--ಜಾಹೀರಾತು--

ಗುಡುಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ: ಕಾಂಗ್ರೆಸ್-6, ಜೆಡಿಎಸ್-3, ಪಕ್ಷೇತರರು 1ರಲ್ಲಿ ಗೆಲುವು, ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಾಲು

On: December 1, 2025 8:58 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಗುಡುಗನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆ: ಕಾಂಗ್ರೆಸ್-6, ಜೆಡಿಎಸ್-3, ಪಕ್ಷೇತರರು 1ರಲ್ಲಿ ಗೆಲುವು,
ಆಡಳಿತ ಚುಕ್ಕಾಣಿ ಕಾಂಗ್ರೆಸ್ ಪಾಲು

ಕೆ.ಆರ್.ಪೇಟೆ:ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಗುಡುಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಚುನಾವಣೆಯಲ್ಲಿ 6 ಮಂದಿ ಕಾಂಗ್ರೆಸ್ ಬೆಂಬಲಿತರು, 3ಮಂದಿ ಜೆಡಿಎಸ್ ಬೆಂಬಲಿತರು, ಓರ್ವರು ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ.
ಪುಷ್ಪಲತ ಮಂಜು, ಕಲಾವತಿ ಜಿ.ಕೆ.ಮಹೇಶ್, ಗೌರಮ್ಮ ಜಿ.ಪಿ.ಮಹೇಶ್, ಸುಜಾತ ಮಹೇಂದ್ರ, ಲಲಿತ ಶಂಕರಶೆಟ್ಟಿ, ಕಾಂತಾಮಣಿ ಜಿ.ಜೆ ದೇವರಾಜು, ಅಶ್ವಿನಿ ಮೋಹನ್ ಕುಮಾರ್, ಪಲ್ಲವಿ ವಸಂತಕುಮಾರ್, ಜ್ಯೋತಿ.ಜಿ.ಕೆ ಸುರೇಶ್, ಸವಿತ ರಾಜೇಶ್ ಅವರುಗಳು 2025-2030ನೇ ಸಾಲಿಗೆ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹೆಚ್.ಸಿ.ಅಂಬಿಕಾ ತಿಳಿಸಿದ್ದಾರೆ. ಸಹ ಚುನಾವಣಾಧಿಕಾರಿ ಸಂಘದ ಕಾರ್ಯದರ್ಶಿ ಸೌಮ್ಯ ಚಂದ್ರೇಶ್ ಕಾರ್ಯನಿರ್ವಹಣೆ ಮಾಡಿದರು.
ನೂತನ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರನ್ನು ಗ್ರಾಮದ ಮುಖಂಡರಾದ ರಾಯಪ್ಪ, ಶ್ರೀನಿವಾಸ್, ಕರೀಗೌಡ, ನಾಗರಾಜು, ಎಲ್.ಐ.ಸಿ. ಪಾಪಣ್ಣ, ಶ್ರೀನಿವಾಸ್, ತಿಮ್ಮಶೆಟ್ಟಿ, ರಘು, ಸತೀಶ್, ಗಜೇಂದ್ರ, ಸಾಗರ್, ಗಾರೆ ಕುಮಾರ್, ದಿಲೀಪ್, ಸಿದ್ದರಾಜು, ಚಂದನ್, ನಾಗೇಗೌಡ, ವೆಂಕಟೇಶ್, ಸ್ವಾಮೀಗೌಡ, ಪುನೀತ್ ಕುಮಾರ್, ಜಿ.ಹೆಚ್.ಬಸವರಾಜು, ಮಹಾದೇವ್, ಮಂಜೇಗೌಡ, ನಟರಾಜು, ಮಧು, ಎ.ರಾಜು ಸೇರಿದಂತೆ ಹಲವು ಮುಖಂಡರು ಅಭಿನಂದಿಸಿದ್ದಾರೆ.
ಹಿರಿಯ ಮುಖಂಡರಾದ ಜಿ.ಎ.ರಾಯಪ್ಪ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ ನಮ್ಮ ಗುಡುಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ 6ಮಂದಿ ಜಯ ಸಾಧಿಸಿದ್ದಾರೆ. ಇದಕ್ಕೆ ಸಹಕಾರ ನೀಡಿದ ಸಚಿವ ಎನ್.ಚೆಲುವರಾಯಸ್ವಾಮಿ, ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕೋಡಿಮಾರನಹಳ್ಳಿ ದೇವರಾಜು ಸೇರಿದಂತೆ ಹಲವು ಗಣ್ಯರಿಗೆ ಗ್ರಾಮದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ನಮ್ಮ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವು ಲಾಭದಾಯಕವಾಗಿ ನಡೆಯುತ್ತಿದೆ. ಕಳೆದ ಎರಡು ಸಾಲಿನಿಂದ ಆಡಳಿತ ಮಂಡಳಿ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈ ಭಾರಿ ಕೆಲವರ ಪ್ರತಿಷ್ಠೆಯಿಂದಾಗಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿಯೂ ನಮ್ಮ ಕಾಂಗ್ರೆಸ್ ಪಕ್ಷವು 10ಸ್ಥಾನಗಳ ಪೈಕಿ 6ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದ್ದೇವೆ. ಇದಕ್ಕೆ ಕಾರಣಕರ್ತರಾದ ಮತದಾರರಿಗೆ ಹಾಗೂ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಜಿ.ಎ.ರಾಯಪ್ಪ ತಿಳಿಸಿದರು.