ಡಾನ್ ಬೋಸ್ಕೋ ಕಾಲೇಜಿಗೆ ಒಲಿದ ನಗದು ಪುರಸ್ಕಾರ
ಕೊಳ್ಳೇಗಾಲ : 2023 -24 ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. ನೂರಕ್ಕೆ ನೂರು ಫಲಿಶಾಂಶ ಪಡೆದ ಕಾಲೇಜುಗಳಿಗೆ ಕೊಡಮಾಡುವ ಪುರಸ್ಕಾರಕ್ಕೆ ತಾಲ್ಲೂಕಿನ ಡಾನ್ ಬೋಸ್ಕೋ ಪಿ ಯು ಕಾಲೇಜು ಭಾಜನವಾಗಿದೆ.
ತಾಲ್ಲೂಕಿನ ಪ್ರಕಾಶ್ ಪಾಳ್ಯ ಗ್ರಾಮದಲ್ಲಿರುವ ಡಾನ್ ಬೋಸ್ಕೋ ಪಿ ಯು ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. ನೂರರಷ್ಟು ಫಲಿತಾಂಶ ಪಡೆದಿದ್ದು ಬೆಂಗಳೂರಿನ ರಾಜ್ಯ ಶಿಕ್ಷಕರ ಕಲ್ಯಾಣನಿಧಿ ನೀಡುವ ನಗದು ಪುರಸ್ಕಾರವನ್ನು ಪಡೆದುಕೊಂಡು ಜಿಲ್ಲೆಗೆ ಕೀರ್ತಿತಂದಿದೆ .
ಡಾನ್ ಬೋಸ್ಕೋ ಪಿ ಯು ಕಾಲೇಜಿನ 101 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆದಿದ್ದು ಅದರಲ್ಲಿ 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು 66 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ನಲ್ಲಿ ತೇರ್ಗಡೆಯಾದರು ಹಾಗೂ 7ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದಾರೆ ಈ ಮೂಲಕ 101 ವಿದ್ಯಾರ್ಥಿಗಳು ಪರೀಕ್ಷಯಲ್ಲಿ ತೇರ್ಗಡೆಯಾಗುವ ಮೂಲಕ ಡಾನ್ ಬೋಸ್ಕೋ ಪಿ ಯು ಕಾಲೇಜು ಶೇ. ನೂರರಷ್ಟು ಫಲಿತಾಂಶ ಪಡೆಯಿತು
ಕಾಲೇಜಿನ ನಿರ್ದೇಶಕರಾದ ರೆವರಂಡ್ ಪಾದರ್ ಲಾರೆನ್ಸ್ ಮಾತನಾಡಿ ನಮ್ಮ ಸಂಸ್ಥೆಯು ಪ್ರತಿವರ್ಷವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತ ಬಂದಿದೆ ,ಇದಕ್ಕೆ ಕಾರಣ ನಮ್ಮ ಸಂಸ್ಥೆಯಲ್ಲಿರುವ ಶಿಸ್ತುಬದ್ದವಾದ ಅಭ್ಯಾಸ ಹಾಗೂ ನುರಿತ ಉಪನ್ಯಾಸಕರ ಭೋದನೆಯಾಗಿದೆ . ಈ ಪುರಸ್ಕಾರವು ನಮಗೆ ಮತ್ತಷ್ಟು ಪುಷ್ಠಿಕರಣ ನೀಡಿದೆ ಎಂದರು.
ಉಪನಿರ್ದೇಶಕಿ ಶ್ರೀಮತಿ ಪುಟ್ಟಗೌರಮ್ಮರವರಿಂದ ಕಾಲೇಜಿನ ಪ್ರಾಂಶುಪಾಲರಾದ ಕೆ ಮಹದೇವ ರವರು ಕಾಲೇಜಿನ ಪರವಾಗಿ ನಗದು ಪುರಸ್ಕಾರ ಹಾಗೂ ಫಲಕವನ್ನು ಪಡೆದುಕೊಂಡರು.
ವರದಿ: ಆರ್ ಉಮೇಶ್ ಮಲಾರಪಾಳ್ಯ





