--ಜಾಹೀರಾತು--

ರಾಗಿ ಕಟಾವಿಗೆ ಮದ್ಯವರ್ತಿಗಳ ಹಾವಳಿ

On: November 30, 2025 7:07 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

     ರಾಗಿ ಕಟಾವಿಗೆ ಮದ್ಯವರ್ತಿಗಳ ಹಾವಳಿ

ದೊಡ್ಡಬಳ್ಳಾಪುರ:ರೈತ. ಸ್ವಾವಲಂಬಿಯಾಗಿ ಚಳಿ ಗಾಳಿ ಹಗಲು ರಾತ್ರಿ ಎನ್ನದೆ ತನ್ನ ಜೀವನಾಧರಕ್ಕಾಗಿ ಜಮೀನನ್ನು ನಂಬಿ ವರ್ಷ ಪೂರ್ಣ ಉಳುಮೆ ಬಿತ್ತನೆ ಮಾಡಿ ಫಸಲು ಬಂತು ರಾಗಿ ಕೊಯ್ದು ಮಾಡುವ ದಾವಂತ ರೈತರಲ್ಲಿ ಪ್ರಾರಂಭವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ರಾಗಿ ಕಟಾವು ಮಾಡುವ ಯಂತ್ರಗಳ ಬಾಡಿಗೆ ನಿಗದಿಗಿಂತ ಹೆಚ್ಚಾಗಿ ಪಡೆಯುತ್ತಿದ್ದು, ಜಿಲ್ಲಾಧಿಕಾರಿಗಳ ಮಾತಿಗೂ ಬೆಲೆ ಇಲ್ಲದಂತಾಗಿದೆ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ. ದಿತ್ವಾ ಚಂಡಮಾರುತ ನ. 29 ರಿಂದ ತಂತರು ಮಳೆ ಬರುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆಯ ವರದಿಗಳು ಬರುತ್ತಿದ್ದಂತೆ, ರೈತರು ರಾಗಿ ಕಟಾವಿಗೆ ಮುಂದಾಗಿದ್ದಾರೆ. ಇವರ ಅಸಹಾಯಕ ಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡಿರುವ ಮಧ್ಯವರ್ತಿಗಳು ಎರಡು ದಿನಗಳಿಂದ ಈಚೆಗೆ ದಿಢೀರನೆ ರಾಗಿ ಕಟಾವು ಮಾಡುವ ಯಂತ್ರಗಳ ಬಾಡಿಗೆಯನ್ನು ಹಿಂಬಾಗಿಲಿನ ಮೂಲಕ ಹೆಚ್ಚುಮಾಡಿದ್ದಾರೆ.

ಪ್ರಸ್ತುತ ಇಂಧನ ವೆಚ್ಚ ಇತರೇ ನಿರ್ವಹಣ ವೆಚ್ಚಗಳನ್ನು ಪರಿಗಣಿಸಿ ರಾಗಿ ಕಟಾವು ಮಾಡಲು ಪ್ರತಿ ಗಂಟೆಗೆ ನ್ಯೂ ಹಾಲೆಂಡ್ ಜಾನ್ನೀರ್ ಕಂಪನಿಯ ದೊಡ್ಡ ಕಟಾವು
ಯಂತ್ರಕ್ಕೆ 3,450 ರೂ. ಹಾಗೂ ಕ್ಲಾಸ್ ಮತ್ತು ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ ಒಂದು ಗಂಟೆಗೆ 2,750 ರೂ. ಮೀರದಂತೆ ಬಾಡಿಗೆಯನ್ನು ತೆಗೆದು ಕೂಳ್ಳಬೇಕು ಎಂದು ಜಿಲ್ಲಾಡಳಿತ ಅದೇಶ ಇದ್ದರು.
ಈ ಅದೇಶವನ್ನು ಗಾಳಿಗೆ ತೂರಿ ಮದ್ಯ ವರ್ತಿಗಳು ಕಟ್ಟಾವು ಮಾಡುವ ಯಂತ್ರದ ಮಾಲೀಕರನ್ನು ತಮ್ಮ ಹಿಡಿತದಲ್ಲಿ ಇರಿಸಿ ಇವರೆ ರೈತರ ಹತ್ತಿರ ಹೋಗಿ ವ್ಯವಾಹಾರ ಮಾಡಿ ದೊಡ್ಡ ಯಂತ್ರಕ್ಕೆ 4000 ಸಾವಿರ ಚಿಕ್ಕ ಯಂತ್ರಕ್ಕೆ 3000 ಸಾವಿರ ನಿಗದಿ ಪಡಿಸಿ ಕಮಿಷನ್ ವ್ಯಾಪಾರ ಮಾಡುತ್ತಿದ್ದಾರೆ .
ಯಂತ್ರದ ಮಾಲಿಕರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆ-2005ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಇದ್ದರು . ಜಿಲ್ಲಾಧಿಕಾರಿಗಳ ಈ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಗಿ ಕಟಾವು ಯಂತ್ರಗಳ ಮಾಲಿಕರು ಮಧ್ಯವರ್ತಿಗಳ ಮೂಲಕ ಹೆಚ್ಚಿನ ಬಾಡಿಗೆ ಪಡೆಯುತ್ತಿದ್ದಾರೆ ಎಂದು ತಾಲ್ಲೂಕಿನ ಕುಮಾರ್ ನಾಯ್ಕ್ ತಿಳಿಸಿದ್ದಾರೆ.
ರೈತ ಬೆಳೆದ ದವಸಧಾನ್ಯಗಳು (ರಾಗಿ) ಶೇಕರಣೆ ಮಾಡುಕೊಳ್ಳುವ ದಾಸ್ತಾನು ಇಲ್ಲದೆ ತೊಂದರೆಯಲ್ಲಿರುವ ರೈತರಿಗೆ ಅದಷ್ಠು ಬೇಗ ರಾಗಿ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಸಹಕಾರಿಯಾಗ ಬೇಕು ಹಾಗು 2025-2026ನೇ ಸಾಲಿನ ರಾಗಿ ಖರೀದಿಗಾಗಿ ನೋಂದಣಿ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದೆ ಮತ್ತು ಡಿಸೆಂಬರ್ 15, 2025 ರಂದು ಕೊನೆಗೊಳ್ಳುತ್ತದೆ ಅಲ್ಲದೆ ರಾಗಿಯನ್ನು ತುಂಬಿ ಕೀಲೋ ಮೀಟರ್ ವಾಹನಗಳು ನಿಲ್ಲುವುದು ತಪ್ಪುತ್ತದೆ
ಜಿಲ್ಲಾಧಿಕಾರಿಗಳು ರಾಗಿ ಕಟಾವು ಮಾಡುವಯಂತ್ರಕ್ಕೆ ಇಂತಿಷ್ಟು ಹಣ ನಿಗದಿ ಮಾಡುವಂತೆ ಭಾರತೀಯ ದಕ್ಷಿಣಾ ಪ್ರಾಂತ್ಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಜೀ ಮನವಿ ಮಾಡಿದ್ದಾರೆ.