ದಲಿತರನ್ನು ಮನಬಂದಂತೆ ಬಳಸಿಕೊಂಡ ಕಾಂಗ್ರೆಸ್ ಗೆ ದಲಿತ ಸಿಎಂ ನೀಡುವಲ್ಲಿ ನಿರ್ಲಕ್ಷ್ಯ ಯಾಕೇ?
ಜಿಲ್ಲೆಯಾದ್ಯಂತ ಡಾಕ್ಟರ್ ಜಿ ಪರಮೇಶ್ವರವರು ಸಿಎಂ ಆಗಬೇಕೆಂಬ ಕೂಗು
ತುಮಕೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಪಂಚ ಯೋಜನೆಗಳೊಂದಿಗೆ ಮುಂದುವರೆದಿದ್ದು. ನವೆಂಬರ್ ಕ್ರಾಂತಿಯ ನಂತರ ಸಿಎಂ ಸ್ಥಾನದ ಹಗ್ಗ ಜಗ್ಗಾಟ ಮತ್ತಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ. ಪ್ರಾಮಾಣಿಕ ನಾಯಕ ಡಾ. ಜಿ ಪರಮೇಶ್ವರ್. ಎಂಟು ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆ. ರಾಜ್ಯದ ಉಪಮುಖ್ಯಮಂತ್ರಿಯಾಗಿ ರಾಜ್ಯವನ್ನು ಮುನ್ನಡೆಸಿರುವ ಡಾಕ್ಟರ್ ಜಿ ಪರಮೇಶ್ವರ್ ರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಬೇಕೆಂದು ಜಿಲ್ಲೆಯ ತುಮಕೂರು. ಕುಣಿಗಲ್. ತಿಪಟೂರು. ಪಾವಗಡ. ಕೊರಟಗೆರೆ ಮುಂತಾದ ತಾಲೂಕುಗಳಲ್ಲಿ ಡಾ. ಜಿ ಪರಮೇಶ್ವರ್ ರವರ ಅಭಿಮಾನಿ ಸಂಘಗಳು ಹಾಗೂ ದಲಿತ ಸಂಘಟನೆ ಒಕ್ಕೂಟದ ಸಾವಿರಾರು ಅಭಿಮಾನಿಗಳಿಂದ ಸಿಎಂ ಸ್ಥಾನ ನೀಡಬೇಕೆಂದು ಜನಾಂದೋಲನ ಕಾರ್ಯಕ್ರಮವನ್ನು ಮಾಡುತ್ತಿದ್ದು. ವಿಶೇಷವಾಗಿ ಸ್ವ ಕ್ಷೇತ್ರ ಕೊರಟಗೆರೆಯಲ್ಲಿ ಮಂಗಳವಾರ ಕೊರಟಗೆರೆ ಬಸ್ ನಿಲ್ದಾಣದಿಂದ ಬೃಹತ ಮೆರವಣಿಗೆ ಕೈಗೊಂಡು ಸಾವಿರಾರು ಜನಸಂಖ್ಯೆಯಲ್ಲಿ ಕೂಗುತ ಡಾ. ಜಿ ಪರಮೇಶ್ವರ್ ಅವರು ಸಿಎಂ ಮಾಡಬೇಕೆಂದು ಒತ್ತಾಯಿಸಿ ಜಾತ ನಡೆಸಿ ಸವ್ಯಸಾಚಿ ಡಾ ಜಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ದಿನಾಂಕ 9-12- 2025 ರಂದು ಕೊರಟಗೆರೆ ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಎಸ್ಎಸ್ಆರ್ ಸರ್ಕಲ್ ವರೆಗೆ ಸಹಸ್ರಾರು ಜನ ಕಾರ್ಯಕರ್ತರು ಮುಖಂಡರಗಳು ಅಭಿಮಾನಿಗಳು ಸಾರ್ವಜನಿಕರು ಸೇರಿ ಡಾ ಜಿ ಪರಮೇಶ್ವರ್ ಅವರನ್ನು ಈ ಬಾರಿ ಮುಖ್ಯಮಂತ್ರಿಗಳನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಸಂವಿಧಾನ ಬರೆದವರಿಗೆ ಸಂವಿಧಾನ ಹಿಡಿಯುವ ಹಕ್ಕು ಇಲ್ಲವೇ ಎಂದು ಜೈ ಕಾರ ಘೋಷಿಸುತ್ತಾ ಮೆರವಣಿಗೆ ನಡೆಸಿದರು,
ಬೋಚನಹಳ್ಳಿ ವೆಂಕಟೇಶ್ ರವರು ಮಾತನಾಡಿ : ಡಾಕ್ಟರ್ ಜಿ ಪರಮೇಶ್ವರ್ ಅವರು ದಲಿತರಿಗೆ ಮಾತ್ರ ಸೀಮಿತವಾಗಿರದೆ ತಾಲೂಕಿನಲ್ಲಿ ಎಲ್ಲಾ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ನಡೆಸುತ್ತಿದ್ದು. ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಉನ್ನತವಾದಂತ ಸರ್ಕಾರವನ್ನು ನಡೆಸಲು ಸಹಕಾರಿಯಾಗುತ್ತದೆ ಎಂದರು.
ಗೋಪಾಲಕೃಷ್ಣರವರು (ಗ್ಯಾರೆಂಟಿ ಯೋಜನೆ ಉಪಾಧ್ಯಕ್ಷ ತಾಲೂಕು) ಮಾತನಾಡಿ : ಹಲವಾರು ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ದಲಿತ ಮುಖಂಡರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದು ಅದರಲ್ಲಿ ಡಾಕ್ಟರ್ ಜಿ ಪರಮೇಶ್ವರ್ ಅವರು ಕೂಡ ಒಬ್ಬರಾಗಿದ್ದು ಕಾರ್ಯಕರ್ತರಂತೆ ಕೆಲಸ ಮಾಡಿದ್ದಾರೆ. ಅದನ್ನು ಹೊರತುಪಡಿಸಿ ತಾಲೂಕಿನಲ್ಲಿ ನಾವು ಕೂಡ ದಲಿತ ಮುಖಂಡರುಗಳು ಎಲ್ಲಾ ಸೇರಿ ಅವರು ಮುಖ್ಯಮಂತ್ರಿ ಆಗಬೇಕೆಂದು ಇವತ್ತು ಈ ಜಾತವನ್ನ ಹಮ್ಮಿಕೊಂಡಿದ್ದು. ಮುಂದಿನ ದಿನಗಳಲ್ಲಿ ಡಾಕ್ಟರ್ ಜಿ ಪರಮೇಶ್ವರ್ ರವರಿಗೆ ಸಿಎಂ ಸ್ಥಾನವನ್ನು ಕೊಡಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿ ದಲಿತ ಮುಖಂಡರಿಂದ ಉಗ್ರವಾದ ಹೋರಾಟ ಜಾತಗಳನ್ನ ಕೈಗೊಳ್ಳುತ್ತೇವೆ ಎಂದರು.
ತಾಲೂಕು ಮಹಿಳಾಧ್ಯಕ್ಷೆ ಜಯಮ್ಮ ರವರು ಮಾತನಾಡಿ :ರಾಜ್ಯದಲ್ಲಿ ದಣಿವರಿಯಾದ ರಾಜಕಾರಣಿ ಯಾರಾದ್ರೂ ಒಬ್ಬರು ಇದ್ರೆ ಅದು ಡಾಕ್ಟರ್ ಜಿ ಪರಮೇಶ್ವರ್ ಯಾವುದೇ ಒಂದು ಜಾತಿಗೆ ಮಾತ್ರ ಮೀಸಲಾಗಿರದೆ ಎಲ್ಲಾ ಜಾತಿಯ ಅಭಿವೃದ್ಧಿಗೆ ಶ್ರಮಿಸಿರುವ ರಾಜಕಾರಣಿ ಡಾಕ್ಟರ್ ಜಿ ಪರಮೇಶ್ವರ್ ಅವರು ರಾಜ್ಯದ ಉದ್ದಾರಕ್ಕಾಗಿ ಡಾಕ್ಟರ್ ಜಿ ಪರಮೇಶ್ವರ್ ಅವರ ಸಿಎಂ ಆಗಬೇಕು ಎಂದರು.
ನೇತೃತ್ವ ವಹಿಸಿದ ಅರಕೆರೆ ಶಂಕರ್ AD ಬಲರಾಮಯ್ಯ ಮಹಾಲಿಂಗಪ್ಪ. ಜಯಮ್ಮ. ವೆಂಕಟೇಶ್. ಬೂಚನಳ್ಳಿ ಗೋಪಾಲಕೃಷ್ಣ .ಓಬಳರಾಜು ದಿನೇಶ್ ವಾಲೆ ಚಂದ್ರಯ್ಯ ಕೋರ ನಜೀರ್ ಅಹ್ಮದ್ ಮಿಲ್ಟ್ರಿ ಪ್ರಕಾಶ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದ & ಬೂದ್ಗವಿ ರಮೇಶ್ ಗ್ರಾಮ ಪಂಚಾಯತಿ ಸದಸ್ಯರಾದ ವಿ ರಾಜಗೋಪಾಲ್ HC ದೊಡ್ಡಯ್ಯ ಪುಟ್ಟರಾಜು ನಿವೃತ್ತಿ ಶಿಕ್ಷಕರು. ಎಸ್ಸಿ ಘಟಕದ ವಿಭೂತಿ ಸಿದ್ದಪ್ಪ. ಕವನದಾಳ ಶಿವಣ್ಣ ಪ ಣ್ಣೇನಹಳ್ಳಿ ಗಂಗರಾಜು ನಾಗರಾಜು ಬೀಡಿಪುರ ಸುರೇಶ್ ಜಯರಾಮಣ್ಣ ಅನಿತಾ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಪುರುಷೋತ್ತಮ್ ತೊಗರಿ ಘಟ್ಟ ಗೋವಿಂದರಾಜ್ ಗಂಗಣ್ಣ ಪುರವರ ಚಂದ್ರು ಇನ್ನು ಅನೇಕ ಮುಖಂಡರು ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ ಭರತ್. ಕೆ





