ಘಾಟಿ ಸುಬ್ರಮಣ್ಯದಲ್ಲಿ ಮಹಿಳೆಯರಿಗೆ ಅರಿಶಿನ ಕುಂಕುಮ ಬಳೆ ವಿತರಣೆ
ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವರ ದರ್ಶನಕ್ಕೆ ಬಂದ ಮಹಿಳೆಯರಿಗೆ ಅರಿಶಿಣ ಕುಂಕುಮ ಮತ್ತು ಬಳೆ ಪ್ರಸಾದವನ್ನು ವಿತರಣೆ ಮಾಡಲಾಯಿತು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಎಂ ನಾರಾಯಣಸ್ವಾಮಿ ಮಾತನಾಡಿ ಹೆಣ್ಣು ಮಕ್ಕಳಿಗೆ ಸಂಪ್ರದಾಯದಂತೆ ವರಮಹಾಲಕ್ಷ್ಮೀ ಹಬ್ಬ ದಂದು ಅರಿಶಿನ ಕುಂಕುಮ ಬಳೆ ಬಾಗಿನ ಕೊಡುವುದು ನಮ್ಮ ಸಾಂಪ್ರಾದಾಯಿಕ ಸಂಸ್ಕ್ರೃತಿಯದೆ ಅದರಿಂದ ವರಮಹಾಲಕ್ಷ್ಮೀ ತಾಯಿ ನಾಡಿನಲ್ಲಿನ ಎಲ್ಲರಿಗೂ ಅರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಎಂದರು
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರು ಆರ್ ಸುಬ್ರಹ್ಮಣ್ಯ ದೇವಾಲಯ ಸಿಬ್ಬಂದಿ ನಂಜಪ್ಪ ಮುತ್ತಣ್ಣ ಹಾಗು ದೇವಾಲಯದ ಸಿಬ್ಬಂದಿ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಹಾಜರಿದ್ದರು