--ಜಾಹೀರಾತು--

ಹಾಡೋನಹಳ್ಳಿ ಚೌಡೆಶ್ವರಿ ದೇವಾಲಯದ ಹುಂಡಿ ಹೊಡೆದು ಹಣ ಕಳವು

On: December 15, 2025 9:38 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಹಾಡೋನಹಳ್ಳಿ ಚೌಡೆಶ್ವರಿ ದೇವಾಲಯದ ಹುಂಡಿ ಹೊಡೆದು ಹಣ ಕಳವು

ದೊಡ್ಡಬಳ್ಳಾಪುರ:ಹಾಡೋನಹಳ್ಳಿಯ ಶ್ರೀ ಕ್ಷೇತ್ರ ಚೌಡೇಶ್ವರಿ ದೇವಸ್ಥಾನದಲ್ಲಿ ಹುಂಡಿ ಹೊಡೆದು ಹಣ ದೋಚಿರುವ ಪ್ರಕರಣ ನಡೆದಿದೆ. ಬೆಳಗ್ಗೆ ಚೌಡೇಶ್ವರಿ ದೇವಸ್ಥಾನದ ಬಳಿ ಪೂಜಾರಿ, ಗ್ರಾಮಸ್ಥರು ತೆರಳಿದಾಗ ಕಳ್ಳತನ ನಡೆದಿರುವುದು ಕಂಡುಬಂದಿದೆ.ಅಪರಿಚಿತ ಕಳ್ಳನೋರ್ವ ಚೌಡೇಶ್ವರಿ ದೇವಸ್ಥಾನದ ಬಾಗಿಲಿಗೆ ಅಳವಡಿಸಿದ್ದ ಚಿಲಕಗಳನ್ನು ಸ್ಕೂ ಡ್ರೈವ‌ರ್ ನಿಂದ ತೆಗೆದು, ಹಾರೆ ಕೋಲು ಬಳಸಿ, ಡೋರ್ ಲಾಕ್ ಮುರಿದು ದೇವಾಲಯವನ್ನು ಪ್ರವೇಶಿಸಿ, ಕಾಣಿಕೆ ಹುಂಡಿಯ ಬಾಗಿಲು ಮುರಿದು ಕಾಣಿಕೆ ಹಣ ಕದ್ದು ಪರಾರಿಯಾಗಿದ್ದಾನೆ.ಕಳ್ಳತನ ನಡೆದಿರುವ ದೃಶ್ಯಾವಳಿಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.