ಎಚ್ ಡಿ ಕೆ, ಹುಟ್ಟುಹಬ್ಬದ ಪುಟ್ಟಸ್ವಾಮಿರವರಿಂದ ವಿಶೇಷ ಪೂಜೆ
ಕೊಳ್ಳೇಗಾಲ:ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ 66 ನೇ ವರ್ಷದ ಹುಟ್ಟುಹಬ್ಬವನ್ನು ಜೆಡಿಎಸ್ ಕೊಳ್ಳೇಗಾಲ ವಿಧಾಸಭಾ ಕ್ಷೇತ್ರ ಅಧ್ಯಕ್ಷರು ಬಿ. ಪುಟ್ಟಸ್ವಾಮಿ ಹಾಗೂ ತಾಲ್ಲೂಕು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳವಾರ ಅದ್ದೂರಿಯಾಗಿ ಆಚರಣೆ ಮಾಡಿದರು.
ಎಚ್ ಡಿ. ಕುಮಾರಸ್ವಾಮಿಯವರು ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಹೆಚ್.ಡಿ.ಕುಮಾರಸ್ವಾಮಿರವರ ಹೆಸರಿನಲ್ಲಿ ಅರ್ಚನೆ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ಜೆಡಿಎಸ್ ಕ್ಷೇತ್ರಾಧ್ಯಕ್ಷ ಬಿ.ಪುಟ್ಟಸ್ವಾಮಿ ಅವರು ಕಾರ್ಯಕರ್ತರಿಗೆ ಸಿಹಿ ತಿನ್ಮಿಸುವ ಮೂಲಕ ಆಚರಿಸಿ ಬಳಿಕ ಮಾತನಾಡಿದ ಅವರು, ಇಂದು ನಮ್ಮ ನೆಚ್ಚಿನ ನಾಯಕರಾದ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ರವರ ಹುಟ್ಟುಹಬ್ಬದ ಅಂಗವಾಗಿ ಕೊಳ್ಳೇಗಾಲದ ಪ್ರಸಿದ್ದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಕುಮಾರಣ್ಣರವರಿಗೆ ದೇವರು ಹೆಚ್ಚು ಆಯಸ್ಸು ಆರೋಗ್ಯ ಭಾಗ್ಯಗಳನ್ನು ಕೊಡಲಿ ಹಾಗೂ ಕುಮಾರಣ್ಣರವರು ಮತ್ತೊಮ್ಮೆ
ರಾಜ್ಯದ ಮುಖ್ಯಮಂತ್ರಿಯಾಗಿ
ರಾಜ್ಯದ ಜನರ ಅಭಿವೃದ್ಧಿಗೆ ಅಗತ್ಯವಾದ ಸೌಲಭ್ಯಗಳು ಮತ್ತು ಯೋಜನೆಗಳನ್ನು ರೂಪಿಸಿ ಕರ್ನಾಟಕವನ್ನು ಉನ್ನತ್ತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಅವಕಾಶ ಮತ್ತೊಮ್ಮೆ ಸಿಗಲಿ ಎಂದು ನಾವೆಲ್ಲರೂ ಜೆಡಿಎಸ್ ಮುಖಂಡರು ಕಾರ್ಯಕರ್ತರುಗಳು ಸತಾಯಗತಾಯ ಪಕ್ಷವನ್ನು ಬಲ ಪಡಿಸುವ ನಿಟ್ಟಿನಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇವೆ ಎಚ್ ಡಿ ಕುಮಾರ್ ಸ್ವಾಮಿಯವರ ನೇತೃತ್ವದಲ್ಲಿ 2028 ರ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರ ಬರಲಿ ರಾಜ್ಯದ ಜನರ ಮತ್ತು ದೇವರ ಆಶೀರ್ವಾದ ಕುಮಾರಣ್ಣನವರ ಮೇಲೆ ಇರಲಿ ಎಂದು ದೇವರಲ್ಲಿ ವಿಶೇಷವಾಗಿ ಹರಕೆ ಮಾಡಲಾಗಿದೆ ಎಂದರು .
ಈ ಸಂಧರ್ಭದಲ್ಲಿ ಜೆಡಿಎಸ್ ಮುಖಂಡರು ರಾಚಯ್ಯ, ಶಶಿಶೇಖರ್, ರವಿ ಅಂಬಳೆ, ಜಯಮರಿ, ಸೋಮಣ್ಣ ಯರಿಯೂರು, ಯಳಂದೂರು ಅಧ್ಯಕ್ಷರು ಕೆಸ್ತೂರು ಆನಂದ್, ಪ್ರಧಾನ ಕಾರ್ಯದರ್ಶಿ ಅಂಬಳೆ ರವೀಶ್, ಕೆಸ್ತೂರು ಮರಪ್ಪ, ವೈ.ಕೆ.ಮೋಳೆ ಸೋಮಣ್ಣ, ಗುಂಬಳ್ಳಿ ರಾಮದಾಸನಾಯಕ, ನಟರಾಜು ಕೊಮರನಪುರ, ಮಾದೇಶ್.ಕೆ, ಹೊಂಗನೂರು ರವಿ , ರಾಜು, ಯಳಂದೂರು ಟೌನ್ ಚಂದ್ರು, ಗುರುಲಿಂಗು, ಕಟ್ನವಾಡಿ ಎಸ್.ಬಸವಯ್ಯ, ಸೂರಪೂರ ನಾಗೇಂದ್ರ ಹಾಗೂ ಇತರರು ಇದ್ದರು.





