ಘಾಟಿ ಸುಬ್ರಮಣ್ಯ ದೇಗುಲದ ಹುಂಡಿ ಎಣಿಕೆ.. 59,28,876ರೂ ಸಂಗ್ರಹ

ದೊಡ್ಡಬಳ್ಳಾಪುರ:ತಾಲ್ಲೂಕಿನ ತೂಬಗೆರೆ ಹೋಬಳಿಯ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಹುಂಡಿ ಏಣಿಕೆ ಕಾರ್ಯವನ್ನು ದೇವಾಲಯದ ನಿಯಮಾನುಸಾರ ಏಣಿಕೆ ಮಾಡಲಾಯಿತು.ಹುಂಡಿ ಎಣಿಕೆಯಲ್ಲಿ 59,28,876 ರೂ ಹಾಗು ಒಂದು ಲಕ್ಷ ಐವತ್ತೇಳು ಸಾವಿರ (1,57,000) ರೂ ಬೆಲೆ ಬಾಳುವ 19 ಗ್ರಾಂ 500 ಮಿಲಿ ಬಂಗಾರ ಒಂದು ಲಕ್ಷ ಅರವತ್ತು ಮೂರು ಸಾವಿರ (1,63,000) ರೂ ಬೆಲೆ ಬಾಳುವ 1 ಕೆ ಜಿ.400 ಗ್ರಾಮ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಹುಂಡಿಯಲ್ಲಿ ಹಾಕಿದ್ದಾರೆ.

ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.

ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಎಂ ನಾರಾಯಣಸ್ವಾಮಿ, ಪ್ರಧಾನ ಅರ್ಚಕರು ಶ್ರೀನಿಧಿ, ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಜೆ.ಎನ್. ರಂಗಪ್ಪ,ಕೆ. ಎಸ್. ರವಿ, ಲಕ್ಷ್ಮ ನಾಯಕ್, ಆರ್ ವಿ ಮಹೇಶ್ ಕುಮಾರ್, ಹೇಮಲತಾ ರಮೇಶ್ ಕಾಂಗ್ರೇಸ್ ಮುಖಂಡ ಚಿಕ್ಕಣ್ಣ ಬ್ಲಾಕ್ ಕಾಂಗ್ರೇಸ್ ಮಹಿಳಾ ಅಧ್ಯಕ್ಷೆ ಕಾಂತಮ್ಮ ಸಮಾಜ ಸೇವಕ ಮುತ್ತಣ್ಣ ಹಾಗೂ ಇಂಡಿಯನ್ ಓವರ್ಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ದೇವಾಲಯದ ಸಿಬ್ಬಂದಿ ಮತ್ತು ಭಕ್ತಾದಿಗಳು ಹಾಜರಿದ್ದರು