ವಿಶ್ವ ಮಾನವ ಹಕ್ಕುಗಳ ದಿನವನ್ನು ಮಾಜಿ ಶಾಸಕ ಜಿ.ಚಂದ್ರಣ್ಣ ಅವರಿಂದ ಚಾಲನೆ
ದೇವನಹಳ್ಳಿ :- ಮಾನವ ಹಕ್ಕುಗಳ ಪರಿಕಲ್ಪನೆಯು ಪ್ರತಿ ಯೊಬ್ಬ ನಾಗರೀಕನ ಹುಟ್ಟಿನಿಂದಲೇ ಹೊಂದಿರುವ ಮೂಲಭೂತ ಹಕ್ಕುಗಳಾಗಿವೆ ಎಂದು ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ. ಚಂದ್ರಣ್ಣ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಲಯನ್ಸ್ ಕ್ಲಬ್ ನಲ್ಲಿ ಭಾರತ ದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಮಲೋಚನಾ ಸಮಿತಿ ಯಿಂದ ವಿಶ್ವ ಮಾನವ ಹಕ್ಕುಗಳ ದಿನವನ್ನು ಮಾಜಿ ಶಾಸಕ ಜಿ. ಚಂದ್ರಣ್ಣ ಉದ್ಘಾಟಿಸಿ ಮಾತನಾಡಿ, ದೇಶದಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತದೆ ವಿಶೇಷವಾಗಿ ಆರಕ್ಷಕ ಠಾಣೆಗಳಲ್ಲಿ ಇಂತಹ ಪ್ರಕರಣಗಳನ್ನು ತಾವೆಲ್ಲ ಕಂಡು ಕೇಳಿ ತಿಳಿದಿದ್ದು ಸರಿಪಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ.
ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಸಂವಿ ಧಾನ ಪೀಠಿಕೆಯಲ್ಲಿ ಸರ್ವರಿಗೂ ಸಮಪಾಲು ಸಮ ಬಾಳು ಎಂಬ ಸಂದೇಶ ಅರಿತವರು ಕಾನೂನು ಉಲಂಘನೆ ಮಾಡ ಲಾರರು. ರಾಷ್ಟ್ರೀಯ ಮಾನವ ಹಕ್ಕುಗಳ ಮಂಡಳಿ ಯಿಂದ ವಿಶ್ವಮಾನವ ಹಕ್ಕುಗಳ ದಿನಾಚರಣೆಯನ್ನು ಹಮ್ಮಿಕೊಳ್ಳು ವುದಲ್ಲದೆ ತಮ್ಮನ್ನು ಕೂಡ ಸಮಾರಂಭದ ವಿಷಯ ವಾಗಿ ಮಾತನಾಡಿಸಿದ ತಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸು ವೆಂದರು.
ರಾಷ್ಟ್ರೀಯ ಮಾನವ ಹಕ್ಕುಗಳ ಸಮಲೋಚನಾ ಸಮಿತಿ ಸಂಸ್ಥಾಪಕರಾದ ಡಾ.ರಾಮಚಂದ್ರಪ್ಪ ಮಾತನಾಡಿ,
ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಿ ಸಮಾಜ ದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಸದುದ್ದೇಶದಿಂದ ವಿಶ್ವ ಮಾನವ ಹಕ್ಕುಗಳ ದಿನವನ್ನು ಕಳೆದ ಹಲವು ವರ್ಷ ಗಳಿಂದ ಆಚರಿಸುತ್ತಾ ಬಂದಿದ್ದೇವೆ. ಭಾರತದಲ್ಲಿ ವಿವಿಧತೆ ಯಲ್ಲಿ ಏಕತೆಯನ್ನು ಕಂಡಂತೆ ಜಾತ್ಯಾತೀತ ದೇಶವಾಗಿದ್ದು, ಹುಡುಗೆ ತೊಡುಗೆ, ಭಾಷೆ ಉಡುಪು ನಾನಾ ಸಂಪ್ರದಾಯ ಗಳನ್ನು ಮೈ ಗೂಡಿಸಿ ಕೊಂಡಿರುವ ನಮ್ಮ ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟಲು ಸಮಾರಂಭದಲ್ಲಿ ಆಗಮಿಸಿದ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಕೆ.ರಾಮಚಂದ್ರಪ್ಪ (ಅಬ್ರಹಾಂ) ಎಂ.ಸಂಸ್ಥಾಪಕರಾದ, ರಾಷ್ಟ್ರೀಯ ಗೌರವ ಅಧ್ಯಕ್ಷ ಹೆಚ್.ಬಿ. ಸಂಪತ್, ರಾಷ್ಟ್ರೀಯ ಗೌರವಾಧ್ಯಕ್ಷ ಶ್ರೀಧರ್ ನಾಮ ಸಲಹೆಗಾರ ಬಿ.ಎಂ. ಮಂಜುನಾಥ, ಕಾರ್ಯಾಧ್ಯಕ್ಷ ಮುನಿ ರಾಜು ಪಿ.ಎಂ. ಉಪಾಧ್ಯಕ್ಷ ಕುಮಾರ್ ಎನ್. ಪ್ರಧಾನ ಕಾರ್ಯದರ್ಶಿ ಎಂ.ಶ್ರೀನಿವಾಸಮೂರ್ತಿ ಕಾರ್ಯದರ್ಶಿ, ನವೀನ್ ಕುಮಾರ್ ಆರ್. ಖಜಾಂಚಿ ಉದಯ್, ಕಾರ್ಯ ಕಾರಿ ಸದಸ್ಯ ಪ್ರೇಮ್ ಕುಮಾರ್ ಎನ್.ಪಿ ರಾಷ್ಟ್ರೀಯ ಕೋ-ಆರ್ಡಿನೇಟರ್ಸಿ.ಸಂತೋಷ ಚೆರಿಯಾನ್, ಕಾರ್ಯಕಾರಿ ಸದಸ್ಯ, ರೀಗನ್ ಸಿ. ಅಧ್ಯಕ್ಷರು, ಕಲೆ, ಸಂಸ್ಕೃತಿ ಮತ್ತು ಶಿಕ್ಷಣ
ಕಾರ್ಯಕಾರಿ ಸದಸ್ಯ ಶ್ರೀನಾಥ ಪಿ.ಎಂ.ಕರ್ನಾಟಕ ಗೌರವ ಧ್ಯಕ್ಷ ಮಂಜುನಾಥ ಪಿ.ರಾಜ್ಯಾಧ್ಯಕ್ಷ ಡಾ.ರಾಜು, ರಾಜ್ಯ ಉಪಾಧ್ಯಕ್ಷ ಎಂ.ಎಂ.ನರಸಿಂಹಮೂರ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಮಣ್ಣ ವಿ. ಕಾರ್ಯದರ್ಶಿ ಗಳಾದ ಕೃಷ್ಣಪ್ಪ ಎಸ್.ಎಂ. ಡಾ.ವಿ.ವೆಂಕಟೇಶ್, ಕಲೆ, ಸಂಸ್ಕೃತಿ ಮತ್ತು ಶಿಕ್ಷಣ ರಾಮಾಂಜನಪ್ಪ ಮಾಧ್ಯಮ ಸಲಹೆಗಾರ ಜಿಲ್ಲಾಧ್ಯಕ್ಷ, ಸಂದೀಪ್ , ಕರ್ನಾಟಕ ರಾಜ್ಯ ಯುವ ಅಧ್ಯಕ್ಷ ಎನ್.ಕಿರಣ್ ಯುವ ಉಪಾಧ್ಯಕ್ಷರು ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಸುಬ್ರಮಣಿ ಕೋಲಾರ ಶ್ರೀನಿವಾಸ್, ಮಹಿಳಾ ಘಟಕದ ಕಾರ್ಯದ್ಯಕ್ಷೆ ಕಲಾವತಿ, ಕಾರ್ಯದರ್ಶಿ ಲತಾ ಸೇರಿದಂತೆ ಇತರರು ಇದ್ದರು.





