ಜೈ ಭುವನೇಶ್ವರಿ ಆಟೋ ಚಾಲಕರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಆಟೋ ಚಾಲಕರು ರಾಜ್ಯೋತ್ಸವದ ಜೊತೆಗೆ ಕಾನೂನು ನಿಯಮಗಳನ್ನು ಸಹ ಪಾಲಿಸಿ–ವೆಂಕಟರಾಜು
ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದ ಜೈ ಭುವನೇಶ್ವರಿ ಆಟೋ ಚಾಲಕರ ಬಳಗದ ವತಿಯಿಂದ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ. ಕಾರ್ಯಕ್ರಮದಲ್ಲಿ ಮೊದಲಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಂದಗುಡಿ ಪೊಲೀಸ್ ಠಾಣೆಯ ಏಎಸ್ಐ ವೆಂಕಟರಾಜು ಮಾತನಾಡಿ.
ಕನ್ನಡ ರಾಜ್ಯೋತ್ಸವ ಎಂದಾಕ್ಷಣ ನೆನಪಿಗೆ ಬರುವುದು ಆಟೋ ಚಾಲಕರು ಕಾರಣ ಪ್ರತಿ ಗ್ರಾಮ ಹಾಗೂ ತಾಲೂಕು ಜಿಲ್ಲೆ ರಾಜ್ಯಮಟ್ಟದಲ್ಲಿಯೂ ಎಲ್ಲಾ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಎಲ್ಲಾ ಕಡೆಗಳಲ್ಲಿ ರಾಜ್ಯೋತ್ಸವ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಹಾಗೂ ಅವರ ವಾಹನಗಳಿಗೆ ಉತ್ತಮ ರೀತಿಯ ಅಲಂಕಾರ ಮಾಡಿರುವುದನ್ನು ನೋಡಲು ಬಲು ಚೆಂದ . ಅದೇ ರೀತಿ ಆಚರಣೆಯ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಸಹ ಕಾಪಾಡುವ ನಿಟ್ಟಿನಿಂದ ಎಲ್ಲಾ ಚಾಲಕರು ವಾಹನ ಚಲಾವಣೆ ಮಾಡುವಾಗ ಸಮವಸ್ತ್ರ ಧರಿಸಿ ಹಾಗೂ ತಮ್ಮ ವಾಹನದ ಎಲ್ಲಾ ದಾಖಲೆಗಳು ಸರಿಯಾಗಿ ಇಟ್ಟುಕೊಂಡು ಚಲಿಸುವುದರಿಂದ ಪ್ರಯಾಣಿಕರಿಗೂ ಹಾಗೂ ನಿಮಗೂ, ನಿಮ್ಮ ಕುಟುಂಬಕ್ಕೂ ಸಹಾಯವಾಗುತ್ತದೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳು ಮಾತನಾಡಿ ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿರಲಿಲ್ಲ ಅದಕ್ಕೂ ಮುಂಚೆ ಸುಮಾರು 70 ರಿಂದ 80 ಆಟಗಳು ರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿತ್ತು ಈ ಕೆಲ ದಿನಗಳಲ್ಲಿ ಆಟೋಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಹಾಗೂ ದುಡಿಮೆಯು ಸಹ ಕಡಿಮೆಯಾಗಿದೆ, ಈ ಕಾರಣಗಳಿಂದ ರಾಜ್ಯೋತ್ಸವ ಮಾಡಲು ಸಾಧ್ಯವಾಗಲಿಲ್ಲ ಈಗ ಕೇವಲ 30 ರಿಂದ 40 ಆಟ ಚಾಲಕರ ಒಮ್ಮತದಿಂದ ಇಂದು ಸರಳ ಹಾಗೂ ಅರ್ಥಪೂರ್ಣವಾಗಿ ರಾಜ್ಯೋತ್ಸವ ಮಾಡಿ ನೆರೆದಿದ್ದ ಗ್ರಾಮಸ್ಥರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡಲಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಾಲಕರು ಹಾಗೂ ಊರಿನ ಗ್ರಾಮಸ್ಥರು ಸ್ಥಳೀಯರು ಪೊಲೀಸ್ ಸಿಬ್ಬಂದಿ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು.





