--ಜಾಹೀರಾತು--

ಗಣೇಶ್ ರಾವ್ದಂಪತಿಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

On: December 15, 2025 9:30 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

 

ಗಣೇಶ್ ರಾವ್ ದಂಪತಿಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆ

ಕೊಳ್ಳೇಗಾಲ: ತಾಲ್ಲೂಕಿನ ಹೊಂಡರಬಾಳು ಶಾಲೆಯನ್ನು ದತ್ತು ಪಡೆದು ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸುತ್ತ ಶಾಲೆಯಲ್ಲಿ ಇಂಗ್ಲೀಷ್ ಕಲಿಕೆ ಹಾಗೂ ಕ್ರೀಡೆ ಚಟುವಟಿಕೆ ಹಾಗೂ ವಿವಿಧ ರೀತಿಯಲ್ಲೂ ಮಕ್ಕಳಿಗೆ ತರಬೇತಿ ನೀಡಲು ಸಹಕಾರ ಕೊಡುತ್ತಿರುವ ಚಿತ್ರನಟ ಗಣೇಶ್ ರಾವ್ ದಂಪತಿಗಳಿಂದ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಯಿತು ಇದಕ್ಕೂ ಮೊದಲು ಚಿತ್ರನಟ ಗಣೇಶ್ ರಾವ್ ರವರು ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡು ಸ್ವತಃ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿಸಿ ಹೊಂಡರಬಾಳು ಶಾಲಾ ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಕಬ್ಬನ್ ಪಾರ್ಕ್, ಇಸ್ಕಾನ್ ಟೆಂಪಲ್, ಮ್ಯೂಸಿಯಂ, ಲಾಲ್ ಬ್ಯಾಗ್ ಫ್ಲವರ್ ಗಾರ್ಡನ್ ಗಳನ್ನು ತೋರಿಸಿ ಕಳುಹಿಸಿ ಕೊಟ್ಟಿದ್ದರೆ
ಬೆಂಗಳೂರಿಗೆ ಹೋದ ಹೊಂಡರಬಾಳು ಶಾಲೆ ಮಕ್ಕಳು ಇದುವರೆಗೂ ನಾವು ಬೆಂಗಳೂರಿಗೆ ಬಂದೆ ಇರಲಿಲ್ಲ ಗಣೇಶ್ ಸರ್ ರವರಿಂದ ನಾವು ಬೆಂಗಳೂರನ್ನು ನೋಡಿ ಕುಷಿ ಆಯಿತು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ,

ತದ ನಂತರ ಚಿತ್ರನಟ ಗಣೇಶ್ ರಾವ್ ಕೇಸರ್ಕರ್ ರವರ ಪತ್ನಿಯವರಾದ ಶ್ರೀಮತಿ ರೇಖಾರವರು ಹೊಲಿಸಿದ 99 ಬಿಳಿ ಸಮವಸ್ತ್ರಗಳನ್ನು, ತಾಲ್ಲೂಕಿನ ಹೊಂಡರಬಾಳು ಗ್ರಾಮದ, ಮಾಜಿ ಸೇನಾಧಿಕಾರಿ ದಿ. ಆರ್ ಕೃಷ್ಣರಾವ್ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ವಿತರಿಸಿದರು

ಇದೆ ವೇಳೆ ಅವರು ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಪ್ರೋತ್ಸಾಹವನ್ನು ಕೊಡುವ ಸಲುವಾಗಿ ಮಕ್ಕಳಿಗೆ ಸಮವಸ್ತ್ರಗಳನ್ನು ಕೊಡಿಸಲಾಗಿದೆ
ಕೆಲವರು ಸಮವಸ್ತ್ರಗಳನ್ನು ಕೊಡುತ್ತಾರೆ ಆದರೆ ಅವುಗಳನ್ನು ಹೊಲಿಸಿ ಕೊಳ್ಳಲು ಮಕ್ಕಳಿಗೆ ಸಾಧ್ಯವಾಗದ ಕಾರಣ
ನಾವೆ ಮಕ್ಕಳ ಅಳತೆಗೆ ಅನುಗುಣವಾಗಿ ಸಮವಸ್ತ್ರಗಳನ್ನು ಹೊಲಿಸಿ ಕೊಟ್ಟಿದ್ದೇವೆ, ಇದರಿಂದ ಮಕ್ಕಳಿಗೆ ಶಿಕ್ಷಣದ ಕಡೆಗೆ ಹೆಚ್ಚು ಆಶಕ್ತಿ ಉಂಟಾಗುತ್ತದೆ ಹಾಗೂ ಇನ್ನಷ್ಟು ಮಕ್ಕಳು ಸರ್ಕಾರಿ ಶಾಲೆಗಳಿಗೆ ಸೇರಲು ಅವಕಾಶಗಳು ಆಗುತ್ತವೆ, ಆದ್ದರಿಂದ ನಾವು ನಮ್ಮೂರ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು ಆ ನಿಟ್ಟಿನಲ್ಲಿ ನಮ್ಮ ಕೈಯಲ್ಲಿ ಆದಷ್ಟು ಸೌಲಭ್ಯಗಳನ್ನು ಒದಗಿಸಿಕೊಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ
ಶ್ರೀ ಗಣೇಶ್ ರಾವ್ ಕೇಸರ್ಕರ್ ಹಾಗು ರೇಖಾ ಗಣೇಶ್ ರಾವ್. ಶಾಲೆ ಮುಖ್ಯ ಶಿಕ್ಷಕ ಶ್ರೀ ವಾಸು, ಮಲ್ಲೇಶ್ ಹಳ್ಳಿಕಾರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುಷ್ಪ, ಗುರುಸ್ವಾಮಿ, ಪ್ರಜ್ವಲ್.. ಮತ್ತೆ ಇತರರು ಇದ್ದರು.