ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಆರ್ ಪೇಟೆಯ
ಎಸ್.ಆರ್.ದಿನೇಶ್ ನೇತೃತ್ವದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಹುಟ್ಟು ಹಬ್ಬದ ಶುಭಶಯ ಕೋರಲಾಯಿತು.
ಕೆ.ಆರ್.ಪೇಟೆ,ಡಿ.17: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್ ನೇತೃತ್ವದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅಭಿಮಾನಿಗಳ ಬಳಗದ ಸದಸ್ಯರು ಹೆಚ್.ಡಿ.ರೇವಣ್ಣ ಅವರನ್ನು ಹೊಳೆನರಸೀಪುರದಲ್ಲಿರುವ ಅವರ ನಿವಾಸಲ್ಲಿ ಬೇಟಿ ಮಾಡಿ ಸನ್ಮಾನಿಸಿ ಗೌರವಿಸುವ ಮೂಲಕ ಹುಟ್ಟು ಹಬ್ಬದ ಶುಭಾಷಯ ಕೋರಿದರು.
ಈ ವೇಳೆ ಮಾತನಾಡಿದ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್ ಹೆಚ್.ಡಿ.ರೇವಣ್ಣ ಅವರು ಇಂದನ ಸಚಿವರಾಗಿ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ರಸ್ತೆಯ ಅಭಿವೃದ್ಧಿ ಮತ್ತು ವಿದ್ಯುತ್ ಕ್ಷೇತ್ರದ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯದಲ್ಲಿ ವಿದ್ಯುತ್ ಕ್ರಾಂತಿ ಮಾಡಿದ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲ ವಿದ್ಯುತ್ ಸಬ್ ಸ್ಟೇಷನ್‌ಗಳನ್ನು ನಿರ್ಮಾಣ ಮಾಡಿದ ಪರಿಣಾಮ ಇಂದಿಗೂ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲದಂತಾಗಿದೆ. ಹಾಗೆಯೇ ಸಾವಿರಾರು ಕಿ.ಮೀ. ರಸ್ತೆಗಳ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಇದರಿಂದಾಗಿ ಹೆಚ್.ಡಿ.ರೇವಣ್ಣ ಅವರು ರಸ್ತೆ ಮತ್ತು ವಿದ್ಯುತ್ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂಬ ಬಿರುದು ಪಡೆದಿದ್ದಾರೆ ಇಂತಹ ಅಭಿವೃದ್ದಿಯ ಹರಿಕಾರ ಹೆಚ್.ಡಿ.ರೇವಣ್ಣ ಅವರಿಗೆ ದೇವರು ಆಯಸ್ಸು ಮತ್ತು ಆರೋಗ್ಯ ಹೆಚ್ಚಿನ ಅಧಿಕಾರ ನೀಡಿ ಕಾಪಾಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಹೆಚ್.ಡಿ.ರೇವಣ್ಣ ಅಭಿಮಾನಿಗಳ ಬಳಗದ ಪದಾಧಿಕಾರಿಗಳಾದ ಕೋಟಹಳ್ಳಿ ಶ್ರೀನಿವಾಸ್, ಎ.ಸಿ.ಕಾಂತರಾಜು, ಲೋಹಿತ್, ಕಿರಣ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಚಿತ್ರಶೀರ್ಷಿಕೆ:17.ಕೆ.ಆರ್.ಪಿ-04: ಕೆ.ಆರ್.ಪೇಟೆ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಹುಟ್ಟು ಹಬ್ಬದ ಅಂಗವಾಗಿ ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್ ನೇತೃತ್ವದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅಭಿಮಾನಿಗಳ ಬಳಗದ ಸದಸ್ಯರು ಹೆಚ್.ಡಿ.ರೇವಣ್ಣ ಅವರನ್ನು ಹೊಳೆನರಸೀಪುರದಲ್ಲಿರುವ ಅವರ ನಿವಾಸಲ್ಲಿ ಬೇಟಿ ಮಾಡಿ ಸನ್ಮಾನಿಸಿ ಗೌರವಿಸುವ ಮೂಲಕ ಹುಟ್ಟು ಹಬ್ಬದ ಶುಭಾಷಯ ಕೋರಿದರು.





