹೋರಾಟವನ್ನು ಸೇರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಉದಯ ಆರಾಧ್ಯ ತೂಬಗೆರೆ ಹಿತರಕ್ಷಣಾ ಸಮಿತಿಯ ಸದಸ್ಯ