ಕಬಡ್ಡಿ ಆರೋಗ್ಯಕರ ಕ್ರೀಡೆ–ಹರೀಶ್ ಗೌಡ
ದೊಡ್ಡಬಳ್ಳಾಪುರ:ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಬಿ.ಎಸ್.ಎಲ್. ಕಬಡ್ಡಿ ಕ್ಲಬ್ ಹಾಗೂ ಮುತ್ತೂರು ಗ್ರಾಮಸ್ಥರಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಅಯೋಜನೆ ಮಾಡಲಾಗಿತ್ತು
ನಗರದ ಹೊರವಲಯದ ಮುತ್ತೂರಿನಲ್ಲಿ ಅಯೋಜನೆ ಮಾಡಲಾದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನ ರಾಜ್ಯ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿಗಳು ಶ್ರೀ ಹರೀಶ್ ಗೌಡ ಉಧ್ಘಾಟನೆ ಮಾಡಿ ಮಾತನಾಡಿ ಕಬಡ್ಡಿ ಕ್ರೀಡೆಯು ಒಂದು ಉತ್ತಮ ವಾತಾವರಣ ಹಾಗೂ ಆರೋಗ್ಯಕ್ಕೆ ಒಂದು ಒಳ್ಳೆಯ ಕ್ರೀಡೆ ಆಗಿದ್ದು ಈ ಕ್ರೀಡೆಯು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ ಅದ್ದರಿಂದ ಸರ್ಕಾರಗಳು ಇಂತಹ ಕ್ರೀಡೆಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ತುಂಬಿ ಮೂಲಕ ಕ್ರೀಡೆಗೆ ಪ್ರೋತ್ಸಾಹಸಬೇಕಾಗಿದೆ ಎಂದು ಮನವಿ ಮಾಡಿದರು. ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಸೋತವರು ಎದೆ ಗುಂದದೆ ಮುಂದೆ ಸಾಗಬೇಕು ಎಂದು ತಿಳಿಸುತ್ತಸಿದರು ಈ ಪಂದ್ಯಾವಳಿಯ ಕ್ರೀಡೆಯಲ್ಲಿ ಆಸಕ್ತಿ ತೋರಿ ದೂರದ ಊರುಗಳಿಂದ ಸುಮಾರು 50 ತಂಡಗಳು ಭಾಗವಹಿಸಿರುವುದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ಈ ಕಬಡ್ಡಿ ಪಂದ್ಯಾದಲ್ಲಿ ಮೊದಲನೇ ಬಹುಮಾನ ಕೋಲಾರ ತಂಡ. ಎರಡನೆಯ ಬಹುಮಾನ ಬಿ.ಎಸ್ ಎಲ್.( ಎ) ತಂಡ ಮುತ್ತೂರು. ಮೂರನೆಯ ಬಹುಮಾನ ಕೋರಮಂಗಲ ಪೊಲೀಸ್ ತಂಡ . ನಾಲ್ಕನೆಯ ಬಹುಮಾನ ಬಿ.ಎಸ್ ಎಲ್. (ಬಿ) ತಂಡ ಮುತ್ತೂರು ಇವರಿಗೆ ಬಹುಮಾನ ವಿತರಿಸಲಾಯಿತು
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್. ಅಪ್ಪಯ್ಯಣ್ಣ ರವರು. ದಾಸಗೊಂಡನಹಳ್ಳಿ ಚಂದ್ರಣ್ಣ ರವರು. ಶ್ರೀಮತಿ ಕಾಂತಾಮಣಿ ಹರೀಶ್ ಗೌಡ ರವರು. ಬಿ.ಎಚ್.ಕೆಂಪಣ್ಣ ರವರು.ಕೋನಘಟ್ಟ ಆನಂದ್ ರವರು. ದೊಡ್ಡ ತುಮಕೂರು ಪ್ರಭಾಕರ್ ರವರು. ತಳವಾರ್ ನಾಗರಾಜು ರವರು. ಪ್ರವೀಣ್ ಶಾಂತಿನಗರ ರವರು. ನಾರಾಯಣಪ್ಪ. ಹರ್ಷ.ಕೇಶವ ಮೂರ್ತಿ ಮುತ್ತೂರು ಮೂರ್ತಿ ಕಬಡ್ಡಿ ಅಬಭಿಮಾನಿಗಳು ಸಾರ್ವಜನಿಕರು
ಮುಖಂಡರು ಭಾಗವಹಿಸಿದ್ದರು