ಡಿಕೆ ಶಿವಕುಮಾರ್ ಸಿಎಂ ಆಗದಿದ್ದಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸರ್ವನಾಶ: ಪ್ರಣವಾನಂದ ಶ್ರೀ ಮಹಾ ಸ್ವಾಮೀಜಿ ಭವಿಷ್ಯ
ತಿಪಟೂರು:ಡಿಕೆ ಶಿವಕುಮಾರ್ ಅವರಿಗೆ ಸಿಎಂ ಕುರ್ಚಿ ಬಿಟ್ಟುಕೊಡದೆ ಇದ್ದಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುವುದೆಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಸಿಎಂ ಗೆ ಗದ್ದುಗೆ ಬದಲಾವಣೆ ವಿಚಾರದಲ್ಲಿ ಇದೀಗ ಸ್ವಾಮೀಜಿಗಳು ಅಖಾಡಕ್ಕಳಿದಿದ್ದು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ನಂತರ ಇದೀಗ ಈಡಿಗ ಸಮಾಜದ ಪೀಠಾಧ್ಯಕ್ಷರಾದ ಪ್ರಾಣವಾನಂದ ಶ್ರೀ ಮಹಾಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ತಿಪಟೂರು ತಾಲೂಕಿಗೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಈಡಿಗ ಸಮಾಜದ ಪ್ರಣವಾನಂದ ಶ್ರೀ ಮಹಾ ಸ್ವಾಮೀಜಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು. ನುಡಿದಂತೆ ನಡೆಯಬೇಕಾದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.
ಎರಡುವರೆ ವರ್ಷ ಪೂರೈಸಿದ್ದು ಇನ್ನು ಎರಡುವರೆ ವರ್ಷ ಕೊಟ್ಟ ಮಾತಿನಂತೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕಾರ ಹಸ್ತಾಂತರ ಮಾಡದೆ ಹೋದರೆ ಕಾಂಗ್ರೆಸ್ ಸರ್ಕಾರ ಸರ್ವನಾಶವಾಗುವುದು ಎಂದು ಭವಿಷ್ಯ ನುಡಿದಿದ್ದಾರೆ.
ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಹಿಂದ ಸಮುದಾಯಕ್ಕೆ ಏನನ್ನು ಮಾಡಿದ್ದೀರಾ. ಎಂಬುದನ್ನು ಲಿಖಿತದ ಪತ್ರದ ಮೂಲಕ ತಿಳಿಸಲಿ.
ಅಹಿಂದ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಹೊರತು. ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ.
ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ. ಶಿವಕುಮಾರು ಅವರು ಎಲ್ಲಾ ರೀತಿಯಲ್ಲಿ ಯೋಗ್ಯರಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದುಳಿದಿದ್ದಾಗ ಅದೇ ಪಕ್ಷದಲ್ಲಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರ ಪಾತ್ರ ಅತ್ಯಂತ ಮಹತ್ವವಾದುದ್ದು. ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಹಗಲಿರಲು ಶ್ರಮಿಸಿದ್ದಾರೆ.
ಡಿಕೆ ಶಿವಕುಮಾರ ಮುಖ್ಯಮಂತ್ರಿ ಮಾಡಬೇಕೆಂದು ಕರ್ನಾಟಕ ರಾಜ್ಯದ 32 ಹಿಂದುಳಿದ ವರ್ಗಗಳ ಮಠಾಧೀಶರು ಒಕ್ಕಲಿನಿಂದ ಈಗಾಗಲೇ ಡಿಕೆ ಶಿವಕುಮಾರ್ ಅವರ ಮನೆಗೆ ತೆರಳಿ ಬೆಂಬಲ ಸೂಚಿಸುದ್ದೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಅವರ ಹಾಗೂ ಡಿಕೆ ಸುರೇಶ್ ಅವರ ತಲೆಯ ಮೇಲೆ ಪ್ರಮಾಣ ಮಾಡಿ ಎರಡುವರೆ ವರ್ಷ ಅವರಿಗೆ ಬಿಟ್ಟುಕೊಡುತ್ತೇವೆ ಎಂದು ಹೇಳಿಕೆ ನೀಡಿದ್ದರು.
ತಿಪಟೂರು:ಆದರೆ ಆಡಿದ ಮಾತಿಗೆ ಬೆಲೆ ಕೊಡದೆ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸದೆ ಇರುವುದು ದುರದೃಷ್ಟಕರ. ಅತಿ ಶೀಘ್ರದಲ್ಲಿ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡಲೇಬೇಕೆಂದು ಆಗ್ರಹಿಸಿದರು.
ವರದಿ:ಮಂಜುನಾಥ್ ಡಿ ತಿಪಟೂರು





