ದೊಡ್ಡತುಮಕೂರು ವಿ, ಎಸ್, ಎಸ್, ಎನ್. ಬಿಜೆಪಿ ದಳ ಮೈತ್ರಿ ಕೂಟ ಭರ್ಜರಿ ಗೆಲುವು

ದೊಡ್ಡಬಳ್ಳಾಪುರ :ದೊಡ್ಡತುಮಕೂರು ತಾಲ್ಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘ( ನಿ ) (ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ) ದ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಜೆಡಿಎಸ್ ಮೈತ್ರಿ 9 ಸ್ಥಾನಗಳನ್ನು ಪಡೆಯುವ ಮೂಲಕ ಜಯಭೇರಿ ಸಾಧಿಸಿದೆ.

ಅಕ್ಟೋಬರ್ 26 (26-10-2024)ರಂದು ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ನೆಡೆದಿದ್ದ ಚುನಾವಣೆಯಲ್ಲಿ ಏನ್ ಡಿ ಎ ಬೆಂಬಲಿತ 9 (ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ನೂತನ ನಿರ್ದೇಶಕರನ್ನು ಸ್ಥಳೀಯ ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ನಾಗೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ , ಮುಖಂಡರುಗಳಾದ ತಿ. ರಂಗರಾಜು, ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ , ಜೆಡಿಎಸ್ ರಾಜ್ಯ ಕಾರ್ಯದರ್ಶಿ ಡಾ. ವಿಜಯಕುಮಾರ್, ಬಿಜೆಪಿ ನಗರ ಅಧ್ಯಕ್ಷ ಕೆ ಬಿ ಮುದ್ದಪ್ಪ ಅಭಿನಂದಿಸಿದ್ದಾರೆ.

ಚುನಾವಣೆಯಲ್ಲಿ ಪಡೆದ ಮತಗಳ ಮಾಹಿತಿ :

ಪ್ರಕಾಶ್ ( 116),ಕೆ ಬಿ.ಮುನಿಕೆಂಪಣ್ಣ( 109),ಟಿ.ಜಿ. ಮಂಜುನಾಥ್ ( LIC) (122), ಕೆ.ನಾರಾಯಣ ಸ್ವಾಮಿ (129),ಪುರುಷೋತ್ತಮ್ (134),ಮುನಿನರಸಿಂಹಯ್ಯ (108),ಮುನಿರಾಜು (104),ತ್ರಿವೇಣಮ್ಮ (117),ಭಾಗ್ಯಮ್ಮ (112) ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.