ಕೆ.ಆರ್.ಪೇಟೆ: ಡಾ.ಪುನೀತ್ ರಾಜ್ ಕುಮಾರ್ ಅಲ್ಯುಮಿನಿಯಂ ಫ್ರೇಂ ಬ್ಯಾನರ್ ಹರಿದು ಹಾಕಿರುವ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ.
ತಾಲ್ಲೂಕು ಅಪ್ಪು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಲ್.ಮಹೇಶ್ ನೇತೃತ್ವದಲ್ಲಿ ಅಭಿಮಾನಿಗಳ ಪ್ರತಿಭಟನೆ
ಕೆ.ಆರ್.ಪೇಟೆ,ಡಿ.17: ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ವೃತ್ತದಲ್ಲಿರುವ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಪುತ್ಥಳಿ ಬಳಿ ಅಳವಡಿಸಿದ್ದ ಅಲ್ಯೂಮಿನಿಯಂ ಪ್ರೇಮ್ ಒಳಗೊಂಡ ಬ್ಯಾನರ್ ಅನ್ನು ಯಾರೋ ಕಿಡಿಕೇಡಿಗಳು ನೆನ್ನೆ ರಾತ್ರಿ ಹರಿದು ಬಿಸಾಡುವ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ಅವಮಾನ ಮಾಡಿದ್ದಾರೆ. ಅಲ್ಲದೆ ಡೇವಿಲ್ ಸಿನಿಮಾ ಬಿಡುಗಡೆಯಾಗಿರುವ ಕಾರಣ ದರ್ಶನ್ ಮತ್ತು ಅಪ್ಪು ಅಭಿಮಾನಿಗಳ ನಡುವೆ ಕಂದಕವನ್ನು ಸೃಷ್ಠಿ ಮಾಡಲು ಈ ಕೃತ್ಯ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ತಾಲ್ಲೂಕು ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪುತ್ತಳಿ ಬಳಿ ಪ್ರತಿಭಟನೆ ನಡೆಸಿ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.
ಪೊಲೀಸರಿಗೆ ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕು ಅಪ್ಪು ಯುವ ಸೇನಾ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಲ್.ಮಹೇಶ್ ಅವರು ಡಾ.ಪುನೀತ್ ರಾಜ್‌ಕುಮಾರ್ ಅವರ ಪುತ್ತಳಿಯನ್ನು ದಾನಿಗಳ ನೆರವಿನಿಂದ ನಿರ್ಮಾಣ ಮಾಡಿ ನಿತ್ಯವೂ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ನಡೆದ ಅಪ್ಪು ಅವರ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಅಲ್ಯೂಮಿನಿಯಂ ಫ್ರೇಮ್ ನಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸುಂದರವಾದ ಬ್ಯಾನರ್ ಅಳವಡಿಸಲಾಗಿತ್ತು. ಇದೂವರೆವಿಗೂ ಸುಮ್ಮನಿದ್ದ ಕಿಡಿಗೇಡಿಗಳನ್ನು ಡೇವಿಲ್ ಸಿನಿಮಾ ಬಿಡುಗಡೆಯಾದ ಎರಡು ದಿನದ ನಂತರ ಬ್ಯಾನರ್ ಹರಿದು ಹಾಕುವ ಮೂಲಕ ದರ್ಶನ್ ಅಭಿಮಾನಿಗಳು ಮತ್ತು ಪುನೀತ್ ಅಭಿಮಾನಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಅಶಾಂತಿ ಉಂಟು ಮಾಡಲು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಅಪ್ಪು ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳು ನಮ್ಮ ತಾಲ್ಲೂಕಿನಲ್ಲಿ ಪರಸ್ಪರ ಸಹೋದರರಂತೆ ಇದ್ದೇವೆ. ಕೆಲವು ಕಿಡಿಗೇಡಿಗಳು ಎರಡೂ ಅಭಿಮಾನಿಗಳ ಬಳಗದ ನಡುವೆ ದ್ವೇಷ ಭಾವನೆ ಮೂಡಿಸಲು ಈ ಕೃತ್ಯ ಮಾಡಿದ್ದಾರೆ. ಹಾಗಾಗಿ ಕಿಡಿಗೇಡಿಗಳು ಯಾರೇ ಆಗಲಿ ಕೂಡಲೇ ಪತ್ತೆ ಹಚ್ಚಿ ಬಂಧಿಸುವAತೆ ಮನವಿ ಮಾಡಿದರು. ಪೊಲೀಸರು ಪ್ರವಾಸಿ ಮಂದಿರ ವೃತ್ತದಲ್ಲಿ ಟ್ರಾಫಿಕ್ ಪೊಲೀಸರು ಅಳವಡಿಸಿರುವ ಸಿಸಿ ಟೀವಿ ಪುಟೇಜ್ ಪರಿಶೀಲಿಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಕೆ.ಎಲ್.ಮಹೇಶ್ ಪೊಲೀಸ್ ಅಧಿಕಾರಿಗಳನ್ನು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಈ ಸಂದರ್ಭದಲ್ಲಿ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್, ಅಪ್ಪು ಸೇವಾ ಟ್ರಸ್ಟ್ ಕಾರ್ಯದರ್ಶಿ ಹರೀಶ್, ಗೌರವಾಧ್ಯಕ್ಷ ಜಗದೀಶ್, ಪ್ರಿಂಟ್ ಪುನೀತ್, ದರ್ಶನ್ ಅಭಿಮಾನಿಗಳ ಬಳಗದ ಯುವರಾಜ್, ಚಂದ್ರು, ರಾಮಣ್ಣ, ಶ್ರೀನಿಧಿ, ಸತೀಶ್, ಅನಿಲ್, ಹೋಟೆಲ್ ಯೋಗರಾಜ್ ಸೇರಿದಂತೆ ತಾಲ್ಲೂಕು ದರ್ಶನ್ ಮತ್ತು ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳದ ಪದಾಧಿಕಾರಿಗಳು ಉಪಸ್ಥಿತರಿದ್ದರು.





